More

    ಸರ್ಕಾರ ಅವಕಾಶ ಕೊಟ್ಟಿದ್ದೇ ಸಾಕಾಯ್ತು; ಸ್ಪೇನ್​ನ ಜನ ತಂಡೋಪತಂಡವಾಗಿ ಹೊರಬಂದರು…

    ಮ್ಯಾಡ್ರಿಡ್​: ಸ್ಪೇನ್​ ಸರ್ಕಾರ ಹಂತಹಂತವಾಗಿ ಲಾಕ್​ಡೌನ್​ ಸಡಿಲಗೊಳಿಸಲು ಮುಂದಾಗಿದೆ. ಇದರ ಭಾಗವಾಗಿ ಅದು ಶನಿವಾರ ಬೆಳಗ್ಗೆಯಿಂದ ಬೆಳಗಿನ ವ್ಯಾಯಾಮ, ಜಾಗಿಂಗ್​, ವಾಯುವಿಹಾರಕ್ಕೆ ಅವಕಾಶ ಮಾಡಿಕೊಟ್ಟಿದೆ. 7 ವಾರಗಳ ಅವಧಿಯಲ್ಲಿ ಮೊದಲ ಬಾರಿಗೆ ಹೊರಬರಲು ಅವಕಾಶ ಲಭಿಸುತ್ತಿದ್ದಂತೆ ಸ್ಪೇನ್​ನ ಜನತೆ ಜಾಗಿಂಗ್​ ಧಿರಿಸಿನಲ್ಲಿ ತಂಡೋಪತಂಡವಾಗಿ ಉದ್ಯಾನ, ಮೈದಾನಗಳಿಗೆ ದಾಂಗುಡಿ ಇಟ್ಟು ವ್ಯಾಯಾಮ ಮಾಡಿದರು.

    ಕೆಲವರು ಮಾಸ್ಕ್​ ಧರಿಸಿ ಬಿರುಸಿನ ನಡಿಗೆ, ಜಾಗಿಂಗ್​ನಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಇದನ್ನೂ ಓದಿ: ಲಾಕ್​ಡೌನ್​ 3.0; ನಾನು ಸ್ನೇಹಿತರನ್ನು ಭೇಟಿಯಾಗಬಹುದೇ? ಮನೆಗೆಲಸದವರು ಬರಬಹುದೇ… ಕೆಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ

    ಹಾಗೆಂದ ಮಾತ್ರಕ್ಕೆ ಯಾರೆಂದರೆ ಅವರು ವಾಕಿಂಗ್​ ಜಾಗಿಂಗ್​ ಬರುವಂತಿಲ್ಲ. ಇದಕ್ಕಾಗಿ ವಯೋಮಾನ ಆಧರಿಸಿ ಸ್ಪೇನ್​ ಸರ್ಕಾರ ಸಮಯವನ್ನು ನಿಗದಿಪಡಿಸಿದೆ. 14 ವರ್ಷದಿಂದ 70 ವರ್ಷ ವಯಸ್ಸಿನವರು ಬೆಳಗ್ಗೆ 6ರಿಂದ 10 ಗಂಟೆಯವರೆಗೆ ರಾತ್ರಿ 8ರಿಂದ 11 ಗಂಟೆಯವರೆಗೆ ವಾಕಿಂಗ್​, ಜಾಗಿಂಗ್​ ಮಾಡಬಹುದು.

    70 ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರು ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ ರಾತ್ರಿ 7ರಿಂದ 8 ಗಂಟೆಯವರೆಗೆ ವಾಕಿಂಗ್​ಗೆ ಹೋಗಬಹುದು. ಅಗತ್ಯವಾಗಿದ್ದರೆ ಮಾತ್ರ ಒಬ್ಬ ಸಹಾಯಕರನ್ನು ಕರೆದೊಯ್ಯಬಹುದು. 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಮಧ್ಯಾಹ್ನ 12ರಿಂದ ರಾತ್ರಿ 7 ಗಂಟೆಯವರೆಗೆ ಮನೆಯಿಂದ ಹೊರಬಂದು ಓಡಾಡಬಹುದು. ಇವರೊಂದಿಗೆ ಪಾಲಕರಲ್ಲಿ ಯಾರಾದರೂ ಒಬ್ಬರು ಇರಬೇಕು. ಇವರು ಮನೆಯ ಪರಿಧಿಯಲ್ಲಿ 1 ಕಿ.ಮೀ. ಮಾತ್ರ ವಾಕಿಂಗ್​ ಹೋಗಬಹುದು. ಇತರೆ ಮಕ್ಕಳೊಂದಿಗೆ ಆಟ ಆಡುವಂತಿಲ್ಲ ಎಂಬ ನಿರ್ಬಂಧಗಳನ್ನು ವಿಧಿಸಲಾಗಿದೆ.

    ಹೋದಲ್ಲೆಲ್ಲಾ ಜನರ ಗಮನ ಸೆಳೆಯುತ್ತಿರುವ ಶ್ರೀರಾಮುಲು ಮಾಸ್ಕ್! ಅಮೆರಿಕದಿಂದ ತರಿಸಿದ್ದಾರಂತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts