More

    ಈಕ್ವಿಟಿ ಷೇರುಗಳ ಮೂಲಕ 2,250 ಕೋಟಿ ರೂ.ಸಂಗ್ರಹಿಸಲಿದೆ ಸ್ಪೈಸ್‌ಜೆಟ್; ಅನುಮೋದಿಸಿದ ನಿರ್ದೇಶಕರ ಮಂಡಳಿ

    ಮುಂಬೈ: ಈಕ್ವಿಟಿ ಷೇರುಗಳನ್ನು ವಿತರಿಸುವ ಮೂಲಕ 2,250 ಕೋಟಿ ರೂಪಾಯಿಗಳ ಹೊಸ ಬಂಡವಾಳವನ್ನು ಸಂಗ್ರಹಿಸುವುದಾಗಿ ಸ್ಪೈಸ್‌ಜೆಟ್ ಮಂಗಳವಾರ ಹೇಳಿದೆ. ಪ್ರೈವೇಟ್​​​ ಪ್ಲೇಸ್‌ಮೆಂಟ್ ಆಧಾರದ ಮೇಲೆ ಈಕ್ವಿಟಿ ಷೇರುಗಳು ಮತ್ತು ಇಕ್ವಿಟಿ ವಾರಂಟ್‌ಗಳ ವಿತರಣೆಯನ್ನು ಏರ್‌ಲೈನ್‌ನ ನಿರ್ದೇಶಕರ ಮಂಡಳಿ ಅನುಮೋದಿಸಿದೆ.

    ಈಕ್ವಿಟಿ ಷೇರುಗಳನ್ನು ವಿತರಿಸುವ ಮೂಲಕ 2,250 ಕೋಟಿ ರೂ.ಗಳ ಹೊಸ ಬಂಡವಾಳವನ್ನು ಸಂಗ್ರಹಿಸುವುದಾಗಿ ಸದ್ಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ಮಂಗಳವಾರ ಹೇಳಿದೆ. ಖಾಸಗಿ ಪ್ಲೇಸ್‌ಮೆಂಟ್ ಆಧಾರದ ಮೇಲೆ ಈಕ್ವಿಟಿ ಷೇರುಗಳು ಮತ್ತು ಇಕ್ವಿಟಿ ವಾರಂಟ್‌ಗಳ ವಿತರಣೆಯನ್ನು ಏರ್‌ಲೈನ್‌ನ ನಿರ್ದೇಶಕರ ಮಂಡಳಿ ಅನುಮೋದಿಸಿದೆ.

    ಪ್ರಸ್ತಾವಿತ ಬಂಡವಾಳ ಹೂಡಿಕೆಯು ಉತ್ಪನ್ನದ ಉಪಸ್ಥಿತಿ ಮತ್ತು ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆಳವಾದ ಆರ್ಥಿಕ ಅಡಿಪಾಯವನ್ನು ಒದಗಿಸುತ್ತದೆ ಎಂದು ಏರ್‌ಲೈನ್ ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ.

    ಸೆಪ್ಟೆಂಬರ್‌ಗೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ವಿಮಾನಯಾನ ಸಂಸ್ಥೆಯು 428 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ಅನುಭವಿಸಿದೆ. ಒಂದು ವರ್ಷದ ಹಿಂದೆ, ಇದೇ ತ್ರೈಮಾಸಿಕದಲ್ಲಿ, ಕಂಪನಿಯು 835 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ಅನುಭವಿಸಿತ್ತು.

    ಆಧಾರ್ ಕಾರ್ಡ್ ಉಚಿತ ಅಪ್ಡೇಟ್‌ಗೆ ಮತ್ತೊಂದು ಅವಕಾಶ; ಗಡುವು ವಿಸ್ತರಿಸಿದ ಯುಐಡಿಎಐ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts