ನಾನಿನ್ನು ಪೀಕ್​ನಲ್ಲಿದ್ದೇನೆ, ಆದ್ರೆ!...ಟೀಮ್​ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಶಮಿ ಅಚ್ಚರಿಯ ಹೇಳಿಕೆ...ವಿಡಿಯೋ ವೈರಲ್​! | Mohammed Shami

Mohammed Shami: ನ್ಯೂಜಿಲೆಂಡ್ ಪ್ರವಾಸಕ್ಕೆ ಅವಕಾಶ ಪಡೆಯಲು ವಿಫಲರಾಗಿರುವ, ಸರ್ವಿಸಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ, ತಮ್ಮ ಫಿಟ್‌ನೆಸ್ ಹಾಗೂ ಬೌಲಿಂಗ್ ವರ್ಕ್‌ಲೋಡ್ ಕುರಿತು ಹೊರಗಿನವರ ಟೀಕೆಗಳಿಗೆ ನೇರ ಹಾಗೂ ಖಡಕ್ ಪ್ರತಿಕ್ರಿಯೆ ನೀಡಿದ್ದು, ತಾನಿನ್ನೂ ತಮ್ಮ ವೃತ್ತಿಜೀವನದ ಉತ್ತಮ ಫಾರ್ಮ್‌ನಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನಾನಿನ್ನು ಪೀಕ್​ನಲ್ಲಿದ್ದೇನೆ, ಆದ್ರೆ!...ಟೀಮ್​ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಶಮಿ ಅಚ್ಚರಿಯ ಹೇಳಿಕೆ...ವಿಡಿಯೋ ವೈರಲ್​! | Mohammed Shami
Published on: 

Mohammed Shami: ನ್ಯೂಜಿಲೆಂಡ್ ಪ್ರವಾಸಕ್ಕೆ ಅವಕಾಶ ಪಡೆಯಲು ವಿಫಲರಾಗಿರುವ, ಸರ್ವಿಸಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ, ತಮ್ಮ ಫಿಟ್‌ನೆಸ್ ಹಾಗೂ ಬೌಲಿಂಗ್ ವರ್ಕ್‌ಲೋಡ್ ಕುರಿತು ಹೊರಗಿನವರ ಟೀಕೆಗಳಿಗೆ ನೇರ ಹಾಗೂ ಖಡಕ್ ಪ್ರತಿಕ್ರಿಯೆ ನೀಡಿದ್ದು, ತಾನಿನ್ನೂ ತಮ್ಮ ವೃತ್ತಿಜೀವನದ ಉತ್ತಮ ಫಾರ್ಮ್‌ನಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಮಿ, ದೇಶೀಯ ಕ್ರಿಕೆಟ್‌ನಲ್ಲಿ ಕೇವಲ ಮೂರು ಓವರ್‌ಗಳ ಸಣ್ಣ ಸ್ಪೆಲ್ ಎಸೆದು ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಟೀಕೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೊರಗಿನಿಂದ ಕುಳಿತುಕೊಂಡು ಯಾರಾದರೂ ನಾನು ಎಷ್ಟು ಓವರ್‌ಗಳನ್ನು ಬೌಲಿಂಗ್ ಮಾಡಬೇಕು ಎಂದು ಹೇಗೆ ನಿರ್ಧರಿಸಲು ಸಾಧ್ಯ..? ಅದು ಸಂಪೂರ್ಣವಾಗಿ ತಂಡದ ಅಗತ್ಯತೆಗಳು, ಮೈದಾನದ ಪಿಚ್ ಹಾಗೂ ಪಂದ್ಯದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ನಾನು ನಿರಂತರವಾಗಿ ಓವರ್ ಮೇಲೆ ಓವರ್ ಎಸೆಯುತ್ತಲೇ ಇರಬೇಕು ಎಂದೇನಿಲ್ಲ ಎಂದು ಖಡಕ್​ ಪ್ರತಿಕ್ರಿಯೆ ನೀಡಿದರು.

ಪಿಚ್‌ನ ಸ್ಥಿತಿಯ ಬಗ್ಗೆ ವಿವರಿಸಿದ ಶಮಿ, ಇಂತಹ ವಿಕೆಟ್‌ನಲ್ಲಿ ಒಬ್ಬ ವೇಗದ ಬೌಲರ್ ಐದು ಅಥವಾ ಹತ್ತು ಓವರ್‌ಗಳನ್ನು ನಿರಂತರವಾಗಿ ಬೌಲಿಂಗ್ ಮಾಡಬೇಕು ಎಂದು ಇವರೆಲ್ಲಾ ಯೋಚನೆಯಾದರು ಹೇಗೆ ಮಾಡುತ್ತಾರೆ..? ಬ್ಯಾಟರ್‌ಗಳಿಗೆ ಪಿಚ್ ನೆರವಾಗದಿದ್ದರೆ ಪಾಸ್ಟ್​ ಬೌಲರ್​ ಬೌಲಿಂಗ್ ಮಾಡುತ್ತಾನೆ, ಒಂದು ವೇಳೆ ಸ್ಪಿನ್ನರ್‌ಗಳು ವಿಕೆಟ್ ಪಡೆಯಬಹುದು ಎಂದೆನಿಸಿದರೆ, ಅವರು ಬೌಲಿಂಗ್ ಮಾಡುತ್ತಾರೆ. ಇದು ಸಂಪೂರ್ಣವಾಗಿ ಪಂದ್ಯದ ಪರಿಸ್ಥಿತಿ ಮತ್ತು ನಾಯಕನ ನಿರ್ಧಾರಕ್ಕೆ ಬಿಟ್ಟದ್ದು ಎಂದರು. ಅಲ್ಲದೆ, ಅಂದಿನ ದಿನ ತಾನು ನೆಟ್ಸ್‌ನಲ್ಲಿ ಒಂದೂವರೆ ಗಂಟೆಗಳ ಕಾಲ ನಿರಂತರವಾಗಿ ಬೌಲಿಂಗ್ ಮಾಡಿದ್ದೇನೆ ಮತ್ತು ಯಾವುದೇ ದೈಹಿಕ ಸಮಸ್ಯೆ ಕಾಡಲಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.

ಇದನ್ನೂ ಓದಿ:ಯುಪಿ ಚುನಾವಣೆ ಕಾವೇರುತ್ತಿದ್ದಂತೆ ಆಂತರಿಕ ಕಲಹ: ಬಿಜೆಪಿ ಮಿತ್ರಪಕ್ಷಕ್ಕೆ ಸಾಮೂಹಿಕ ರಾಜೀನಾಮೆಯ ಶಾಕ್! | SBSP Party

ನಾನಿನ್ನೂ ನನ್ನ ಪೀಕ್‌ನಲ್ಲಿದ್ದೇನೆ!

ವಯಸ್ಸು ಹಾಗೂ ಫಿಟ್‌ನೆಸ್ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ 36 ವರ್ಷದ ಶಮಿ, ನಾನು ಇಂದಿಗೂ ನನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದೇನೆ, ಇಲ್ಲಿ ಸುತ್ತಿಬಳೆಸಿ ಮಾತನಾಡುವ ಯಾವುದೇ ಅಗತ್ಯವಿಲ್ಲ. ನಾನು ಮೊದಲು ಹೇಗಿದ್ದೇನೆಯೋ, ಈಗಲೂ ಹಾಗೆಯೇ ನನ್ನ ಅತ್ಯುತ್ತಮ ಫಾರ್ಮ್‌ನಲ್ಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 17.3 ಓವರ್‌ಗಳನ್ನು ಎಸೆದು 9 ಮೇಡನ್ ಸಹಿತ 30 ರನ್ ನೀಡಿ 4 ವಿಕೆಟ್ ಕಬಳಿಸಿದ್ದ ಶಮಿ, ಸರ್ವಿಸಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಆಡಲಿಲ್ಲ. ಆಕಾಶ್ ದೀಪ್ ಮತ್ತು ಮುಖೇಶ್ ಕುಮಾರ್ ಅವರು ಭಾರತ ಎ ತಂಡದಲ್ಲಿರಿದ್ದರೂ ಶಮಿ ವಿಶ್ರಾಂತಿ ಪಡೆದದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಮಾತನಾಡಿದ ಬಂಗಾಳ ತಂಡದ ಮುಖ್ಯ ಕೋಚ್ ಲಕ್ಷ್ಮಿ ರತನ್ ಶುಕ್ಲಾ, ಶಮಿ ಸಂಪೂರ್ಣ ಫಿಟ್ ಆಗಿದ್ದಾರೆ ಮತ್ತು ಹೆಚ್ಚಿನ ವರ್ಕ್‌ಲೋಡ್ ಕಾರಣದಿಂದ ಸ್ವತಃ ಅವರೇ ವಿಶ್ರಾಂತಿ ಕೋರಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಮಿ, ಪಾಲಮ್ ಮೈದಾನದ ಪಿಚ್ ಹೇಗಿತ್ತು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಅಂತಹ ಕಠಿಣ ವಿಕೆಟ್‌ನಲ್ಲಿ ನಾನು 2-4 ಓವರ್ ಆಡುವುದರಲ್ಲಿ ಯಾವುದೇ ಅರ್ಥವಿರಲಿಲ್ಲ. ಅದಕ್ಕಿಂತ ಯುವ ಆಟಗಾರರಿಗೆ ಅವಕಾಶ ನೀಡುವುದು ಉತ್ತಮ. ಅವರು ಎಷ್ಟು ಹೆಚ್ಚು ಆಡುತ್ತಾರೋ, ಅಷ್ಟು ಹೆಚ್ಚು ಅನುಭವ ಪಡೆಯುತ್ತಾರೆ. ತಂಡಕ್ಕೆ ನನ್ನ ಅವಶ್ಯಕತೆ ಇದ್ದಾಗ ಮಾತ್ರ ನಾನು ಆಡುತ್ತೇನೆ. ಆದರೆ ನಾನೊಬ್ಬ ಬ್ಯಾಟರ್ ಆಗಿ ಕಣಕ್ಕಿಳಿಯಲು ಸಾಧ್ಯವಿಲ್ಲವಲ್ಲ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

Also Read
ಟೀಮ್​ ಇಂಡಿಯಾ ಪರ ಆಡೋಕೆ ಇನ್ಮುಂದೆ ಚಾನ್ಸ್ ಸಿಗಲಿಲ್ಲ ಅಂದ್ರೆ....ಬಿಸಿಸಿಐ ನಿರ್ಲಕ್ಷ್ಯದ ಬೆನ್ನಲ್ಲೇ ಶಮಿ ಸ್ಫೋಟಕ ಹೇಳಿಕೆ! | Mohammed Shami
ನಾನಿನ್ನು ಪೀಕ್​ನಲ್ಲಿದ್ದೇನೆ, ಆದ್ರೆ!...ಟೀಮ್​ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಶಮಿ ಅಚ್ಚರಿಯ ಹೇಳಿಕೆ...ವಿಡಿಯೋ ವೈರಲ್​! | Mohammed Shami

ಇದು ನಿರಾಶೆಯ ಪ್ರಶ್ನೆಯಲ್ಲ!

ನ್ಯೂಜಿಲೆಂಡ್ ಸರಣಿಯ ಭಾರತ ತಂಡದಿಂದ ಕೈಬಿಟ್ಟಿರುವುದು ನಿರಾಶೆ ಮೂಡಿಸಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಿರಿಯ ವೇಗಿ, ಇದು ನಿರಾಶೆಯ ಪ್ರಶ್ನೆಯಲ್ಲ. ಕಳೆದ ಸೀಸನ್‌ನಲ್ಲೂ ನಾನು ಎಲ್ಲಾ ಪಂದ್ಯಗಳನ್ನು ಆಡಿದ್ದೇನೆ. ಮುಂಬರುವ ಪಂದ್ಯಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಡುವುದು ನನ್ನ ಗುರಿ. ಯಾರಿಗೆ ಯಾವಾಗ ಅವಕಾಶ ಸಿಗುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ದೇಶಿಯ ಟೂರ್ನಿ ಆಡುವುದರಿಂದ ಐಪಿಎಲ್ ತಯಾರಿಗೂ ಹೆಚ್ಚು ಅನುಕೂಲವಾಗುತ್ತದೆ, ಗುಣಮಟ್ಟ ಕಾಯ್ದುಕೊಳ್ಳಲು ಹೆಚ್ಚು ಪಂದ್ಯಗಳನ್ನು ಆಡುವುದು ಮುಖ್ಯ ಎಂದರು.

ಭುವಿ ಆಯ್ಕೆಯ ಬಗ್ಗೆ ಹೇಳಿದ್ದೇನು..?

ರಾಷ್ಟ್ರೀಯ ಆಯ್ಕೆಗಾರರೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಮಿ, ನಾನು ಈಗ ತಂಡದ ಜತೆ ಇಲ್ಲ, ಒಪ್ಪಂದದಲ್ಲೂ ಇಲ್ಲ. ಹಾಗಾಗಿ ಯಾರೂ ನನ್ನೊಂದಿಗೆ ಮಾತನಾಡಲು ಕಾರಣವಿಲ್ಲ ಎಂದರು. ಭುವನೇಶ್ವರ ಕುಮಾರ್ ಅವರ ತಂಡಕ್ಕೆ ಮರಳಿದ್ದನ್ನು ಸ್ವಾಗತಿಸಿದ ಅವರು, ಮುಂಬರುವ ಏಕದಿನ ವಿಶ್ವಕಪ್ ಬಗ್ಗೆ ಈಗಿನಿಂದಲೇ ಯೋಚಿಸುತ್ತಿಲ್ಲ, ಆದರೆ ಭಾರತ ತಂಡಕ್ಕಾಗಿ ಆಡುವ ಭರವಸೆಯನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಹೇಳಿದರು. ಬಂಗಾಳ ತಂಡವೇ ತಮಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು, ಕ್ರಿಕೆಟ್ ವೃತ್ತಿಜೀವನ ಮುಗಿಯುವುದೂ ಇದೇ ತಂಡದೊಂದಿಗೆ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net