More

    ಹಾಳಾದ ರಸ್ತೆ, ತಪ್ಪದ ಅವಸ್ಥೆ

    ರಾಯಬಾಗ: ಪಟ್ಟಣದ ಹೊರವಲಯದಿಂದ ನಸಲಾಪುರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 5-6 ಕಿ.ಮೀ ರಸ್ತೆಯಲ್ಲಿ ಭಾರಿ ಪ್ರಮಾಣದ ತಗ್ಗು ಗುಂಡಿ ಬಿದ್ದು ರಸ್ತೆ ಹದಗೆಟ್ಟಿದೆ. ಪರಿಣಾಮ ಸಾರ್ವಜನಿಕರು ಮತ್ತು ವಾಹನ ಸವಾರರು ಸಂಚಾರ ಮಾಡಲು ನಿತ್ಯ ಹರಸಾಹಸ ಪಡುತ್ತಿದ್ದಾರೆ.

    ರಾಯಬಾಗ-ಅಂಕಲಿ ಮುಖ್ಯ ರಸ್ತೆಯು ನೆರೆಯ ಚಿಕ್ಕೋಡಿ, ಕಾಗವಾಡ, ಅಥಣಿ ಪಟ್ಟಣ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ನಿತ್ಯ ಸಾವಿರಾರು ವಾಹನ ಸವಾರರು, ಪ್ರಯಾಣಿಕರು ಈ ಮಾರ್ಗದ ಮೂಲಕ ಸಂಚರಿಸುತ್ತವೆ.

    ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ರಸ್ತೆಯನ್ನು ಅನೇಕ ಬಾರಿ ಡಾಂಬರೀಕರಣ ಮಾಡಲಾಗಿದೆ. ಕಾಮಗಾರಿ ಮಾಡಿದ ಕೆಲ ತಿಂಗಳಲ್ಲಿ ರಸ್ತೆ ಹದಗೆಟ್ಟು ರಸ್ತೆಯಲ್ಲಿ ಆಳವಾದ ತಗ್ಗು-ಗುಂಡಿ ಬಿದ್ದು ಸಂಚಾರ ಮಾಡಲು ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಕಳಪೆ ಕಾಮಗಾರಿಯಿಂದ ಈ ರಸ್ತೆ ಪದೆ ಪದೇ ಹಾಳಾಗುತ್ತಿದೆ ಎಂಬುದು ಸಾರ್ವಜನಿಕರು ಹಾಗೂ ವಾಹನ ಸವಾರರ ಆರೋಪವಾಗಿದೆ, ಅಧಿಕಾರಿಗಳು, ಜನಪ್ರತಿನಿಧಿಗಳು ಈ ರಸ್ತೆ ಮೂಲಕ ಸಂಚರಿಸಿದರೂ, ಕಂಡೂ ಕಾಣದಂತೆ ಜಾಣ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೈಕ್, ಸಾರಿಗೆ ಸಂಸ್ಥೆ ಹಾಗೂ ಖಾಸಗಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಸರ್ಕಸ್ ಮಾಡುತ್ತಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಹಲವು ಅಪಘಾತಗಳು ಸಂಭವಿಸಿವೆ. ಮಳೆಗಾಲದಲ್ಲಿ ಅನೇಕ ವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಆಸ್ಪತ್ರೆ ಸೇರಿದ ಉಹಾರಣೆಗಳಿವೆ. ಇನ್ನಾದರೂ ಅಧಿಕಾರಿಗಳು ನಿರ್ಲಕ್ಷೃ ಬಿಟ್ಟು ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಹಾಗೂ ಸವಾರರು ಒತ್ತಾಯಿಸಿದ್ದಾರೆ.

    ರಾಯಬಾಗ-ಅಂಕಲಿ ರಸ್ತೆ ಸುಧಾರಿಸಲು ಈಗಾಗಲೇ ಸರ್ಕರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಾರ ಅನುದಾನ ಬರಲಿದ್ದು, ಶೀಘ್ರ ಕಾಮಗಾರಿ ಕಾರ್ಯ ಪ್ರಾರಂಭಿಸಲಾಗುವುದು.
    | ಆರ್.ಕೆ.ನಿಂಗನೂರೆ ಎಇಇ ಪಿಡಬ್ಲ್ಯುಡಿ ರಾಯಬಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts