52 ಎಸೆತ, 28 ಸಿಕ್ಸರ್​, 204 ರನ್​... ವೈಭವ್ ಆರ್ಭಟದ​ ಬಗ್ಗೆ ಅಖ್ತರ್​ ಆಡಿದ ಮಾತುಗಳಿಗೆ ತಲೆಬಾಗಿದ ಕ್ರೀಡಾ ಜಗತ್ತು! Vaibhav Suryavanshi

ದೋಹಾದಲ್ಲಿ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಕಲೆಹಾಕಿತ್ತು. 250 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 'ಎ' ತಂಡದ ಪರ ಅಭಿಷೇಕ್ ಶರ್ಮಾ ಜತೆ ಇನ್ನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಆರಂಭದಿಂದಲೇ ಆರ್ಭಟಿಸಿದರು.
Vaibhav Suryavanshi
ಟೀಮ್​ ಇಂಡಿಯಾದ ಯುವ ಬ್ಯಾಟರ್​ ವೈಭವ್​ ಸೂರ್ಯವಂಶಿ ಹಾಗೂ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್
Published on: 

ದೋಹಾ: ಕತಾರ್​ನ ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್- 2026ರ ಟೂರ್ನಿಯಲ್ಲಿ ಕೇವಲ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ( Vaibhav Suryavanshi ) ಅವರ ಅಬ್ಬರದ ದ್ವಿಶತಕ ಕಂಡು ಇಡೀ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿದೆ. ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಸಿಡಿಸಿದ ಸಿಕ್ಸರ್​ ಸುನಾಮಿಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ತಲೆದೂಗಿದ್ದು, ಈ ಯುವ ಆಟಗಾರನನ್ನು 'ಬೆಲೆಕಟ್ಟಲಾಗದ ವಜ್ರ' ಎಂದು ಬಣ್ಣಿಸಿದ್ದಾರೆ.

ದೋಹಾದಲ್ಲಿ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಕಲೆಹಾಕಿತ್ತು. 250 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 'ಎ' ತಂಡದ ಪರ ಅಭಿಷೇಕ್ ಶರ್ಮಾ ಜತೆ ಇನ್ನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಆರಂಭದಿಂದಲೇ ಆರ್ಭಟಿಸಿದರು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್​, ಬಳಿಕ 28 ಎಸೆತಗಳಲ್ಲಿ ಶತಕ ಹಾಗೂ ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ದ್ವಿಶತಕದ ವಿಶ್ವದಾಖಲೆ ನಿರ್ಮಿಸಿದರು.

Also Read
ಕತಾರ್​ನಲ್ಲಿ ವೈಭವ್ ರುದ್ರತಾಂಡವ: ವಂಡರ್​ ಕಿಡ್​ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ UAE ನಾಯಕ ಬಾಸಿಲ್ ಹಮೀದ್​! Vaibhav Suryavanshi
Vaibhav Suryavanshi

ತಮ್ಮ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿದ ವೈಭವ್, 384.90 ಸ್ಟ್ರೈಕ್ ರೇಟ್‌ನಲ್ಲಿ 53 ಎಸೆತಗಳಿಗೆ 204 ರನ್ ಗಳಿಸಿ ಔಟಾದರು. ವೈಭವ್ ಅವರ ಈ ಅಸಾಮಾನ್ಯ ಬ್ಯಾಟಿಂಗ್ ನೆರವಿನಿಂದ ಭಾರತ 'ಎ' ತಂಡವು ಕೇವಲ 14.2 ಓವರ್‌ಗಳಲ್ಲಿ ಗುರಿ ತಲುಪಿ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ವೈಭವ್ ಸೂರ್ಯವಂಶಿ ಅವರ ಈ ವಿನಾಶಕಾರಿ ಬ್ಯಾಟಿಂಗ್ ಕಂಡು ಬೆರಗಾಗಿರುವ ಶೋಯೆಬ್ ಅಖ್ತರ್ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. "ವೈಭವ್ ಬ್ಯಾಟಿಂಗ್ ನೋಡಿದ ಬಳಿಕ ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ. ಕೇವಲ 52 ಎಸೆತಗಳಲ್ಲಿ 28 ಸಿಕ್ಸರ್ ಮತ್ತು 7 ಬೌಂಡರಿಗಳೊಂದಿಗೆ ದ್ವಿಶತಕ ಬಾರಿಸುವುದು ನಿಜಕ್ಕೂ ನಂಬಲಾಗದ ಸಂಗತಿ ಎಂದು ಅಖ್ತರ್​ ಕೊಂಡಾಡಿದರು.

ಏಕದಿನ ಮಾದರಿಯಲ್ಲಿ ಇಂತಹ ಬ್ಯಾಟಿಂಗ್ ಅನ್ನು ನಾನು ಊಹಿಸಿಯೂ ಇರಲಿಲ್ಲ. ನನ್ನ ಇಡೀ ಕ್ರಿಕೆಟ್ ವೃತ್ತಿಜೀವನದಲ್ಲಿ ಕ್ಲಬ್ ಕ್ರಿಕೆಟ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ವರೆಗೆ ಇಂತಹ ಆಟಗಾರನನ್ನು ನಾನು ನೋಡಿಲ್ಲ, ಮುಂದೆಯೂ ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಅಖ್ತರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Also Read
ಪಂದ್ಯಕ್ಕೂ ಮುನ್ನ ಆ 'ನಾಲ್ವರು' ಆಡಿದ ಮಾತೇ ಸೂರ್ಯವಂಶಿ 'ಸುನಾಮಿ'ಗೆ ಕಾರಣವಾಯ್ತಂತೆ! ಅದರಲ್ಲೂ ಯುವರಾಜ್ ಸಿಂಗ್ ಕೊಟ್ಟ ಸಲಹೆ ಏನು? | Vaibhav Sooryavanshi
Vaibhav Suryavanshi

ಮುಂದುವರಿದು ಮಾತನಾಡಿದ ಅಖ್ತರ್, ವೈಭವ್ ಸೂರ್ಯವಂಶಿ ನಿಜವಾಗಿಯೂ ಅದ್ಭುತ ಪ್ರತಿಭೆ, ಅವರು ಭಾರತೀಯ ಕ್ರಿಕೆಟ್‌ಗೆ ಸಿಕ್ಕಿರುವ ಬೆಲೆಕಟ್ಟಲಾಗದ ವಜ್ರ ಮತ್ತು ದೊಡ್ಡ ಆಸ್ತಿ. ಮುಂದಿನ ದಿನಗಳಲ್ಲಿ ಅವರು ಏಕಾಂಗಿಯಾಗಿ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಡಲಿದ್ದಾರೆ ಎಂದು ಅಖ್ತರ್​ ಭವಿಷ್ಯ ನುಡಿದಿದ್ದಾರೆ.

ಬಿಸಿಸಿಐ ಈ ಯುವ ಪ್ರತಿಭೆಯನ್ನು ಸರಿಯಾಗಿ ಪೋಷಿಸಬೇಕು ಮತ್ತು ಹಂತ ಹಂತವಾಗಿ ಭಾರತೀಯ ಹಿರಿಯರ ತಂಡದಲ್ಲಿ ಅವಕಾಶ ನೀಡಬೇಕು. ಅವರು ನಿಜವಾದ 'ಮ್ಯಾಚ್ ವಿನ್ನರ್' ಆಗಿದ್ದು, ಅವರ ಬ್ಯಾಟಿಂಗ್ ಕಂಡು ನಾನು ಸಂಪೂರ್ಣವಾಗಿ ಮಂತ್ರಮುಗ್ಧನಾಗಿದ್ದೇನೆ" ಎಂದು ಮುಕ್ತಕಂಠದಿಂದ ಅಖ್ತರ್​ ಶ್ಲಾಘಿಸಿದ್ದಾರೆ, (ಏಜೆನ್ಸೀಸ್​).