More

    ಆಗ್ನೇಯ ಪದವೀಧರ ಕ್ಷೇತ್ರ : ಚಿತ್ರದುರ್ಗ ಜಿಲ್ಲೆಯ 32 ಮತಗಟ್ಟೆಗಳಲ್ಲಿ ಮತದಾನ ಇಂದು

    ಚಿತ್ರದುರ್ಗ: ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಇಂದು ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ.

    ಜಿಲ್ಲೆಯ ಆರು ತಾಲೂಕುಗಳಲ್ಲಿ 10 ಹೆಚ್ಚುವರಿ ಸೇರಿ 32 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ, ಬಿಜೆಪಿಯ ಚಿದಾನಂದ ಎಂ.ಗೌಡ, ಕಾಂಗ್ರೆಸ್ಸಿನ ರಮೇಶ್ ಬಾಬು, ಪಕ್ಷೇತರ ಡಾ.ಕೆ.ಎಂ.ಸುರೇಶ್, ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಸೇರಿದಂತೆ ಹದಿನೈದು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    13,681 ಪುರುಷ ಹಾಗೂ 7342 ಮಹಿಳಾ ಹಾಗೂ ಇತರೆ 1 ಸೇರಿ ಜಿಲ್ಲೆಯಲ್ಲಿ 21,021 ಮತದಾರರು ಇದ್ದಾರೆ. ಮೊಳಕಾಲ್ಮೂರು-3, ಚಳ್ಳಕೆರೆ -6, ಚಿತ್ರದುರ್ಗ-8, ಹಿರಿಯೂರು -6, ಹೊಸದುರ್ಗ-5 ಹಾಗೂ ಹೊಳಲ್ಕೆರೆ ತಾಲೂಕಲ್ಲಿ 4 ಮತಗಟ್ಟೆಗಳಿವೆ.

    ಮತಗಟ್ಟೆ ಸಿಬ್ಬಂದಿಗೆ ಪಿಪಿಇ ಕಿಟ್
    ಎಲ್ಲ ಮತಗಟ್ಟೆಗಳಿಗೂ ಪಿಪಿಇ ಕಿಟ್ ಒದಗಿಸಲಾಗಿದ್ದು, ತಾಪಮಾನ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬರುವಂಥವರು, ಕೋವಿಡ್ ಲಕ್ಷಣಗಳಿರುವಂಥ ಮತದಾರರಿಗೆ, ಮತದಾನದ ಕೊನೆ ಅವಧಿಯಲ್ಲಿ ಮತ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಸಂದರ್ಭ ದಲ್ಲಿ ಅವರಿಗೆ ಟೋಕನ್ ಕೊಡಲಾಗುತ್ತಿದ್ದು, ಈ ಕೊನೆ ಅವಧಿಯ ಕರ್ತವ್ಯ ನಿರ್ವಹಣೆಗಾಗಿ, ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿದೆ.

    ಒಂದು ಮತಗಟ್ಟೆಗೆ ಕನಿಷ್ಠ 20 ನೇರಳೆ ಬಣ್ಣದ ಪೆನ್ ಒದಗಿಸಲಾಗುತ್ತದೆ ಹಾಗೂ ಪ್ರತಿ ಮತದಾರರಿಗೆ ಒಂದು ಹ್ಯಾಂಡ್ ಗ್ಲೌಸ್ ಕೊಡಲಾಗುತ್ತದೆ. ಒಬ್ಬರ ಮತದಾನದ ಬಳಿಕ ಪೆನ್ ಸ್ಯಾನಿಟೈಸ್ ಮಾಡಲಾಗುತ್ತದೆ. ಈಗಾಗಲೇ ಮತಗಟ್ಟೆಗಳಲ್ಲಿ ಡಿಸ್‌ಇನ್‌ಫೆಕ್ಷನ್ ಕೆಲಸ ನಡೆದಿದೆ.

    ಮತದಾರರ ಸಾಮಾಜಿಕ ಅಂತರಕ್ಕಾಗಿ ಗುರುತಿನೊಂದಿಗೆ, ಮಾರ್ಗಸೂಚಿಯಂತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ ಸುಗಮ ಮತದಾನಕ್ಕಾಗಿ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ಅಗತ್ಯ ಬಂದೋಬಸ್ತ್ ಕೈಗೊಂಡಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts