More

    ಕ್ರೀಡೆಯಿಂದ ಒತ್ತಡ ನಿವಾರಣೆ ಸಾಧ್ಯ

    ಅಳವಂಡಿ: ದೇಹ ಹಾಗೂ ಮನಸನ್ನು ಸದೃಢಗೊಳಿಸುವಲ್ಲಿ ಕ್ರೀಡೆ ಸಹಕಾರಿಯಾಗಿದೆ ಎಂದು ಜಾಂಬಿಯಾ ಇಂಜನೀಯರ ನಾರಾಯಣಪ್ಪ ನಾಗರಡ್ಡಿ ಹೇಳಿದರು.

    ಇದನ್ನೂ ಓದಿ: ಮಕ್ಕಳ ಮನಸ್ಸು ಅರಳಿಸಲು ಕ್ರೀಡೆ ಪೂರಕ

    ಸಮೀಪದ ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯರ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಕ್ರಿಕೆಟ್ ಹಬ್ಬಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.
    ಬದುಕು ರೂಪಿಸಿಕೊಳ್ಳುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ.

    ಕ್ರೀಡೆಯಿಂದ ದೈನಂದಿನ ಒತ್ತಡಗಳ ನಿವಾರಣೆ ಜತೆಗೆ ಸಾಮೂಹಿಕ ಒಗ್ಗಟ್ಟಿನ ಭಾವನೆ ಮೂಡಲಿದೆ. ಗ್ರಾಮದಲ್ಲಿ ಆಯೋಜಿಸಿರುವ ಹಿರಿಯರ ಕ್ರಿಕೆಟ್‌ನಿಂದ ಸಂಗ್ರಹವಾಗುವ ಹಣವನ್ನು ಗ್ರಾಮದಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಉತ್ತೇಜನಕ್ಕೆ ಬಳಸಲಾಗುವುದು.

    ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಗೌರವಿಸುವ ಮೂಲಕ ಓದಿಗೆ ಪ್ರೇರೆಪಿಸಲಾಗುವುದು. ಬೇರೆ ಮಕ್ಕಳ ಮುಂದಿನ ವರ್ಷ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಆತ್ಮ ವಿಶ್ವಾಸ ಮೂಡುವಂತೆ ಮಾಡವುದು ಇದರ ಉದ್ದೇಶವಾಗಿದೆ ಎಂದರು.

    ಪಿಎಸ್‌ಐ ನಾಗಪ್ಪ ಮಾತನಾಡಿ, ಹಿರಿಯರು ಕ್ರಿಕೆಟ್ ಆಟದಿಂದ ಸಂಗ್ರಹವಾದ ಹಣವನ್ನು ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪಾಲಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸಬೇಕು.

    ಮಕ್ಕಳು ಸಹ ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಪ್ರಗತಿ ಹೊಂದಿದಾಗ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಮೋಬೈಲ್, ಟಿವಿ, ಹಾಗೂ ದುಶ್ಚಟಗಳಿಗೆ ದಾಸರಾಗದೆ ಓದಿಗೆ ಪ್ರಾಶಸ್ತ ನೀಡಿ. 25 ವರ್ಷದ ಓದು ನಿಮಗೆ 75 ವರ್ಷ ಜೀವನದ ಹಾದಿ ತೋರಿಸಲಿದೆ ಎಂದರು.

    ಪ್ರಮುಖರಾದ ವೀರೇಶ ಸಜ್ಜನ, ಶಂಕರ ಮಾಳೆಕೊಪ್ಪ, ಉಮೇಶ ಮಾಳೆಕೊಪ್ಪ, ಗುರುಬಸವರಾಜ, ರಾಘವೇಂದ್ರ ಜೋಶಿ, ವಿರುಪಾಕ್ಷಿ ಬೆಟಗೇರಿ, ಬಸವರಾಜ ಚಿಂಚಲಿ, ಮಂಜು ಬಿಸರಳ್ಳಿ, ವೀರೇಶ, ಮಂಜು ಬಡಿಗೇರ, ಗವಿಸಿದ್ದಪ್ಪ ಭೈರಾಪುರ, ಮಲ್ಲಯ್ಯ,

    ಸಂಜು, ಗುರಯ್ಯ, ಅಂದಾನಸ್ವಾಮಿ, ಜಗದೀಶ, ಹನುಮರಡ್ಡಿ, ಸುನೀಲ, ವೆಂಕಟೇಶ, ಅಂದಪ್ಪ, ವಿಜಯ, ಅಜಿತ, ಪ್ರಶಾಂತ, ಮಲ್ಲಪ್ಪ, ಶೇಖಣ್ಣ, ಶ್ರೀಕಾಂತ, ಬಸವರಾಜ, ನವೀನಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts