More

    ಆಸ್ಟ್ರೇಲಿಯಾ ಎದುರು ಚೊಚ್ಚಲ ಶತಕ ಸಿಡಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಋತುರಾಜ್ ಗಾಯಕ್ವಾಡ್

    ಗುವಾಹಟಿ: ಉಪನಾಯಕ ಋತುರಾಜ್ ಗಾಯಕ್ವಾಡ್ (123*, 57 ಎಸೆತ, 13 ಬೌಂಡರಿ, 7 ಸಿಕ್ಸರ್) ಅಬ್ಬರದ ಶತಕದ ನಡುವೆಯೂ ಭಾರತ ತಂಡ ಮೂರನೇ ಟಿ20ಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 5 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್ (104*ರನ್, 48 ಎಸೆತ, 8 ಬೌಂಡರಿ, 8 ಸಿಕ್ಸರ್) ಶತಕದ ಸಾಹಸದಿಂದ ಸೂರ್ಯಕುಮಾರ್ ಬಳಗಕ್ಕೆ ಹ್ಯಾಟ್ರಿಕ್ ಗೆಲುವು ತಪ್ಪಿಸಿದ ಆಸೀಸ್, ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿ 5 ಪಂದ್ಯಗಳ ಸರಣಿಯನ್ನು ಜೀವಂತವಿರಿಸಿದೆ.

    https://x.com/CricCrazyJohns/status/1729553647472681029?s=20

    ಬರ್ಸಾಪುರ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಘಾತದ ಬಳಿಕ, ಋತುರಾಜ್ – ತಿಲಕ್ ವರ್ಮ (31*) ಜೋಡಿ 4ನೇ ವಿಕೆಟ್‌ಗೆ ಕಲೆಹಾಕಿದ 149 ರನ್‌ಗಳ ಜತೆಯಾಟದ ಬಲದಿಂದ ಭಾರತ 3 ವಿಕೆಟ್‌ಗೆ 222 ರನ್ ಪೇರಿಸಿತು. ಪ್ರತಿಯಾಗಿ ಆಲ್ರೌಂಡರ್ ಮ್ಯಾಕ್ಸ್‌ವೆಲ್ ಶತಕದ ಸಾಹಸದಿಂದ ಆಸೀಸ್ ತಂಡ ಭರ್ತಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 225 ರನ್‌ಗಳಿಸಿ ಜದ ನಗೆ ಬೀರಿತು.

    ಆರ್ಭಟಿಸಿದ ಋತುರಾಜ್: ಮೊದಲ 22 ರನ್‌ಗಳಿಸಲು ಅಷ್ಟೇ ಎಸೆತ ತೆಗೆದುಕೊಂಡಿದ್ದ ಋತುರಾಜ್, ಬಳಿಕ 35 ಎಸೆತಗಳಲ್ಲಿ 101 ರನ್ ಕಸಿದರು. ಸೂರ್ಯಕುಮಾರ್ ನಿರ್ಗಮನದ ಬಳಿಕ ಅಬ್ಬರಿಸಿದ ಋತುರಾಜ್ ಆಸೀಸ್ ಬೌಲರ್‌ಗಳನ್ನು ಕಾಡಿದರು. ತಿಲಕ್ ವರ್ಮ (31*) ಹಾಗೂ ಋತುರಾಜ್ ಜೋಡಿ 4ನೇ ವಿಕೆಟ್‌ಗೆ 59 ಎಸೆತಗಳಲ್ಲಿ ಬರೋಬ್ಬರಿ 149 ರನ್ ಕಸಿಯಿತು. ಪಂದ್ಯದ 12ನೇ ಓವರ್ ಬಳಿಕ ರನ್‌ಗಳಿಕೆಗೆ ಚುರುಕು ಮುಟ್ಟಿಸಿದ ಋತುರಾಜ್, 18ನೇ ಓವರ್‌ನಲ್ಲಿ 3 ಸಿಕ್ಸರ್, ಬೌಂಡರಿ ಸಹಿತ 25 ರನ್ ಚಚ್ಚಿದರು. ಇದರೊಂದಿಗೆ ಶತಕ ಸನಿಹ ತಲುಪಿದರು. ಮ್ಯಾಕ್ಸ್‌ವೆಲ್ ಎಸೆದ ಇನಿಂಗ್ಸ್‌ನ ಕೊನೇ ಓವರ್‌ನ ಮೊದಲ ಎಸೆತವನ್ನು ಮಿಡ್ ವಿಕೆಟ್‌ನಿಂದ ಸಿಕ್ಸರ್‌ಗಟ್ಟಿ 52 ಎಸೆತಗಳಲ್ಲಿ ಟಿ20ಯಲ್ಲಿ ಚೊಚ್ಚಲ ಶತಕ ಪೂರೈಸಿದರು. ಮ್ಯಾಕ್ಸ್‌ವೆಲ್‌ರ ಈ ಓವರ್‌ನಲ್ಲಿ 30 ರನ್ ಕಸಿದ ಟೀಮ್ ಇಂಡಿಯಾ ಸರಣಿಯಲ್ಲಿ ಸತತ ಮೂರನೇ ಬಾರಿಗೆ 200 ಪ್ಲಸ್ ರನ್ ಕಲೆಹಾಕಿತು. ಅಂತಿಮ ಐದು ಓವರ್‌ನಲ್ಲಿ ಆಸೀಸ್ ಬೌಲರ್‌ಗಳು 79 ರನ್ ಬಿಟ್ಟುಕೊಟ್ಟರು.

    1: ಋತುರಾಜ್ ಗಾಯಕ್ವಾಡ್ ಟಿ20ಯಲ್ಲಿ ಆಸ್ಟ್ರೇಲಿಯಾ ಎದುರು ಶತಕ ಸಿಡಿಸಿದ ಮೊದಲ ಭಾರತೀಯ ಎನಿಸಿದರು. ಜತೆಗೆ ಆಸೀಸ್ ಎದುರು ಗರಿಷ್ಠ ವೈಯಕ್ತಿಕ ರನ್‌ಗಳಿಸಿದ ಬ್ರೆಂಡನ್ ಮೆಕ್ಕಲಂ (116) ದಾಖಲೆ ಮುರಿದರು.

    2. ಋತುರಾಜ್ ಗಾಯಕ್ವಾಡ್ ಟಿ20ಯಲ್ಲಿ ಅತಿಹೆಚ್ಚು ರನ್‌ಗಳಿಸಿದ ವಿರಾಟ್ ಕೊಹ್ಲಿ (122*) ದಾಖಲೆಯನ್ನು ಹಿಂದಿಕ್ಕೆ 2ನೇ ಸ್ಥಾನಕ್ಕೇರಿದರು. ಶುಭಮಾನ್ ಗಿಲ್ (126*) ಅಗ್ರಸ್ಥಾನದಲ್ಲಿದ್ದಾರೆ.

    9. ಋತುರಾಜ್ ಗಾಯಕ್ವಾಡ್ ಟಿ20ಯಲ್ಲಿ ಭಾರತದ ಪರ ಶತಕ ಸಿಡಿಸಿದ 9ನೇ ಬ್ಯಾಟರ್. ರೋಹಿತ್ ಶರ್ಮ (4), ಸೂರ್ಯಕುಮಾರ್ (3), ಕೆಎಲ್ ರಾಹುಲ್ (2), ಸುರೇಶ್ ರೈನಾ, ವಿರಾಟ್ ಕೊಹ್ಲಿ, ದೀಪಕ್ ಹೂಡಾ, ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್ ಮೊದಲಿಗರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts