More

    ತೆಲಂಗಾಣದಿಂದ ಜಾರ್ಖಂಡ್​ಗೆ ಹೊರಟ ವಿಶೇಷ ರೈಲು, 22 ಬೋಗಿಗಳಲ್ಲಿ ವಲಸೆ ಕಾರ್ಮಿಕರ ಪ್ರಯಾಣ

    ನವದೆಹಲಿ: ಲಾಕ್​ಡೌನ್​ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ವಲಸಿಗರನ್ನು ಸುರಕ್ಷಿತವಾಗಿ ಅವರವರ ರಾಜ್ಯಗಳಿಗೆ ತಲುಪಿಸಲು ವಿವಿಧ ರಾಜ್ಯಗಳು ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಿವೆ. ಅದರಂತೆ ತೆಲಂಗಾಣದಿಂದ ಜಾರ್ಖಂಡ್​ಗೆ ವಲಸೆ ಕಾರ್ಮಿಕರನ್ನು ರವಾನಿಸಲು ರೈಲ್ವೆ ಇಲಾಖೆ ವ್ಯವಸ್ಥೆಗೊಳಿಸಿದ್ದ ವಿಶೇಷ ರೈಲು ತೆಲಂಗಾಣದ ಲಿಂಗಂಪಲ್ಲಿಯಿಂದ ಜಾರ್ಖಂಡ್​ನತ್ತ ಶುಕ್ರವಾರ ಪ್ರಯಾಣ ಬೆಳೆಸಿತು.

    ತೆಲಂಗಾಣ ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ವ್ಯವಸ್ಥೆಗೊಳಿಸಲಾಗಿದ್ದ ಈ ರೈಲಿನ 22 ಬೋಗಿಗಳಲ್ಲಿ 1 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣ ಬೆಳೆಸಿದ್ದಾಗಿ ದಕ್ಷಿಣ ಮಧ್ಯ ರೈಲ್ವೆ ವಕ್ತಾರ ಸಿ.ಎಚ್​. ರಾಜೇಶ್ ತಿಳಿಸಿದ್ದಾರೆ.

    ಇದು ಒಂದು ವಿಶೇಷ ರೈಲು. ಸಧ್ಯಕ್ಕೆ ಹೆಚ್ಚುವರಿ ರೈಲುಗಳನ್ನು ಓಡಿಸಲು ಸಚಿವಾಲಯದಿಂದ ಯಾವುದೇ ನಿರ್ದೇಶನಗಳಿಲ್ಲ ಎಂದು ತಿಳಿಸಿದ್ದಾರೆ.

    ಲಾಕ್​ಡೌನ್​​ನಿಂದಾಗಿ ಜಾರ್ಖಂಡ್ ಮೂಲದ 1200 ಜನ ವಲಸೆ ಕಾರ್ಮಿಕರು ಹೈದರಾಬಾದ್​ನ ಸಂಗಾರೆಡ್ಡಿ ಜಿಲ್ಲೆಯ ಐಐಟಿ ಕ್ಯಾಂಪಸ್ ನಲ್ಲಿ ಸಿಲುಕಿಕೊಂಡಿದ್ದರು.

    ಅತ್ತ ತಮ್ಮ ಊರಿಗೂ ಹೋಗಲಾರದೆ, ಇತ್ತ ಗುತ್ತಿಗೆದಾರನಿಂದ ವೇತನವೂ ಸಿಗದ ಹಿನ್ನೆಲೆಯಲ್ಲಿ ಹತಾಶರಾಗಿದ್ದ ಬಿಹಾರ ಮತ್ತು ಜಾರ್ಖಂಡ್​ ಮೂಲದ ಈ ಕಾರ್ಮಿಕರು ಪೊಲೀಸರ ಮೇಲೆ ಬುಧವಾರ ಹಲ್ಲೆ ನಡೆಸಿದ್ದರು.

    ತಕ್ಷಣವೇ ಮಧ್ಯಪ್ರವೇಶಿಸಿದ್ದ ಸಂಗಾರೆಡ್ಡಿ ಜಿಲ್ಲಾಡಳಿತ ಪ್ರತಿಭಟನಾನಿರತರನ್ನು ಸಮಾಧಾನಗೊಳಿಸಿದ್ದರು. ಅಲ್ಲದೆ, ತಮ್ಮ ತಮ್ಮ ಊರುಗಳಿಗೆ ತೆರಳಲು ಸೂಕ್ತ ಏರ್ಪಾಡು ಮಾಡುವ ಭರವಸೆ ನೀಡಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.

    ಲಾಕ್​ಡೌನ್​ನಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿ, ಪ್ರವಾಸಿಗರಿಗೆ ಸಿಹಿ ಸುದ್ದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts