More

    ಕ್ಯಾಬಿನ್​ನಲ್ಲಿ ದಿಢೀರ್​ ಹೊಗೆ: ಸ್ಪೈಸ್‌ಜೆಟ್‌ ವಿಮಾನ ತುರ್ತು ಭೂಸ್ಪರ್ಶ

    ನವದೆಹಲಿ: ವಿಮಾನದಲ್ಲಿ ದಿಢೀರ್​ ಹೊಗೆ ಕಾಣಿಸಿಕೊಂಡ ಕಾರಣ ಜಬಲ್‌ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್‌ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ದೆಹಲಿಯಿಂದ ಮಧ್ಯಪ್ರದೇಶದ ಜಬಲ್‌ಪುರಕ್ಕೆ ಹೊರಟಿದ್ದ ಸ್ಪೈಸ್‌ಜೆಟ್ Q400 ವಿಮಾನ ಸಂಖ್ಯೆ SG-2962 (ದೆಹಲಿ-ಜಬಲ್‌ಪುರ) ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ತಕ್ಷಣ ದೆಹಲಿಯಲ್ಲಿ ತುರ್ತು ಭೂಸರ್ಶ ಮಾಡಿದೆ.

    ಪ್ರಯಾಣವನ್ನು ಆರಂಭಿಸಿದ ಕೆಲವೇ ಕ್ಷಣದಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಎಚ್ಚೆತ್ತ ಪೈಲೆಟ್​ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡಿಗ್​ ಮಾಡಿ, ಹಲವರ ಪ್ರಾಣ ರಕ್ಷಿಸಿದ್ದಾರೆ.ವಿಮಾನವು ಸುಮಾರು 5000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಕ್ಯಾಬಿನ್‌ನಲ್ಲಿ ಹೊಗೆ ಬರುತ್ತಿರುವುದನ್ನು ವೈಮಾನಿಕ ಸಿಬ್ಬಂದಿ ಗಮನಿಸಿದ್ದಾರೆ. ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ವಿಮಾನದಲ್ಲಿ 185 ಮಂದಿ ಪ್ರಯಾಣಿಕರಿದ್ದರು. ನಾಲ್ವರು ವೈಮಾನಿಕ ಸಿಬ್ಬಂದಿ ಹಾಗೂ ಇಬ್ಬರು ಪೈಲೆಟ್‌ಗಳು ಇದ್ದರು.

    ಸ್ಪೈಸ್‌ಜೆಟ್‌ನ ವಿಮಾನವೊಂದು ಹಾರಾಟದ ವೇಳೆ ಹಕ್ಕಿಯೊಂದು ಬಡಿದ ಪರಿಣಾಮ ಪಟ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದಕ್ಕೂ ಮುನ್ನ ಜೂನ್ 19 ರಂದು ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವೊಂದು ತಾಂತ್ರಿಕ ದೋಷದಿಂದ ವಿಮಾನದೊಳಗೆ ಬೆಂಕಿ ಕಾಣಿಸಿಕೊಂಡು ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. (ಏಜೆನ್ಸೀಸ್​)

    ಸ್ವದೇಶಿ ನಿರ್ಮಿತ ಮಾನವ ರಹಿತ ವಿಮಾನ ಪರೀಕ್ಷಾರ್ಥ ಯಶಸ್ವಿ: ಡಿಆರ್​ಡಿಒಗೆ ಶ್ಲಾಘನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts