More

    ಕಾರ್ನಾಡರ ನಿರ್ದೇಶನದ ಕೊನೆಯ ಚಿತ್ರದ ಸ್ಪೆಷಾಲಿಟಿ ಇದು!

    ಇಂದು ಗಿರೀಶ್ ಕಾರ್ನಾಡ್ ಅವರ ಹುಟ್ಟುಹಬ್ಬ. ಅವರು ಇಲ್ಲದಿರುವ ಮೊದಲ ಹುಟ್ಟುಹಬ್ಬ. ಕಳೆದ ವರ್ಷ ಜೂನ್ 19ರಂದು ಕಾರ್ನಾಡರು ಇನ್ನಿಲ್ಲವಾದರು. ಅವರು ಇದ್ದಿದ್ದರೆ 82 ವರ್ಷ ಮುಗಿಸಿ, 83ಕ್ಕೆ ಕಾಲಿಡುತ್ತಿದ್ದರು.

    ಇದನ್ನೂ ಓದಿ: ಓಂ ಚಿತ್ರದಿಂದ ನನ್ನ ಸಿನಿಮಾ ಕರಿಯರೇ ಸಾಕು ಅನಿಸಿತ್ತು!

    ಕನ್ನಡ ಚಿತ್ರರಂಗಕ್ಕೆ ಗಿರೀಶ್ ಕಾರ್ನಾಡರು ನೀಡಿದ ಕೊಡುಗೆಯ ಬಗ್ಗೆ ಈಗಾಗಲೇ ಸಾಕಷ್ಟು ಬರೆಯಲಾಗಿದೆ. ಇತ್ತೀಚೆಗಷ್ಟೇ 50 ವರ್ಷ ಪೂರೈಸಿದ ‘ಸಂಸ್ಕಾರ’ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಚಿತ್ರಕಥೆಗಾರರಾಗಿ ಮತ್ತು ನಟರಾಗಿ ಎಂಟ್ರಿ ಕೊಟ್ಟ ಗಿರೀಶ್ ಕಾರ್ನಾಡ್, ಅದಾಗಿ ಮರುವರ್ಷಕ್ಕೆ ‘ವಂಶವೃಕ್ಷ’ ಮೂಲಕ ನಿರ್ದೇಶಕರೂ ಆದರು. ಅಲ್ಲಿಂದ ನಂತರದ ವರ್ಷಗಳಲ್ಲಿ ಅವರು ‘ಕಾಡು’, ‘ತಬ್ಬಲಿಯು ನೀನಾದೆ ಮಗನೆ’, ‘ಒಂದಾನೊಂದು ಕಾಲದಲ್ಲಿ’, ‘ಕಾನೂರು ಸುಬ್ಬಮ್ಮ ಹೆಗ್ಗಡತಿ’, ಹಿಂದಿಯ ‘ಉತ್ಸವ್’ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

    ಈ ಪೈಕಿ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಬರೀ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಒಂದು ವಿಶಿಷ್ಟವಾದ ಪ್ರಯೋಗ. ಒಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಯ ಸಾಹಿತ್ಯವನ್ನು, ಇನ್ನೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಯು ತೆರೆಯ ಮೇಲೆ ತಂದ ಉದಾಹರಣೆ ಅದುವರೆಗೂ ಇರಲಿಲ್ಲ. ಅಂಥದ್ದೊಂದು ಅಪರೂಪದ ಕೆಲಸವನ್ನು ಗಿರೀಶ್ ಕಾರ್ನಾಡ್ ಮಾಡಿದರು.

    ಇದನ್ನೂ ಓದಿ: ವಿದೇಶೀ ವಿಚಾರವನ್ನೂ ತಿರಸ್ಕರಿಸಿ … ಉಪೇಂದ್ರ ಹೀಗೆ ಕರೆ ನೀಡಿದ್ದು ಯಾಕೆ?

    ಕುವೆಂಪು ಅವರ ಸಾಹಿತ್ಯದಲ್ಲಿ ಅತ್ಯಂತ ಮಹತ್ವವಾದದ್ದು ‘ಕಾನೂರು ಸುಬ್ಬಮ್ಮ ಹೆಗ್ಗಡತಿ’. ಸ್ವಾತಂತ್ರ್ಯಪೂರ್ವ ಭಾರತದಲ್ಲಿ, ಮಲೆನಾಡಿನಲ್ಲಿ ನಡೆಯುವ ಈ ಕಥೆಯನ್ನು ತೆರೆಗೆ ತರುವ ಪ್ರಯತ್ನವನ್ನು ಅದುವರೆಗೂ ಯಾರೂ ಮಾಡಿರಲಿಲ್ಲ. ಈ ಕೃತಿಯನ್ನು ಕಾರ್ನಾಡ್ ಅವರು ‘ಕಾನೂರು ಹೆಗ್ಗಡತಿ’ ಹೆಸರಿನಲ್ಲಿ 1999ರಲ್ಲಿ ತೆರೆಗೆ ತಂದರು ಎಂಬುದು ವಿಶೇಷ. ಈ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದಷ್ಟೇ ಅಲ್ಲ, ಚಂದ್ರೇಗೌಡನ ಪಾತ್ರವನ್ನೂ ಮಾಡಿದ್ದರು. ಈ ಚಿತ್ರವು 2000ನೇ ಇಸವಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

    ಇದೇ ಗಿರೀಶ್ ಕಾರ್ನಾಡ್ ಅವರ ಕೊನೆಯ ಚಿತ್ರವಾಗಿತ್ತು. ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ನಂತರ, ಅವರು ಯಾವ ಚಿತ್ರದ ನಿರ್ದೇಶನಕ್ಕೂ ಕೈ ಹಾಕಲಿಲ್ಲ.

    ಪ್ರೇಯಸಿಯ ಚಿತ್ರಕ್ಕೆ ಸಲ್ಮಾನ್​ ಬಂಡವಾಳ; ಅಷ್ಟಕ್ಕೂ ಅಸಲಿ ಕಥೆಯೇ ಬೇರೆ ಇದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts