More

    ಎಲ್ಲರನ್ನು ಪ್ರೀತಿಸುವುದೇ ಅಧ್ಯಾತ್ಮಿಕತೆ

    ಕೊಪ್ಪ: ಆಧ್ಯಾತ್ಮಿಕತೆ ಎಂದರೆ ಅಂತರಂಗದ ಶ್ರೀಮಂತಿಕೆಯಾಗಿದೆ. ಸತ್ಯ ಹೇಳುವುದು, ಎಲ್ಲರನ್ನು ಪ್ರೀತಿಸುವುದು ಅಧ್ಯಾತ್ಮಿಕತೆ ಎನಿಸಿಕೊಳ್ಳುತ್ತದೆ ಎಂದು ಹರಿಹರಪುರದ ಶ್ರೀಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
    ಹರಿಹರಪುರ ಶ್ರೀ ಮಠದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮೋತ್ಸವ ಕಾರ್ಯಕ್ರದ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯಕ್ತಿಯಲ್ಲಿ ಅಂತರಂಗದ ಶ್ರೀಮಂತಿಕೆ ಇಲ್ಲದೇ, ಕೇವಲ ಬಾಹ್ಯ ಶ್ರೀಮಂತಿಕೆ ಇದ್ದರೆ ಸಮಾಜಕ್ಕೆ ಪ್ರಯೋಜನಕ್ಕೆ ಬರುವುದಿಲ್ಲ ಎಂದರು.
    ಆಧ್ಯಾತ್ಮಿಕತೆ ಎಂದರೆ ಅಂತರಂಗದ ಮೌಲ್ಯ. ಕೇವಲ ಪೂಜೆ, ಆಚಾರ ವಿಚಾರ ಎಂದರೆ ಮಕ್ಕಳು ಒಪ್ಪಿಕೊಳ್ಳುವುದಿಲ್ಲ. ಮಕ್ಕಳು ಕೇಳುವ ಪ್ರಶ್ನೆಗೆ ಉತ್ತರಿಸಲು ಪಾಲಕರಿಗೆ ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ತಿಳಿಹೇಳಬೇಕು. ಇನ್ನೊಬ್ಬರ ಮೇಲೆ ಶೋಷಣೆ ಮಾಡಬಾರದು ಹಾಗೂ ಶೋಷಣೆಯನ್ನು ಒಪ್ಪಿಕೊಳ್ಳಲೂ ಬಾರದು. ಇಂತಹ ಗುಣಗಳನ್ನು ಮಾತೆಯರು ಮಕ್ಕಳಲ್ಲಿ ಬೆಳೆಸಬೇಕು ಎಂದು ತಿಳಿಸಿದರು.
    ಆಧ್ಯಾತ್ಮಿಕ ವಿಜ್ಞಾನ ಎಂಬುದು ಲೌಕಿಕ ವಿಜ್ಞಾನವಾಗಿದೆ. ಆಧ್ಯಾತ್ಮಿಕ ಮೌಲ್ಯವಿದ್ದಾಗ ಸುಖಿ ಸಂಸಾರವಾಗಿರುತ್ತದೆ. ಕುಟುಂಬ ವ್ಯವಸ್ಥೆ ಕಾಪಾಡಿಕೊಂಡಾಗ ಭಾರತೀಯ ಸಂಸ್ಕೃತಿ ಉಳಿಯುತ್ತದೆ. ಭಾರತೀಯಲ್ಲಿ ಸ್ವಾಭಿಮಾನದ ಕೊರತೆ ಎದ್ದು ಕಾಣುತ್ತಿದೆ. ಬೇರೆ ದೇಶದ ಸಂಸ್ಕತಿಗೆ ಮಾರು ಹೋಗುತ್ತಿದ್ದೇವೆ. ಭಾರತೀಯ ಸಂಸ್ಕೃತಿ ಪ್ರಾಣ ಇರುವುದು ಮೌಲ್ಯಯುತವಾದ ಕೌಟುಂಬಿಕ ಜೀವನದಲ್ಲಿ. ಪ್ರಸ್ತುತ ಕುಟುಂಬದಲ್ಲಿ ಮೌಲ್ಯ ಕಳೆದುಹೋಗುತ್ತಿದೆ ಎಂದರು.
    ಹಿರಿಯ ಪತ್ರಕರ್ತ ರವಿ ಹೆಗ್ಡೆ ಮಾತನಾಡಿ, ಹರಿಹರಪುರ ಶ್ರೀ ಮಠದಲ್ಲಿ ಭಾರತೀಯ ಸಂಸ್ಕೃತಿಯ ಪುನಃರುತ್ತಾನಕ್ಕಾಗಿ ಶ್ರಮಿಸಲಾಗುತ್ತಿದೆ. ಜಾತಿ, ಸಮುದಾಯದ ಚೌಕಟ್ಟು ಮೀರಿ ಸ್ವಾಮೀಜಿಯವರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಈ ಕಾರ್ಯಕ್ರಮ ಕೇವಲ ಧಾರ್ಮಿಕ ಕಾರ್ಯಕ್ರಮವಾಗದೆ ಎಲ್ಲರನ್ನೊಳಗೊಂಡ ಸಾಮಾಜಿಕ ಕಾರ್ಯಕ್ರಮವಾಗಿದೆ. ಇಲ್ಲಿ ಕನಕ, ವಾಲ್ಮೀಕಿ ಜಯಂತಿಯನ್ನೂ ಆಚರಿಸುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts