More

    ಪಟ್ಟಲದಮ್ಮ ದೇವಿಗೆ ವಿಶೇಷ ಪೂಜೆ

    ಮಳವಳ್ಳಿ: ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ಸಿಡಿಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

    ಪಟ್ಟಣದ ಸುಲ್ತಾನ್ ರಸ್ತೆ ಬದಿಯಲ್ಲಿರುವ ಪಟ್ಟಲದಮ್ಮ ದೇವಸ್ಥಾನ ಹಾಗೂ ಪ್ರವೇಶದ ದ್ವಾರದ ಕಮಾನುಗಳನ್ನು ಹೂವಿನ ಮಾಲೆಯಿಂದ ಸಿಂಗರಿಸಲಾಗಿತ್ತು. ಚಿಕ್ಕಮ್ಮ-ದೊಡ್ಡಮ್ಮ ತಾಯಿ ವಿಗ್ರಹಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗಿನಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪಟ್ಟಲದಮ್ಮನಿಗೆ ಭಕ್ತಿ ಸಮರ್ಪಿಸಿದರು. ಪಟ್ಟಣ ಸೇರಿದಂತೆ ಸುತ್ತಲಿನ ತಮ್ಮಡಹಳ್ಳಿ, ಬಸವನಪುರ, ಬುಗತಗಹಳ್ಳಿ, ಅಂಚೇದೊಡ್ಡಿ, ನಿಡಘಟ್ಟ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಕುಟುಂಬದ ಸದಸ್ಯರೊಡನೆ ತಂಬಿಟ್ಟಿನ ಆರತಿ ಹಿಡಿದು ದೇವಸ್ಥಾನಕ್ಕೆ ತೆರಳಿ ಸರದಿಯಲ್ಲಿ ನಿಂತು ಪೂಜೆ ಸಲ್ಲಿಸುವ ಮೂಲಕ ಪಟ್ಟಲದಮ್ಮ ದೇವಿಯ ದರ್ಶನ ಪಡೆದರು. ಹಬ್ಬದ ಪ್ರಯುಕ್ತ ಪಟ್ಟದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದವು. ಹೊರ ಊರುಗಳಿಂದ ಸಿಡಿ ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸಿದ್ದರಿಂದ ಪಟ್ಟಣದ ತುಂಬೆಲ್ಲ ಜನಜಂಗುಳಿ ಕಂಡು ಬಂತು. ಶನಿವಾರ ಪಟ್ಟಲದಮ್ಮನ ದೇವಸ್ಥಾನದ ಆವರಣದಲ್ಲಿ ಕೊಂಡೋತ್ಸವ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts