More

    ಎಸ್‌ಪಿಬಿ ನಿಧನದಿಂದ ನಾಡಿಗೆ ನಷ್ಟ

    ಸಂಕೇಶ್ವರ: ಹಿರಿಯ ಸಾಹಿತಿ ಡಾ. ಜಿ.ಎಸ್. ಆಮೂರ ಹಾಗೂ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಾಹಿತಿಗಳು ಕಂಬನಿ ಮಿಡಿದಿದ್ದಾರೆ. ಪಟ್ಟಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ. ಎಲ್.ವಿ. ಪಾಟೀಲ, ಡಾ. ಜಿ.ಎಸ್. ಆಮೂರ ಅವರ ಅಮೂಲ್ಯ ಕೃತಿಗಳಿಂದ ಸಾಹಿತ್ಯ ಲೋಕ ಶ್ರೀಮಂತವಾಗಿದೆ ಎಂದರು.

    ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ತಮ್ಮ ಕಂಠಸಿರಿಯಿಂದ ಸಾವಿರಾರು ಹಾಡುಗಳನ್ನು ಹಾಡಿ ಸಂಗೀತ ಪ್ರೇಮಿಗಳ ಹೃದಯ ಗೆದ್ದಿದ್ದರು. ಅವರ ಅಗಲಿಕೆ ನಿಜಕ್ಕೂ ದುಃಖ ತಂದಿದೆ ಎಂದರು.

    ಡಾ. ಶಿ.ಬಾ. ಪಾಟೀಲ, ಡಾ. ಜಿ.ಎಸ್. ಮರಿಗುದ್ದಿ, ಹಮೀದಾಬೇಗಂ ದೇಸಾಯಿ, ಅಕಬರ ಸನದಿ, ಕುಮಾರ ಗುಡಸಿ, ಅ.ಮ. ಮುಂಡಾಸಿ, ಅಜಯ ಸಾರಾಪುರೆ, ಕಿರಣ ನೇಸರಿ, ಡಾ.ಶ್ರೀಶೈಲ ಮಠಪತಿ, ಪ್ರೊ. ವಿ.ಬಿ. ಚೌಗಲಾ, ವಿಜಯ ಶಿರಗಾಂವಿ, ಎಂ.ಎಸ್. ಕರಾಡಿ, ಆರ್.ಬಿ. ಪಾಟೀಲ, ಕುಮಾರ ತಳವಾರ, ವಿಜಯಮಾಲಾ ನಾಗನೂರೆ, ದೇಮಣ್ಣಾ ಸೊಗಲದ, ದೀಪಕ ಬಸಲಿಂಗಗೋಳ, ಕಾಡೇಶ ಬಸ್ತವಾಡಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts