More

    ನಾಳೆ ಕೇರಳ ಪ್ರವೇಶಿಸಲಿರುವ ಮುಂಗಾರು: ರೈತರ ಮೊಗದಲ್ಲಿ ಸಂತಸ

    ನವದೆಹಲಿ: ಈ ವರ್ಷದ ಮುಂಗಾರು ಮಳೆ (ನೈಋತ್ಯ ಮಾನ್ಸೂನ್​​) ಸೋಮವಾರ ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಮುಂಗಾರು ದೇಶದ ಕರಾವಳಿ ಪ್ರವೇಶಿಸಲು ಸೋಮವಾರ ಕೇರಳದಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಬಹುದು ಎಂದು ವರದಿ ನೀಡಿದೆ. ಹಾಗೇ ದಕ್ಷಿಣದಿಂದ ಬೀಸುವ ಬಲವಾದ ಗಾಳಿಯಿಂದ ದೆಹಲಿ ಸೇರಿ.. ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿಯೂ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮುಂಗಾರು ಮಳೆ ಆಗಲಿದೆ ಎಂಬ ನಿರೀಕ್ಷೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಇದು ಭಾರತದ ಆರ್ಥಿಕತೆ ಪ್ರಮುಖ ಮೂಲವಾಗಿರುವ ಕೃಷಿಗೆ ಪೂರಕವಾಗಿದೆ. ಇನ್ನು ಈ ವರ್ಷ ಪ್ರಾರಂಭವಾದ ಮೇಲೆ ಈಗಾಗಲೇ 2 ಚಂಡಮಾರುತಗಳು ಎದ್ದಿದ್ದು, ಅವುಗಳ ಪ್ರಭಾವದಿಂದ ದೇಶದ ಬಹುತೇಕ ಕಡೆ ಪ್ರತಿದಿನ ಮಳೆಯಾಗುತ್ತಲೇ ಇದೆ.

    ದೇಶದ ರೈತರ ಪಾಲಿಗೆ ಈ ನೈಋತ್ಯ ಮುಂಗಾರು ಮಳೆ ಜೀವನಾಡಿಯಾಗಿದೆ. ದೇಶದಲ್ಲಿ ಅರ್ಧದಷ್ಟು ಕೃಷಿಭೂಮಿಗೆ ನೀರಾವರಿ ಸೌಕರ್ಯ ಇಲ್ಲ. ಭತ್ತ, ಕಬ್ಬು, ಜೋಳ, ಹತ್ತಿ ಮತ್ತು ಸೋಯಾಬಿನ್ ಬೆಳೆಗಾರರು ಈ ಜೂನ್​ ಮತ್ತು ಸೆಪ್ಟೆಂಬರ್​ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ.

    ‘ಮನ್​​ ಕಿ ಬಾತ್’​​ನಲ್ಲಿ ಬೆಂಗಳೂರಿನ ರೈಲ್ವೆ ಪೈಲೆಟ್​ಗೆ ಮೆಚ್ಚುಗೆ

    ನಮ್ಮದು ಪಕ್ಕಾ ಬಿಜೆಪಿ ಸರ್ಕಾರ: ಸಿ.ಪಿ ಯೋಗೀಶ್ವರ್ ವಿರುದ್ಧ ಆರ್​ ಅಶೋಕ್ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts