More

    ವಾಂಡರರ್ಸ್‌ ಅಂಗಳದಲ್ಲಿ ಥ್ರಿಲ್ಲರ್ ಕ್ಲೈಮ್ಯಾಕ್ಸ್ ; ಭಾರತಕ್ಕೆ ಸರಣಿ ಗೆಲುವಾ, ಸಮಬಲವಾ..!

    ಜೊಹಾನ್ಸ್‌ಬರ್ಗ್: ಟೆಸ್ಟ್ ತಜ್ಞ ಬ್ಯಾಟರ್‌ಗಳಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ನೀಡಿದ ಉಪಯುಕ್ತ ಕೊಡುಗೆಗಳ ನೆರವಿನಿಂದ ಭಾರತ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ ಗುರಿ ನೀಡಿತು. ಇದಕ್ಕೆ ನಾಯಕ ಡೀನ್ ಎಲ್ಗರ್ ಸಾರಥ್ಯದಲ್ಲಿ ದಿಟ್ಟ ಉತ್ತರವನ್ನೇ ನೀಡಿರುವ ಹರಿಣಗಳ ಪಡೆ ಪಂದ್ಯದ ಫಲಿತಾಂಶದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವಿನೊಂದಿಗೆ ಸರಣಿ ಸಮಬಲ ಸಾಧಿಸಲು ಇನ್ನೂ 122 ರನ್ ಅವಶ್ಯಕತೆಯಿದ್ದರೆ, ಭಾರತಕ್ಕೆ ಸತತ 2ನೇ ಜಯದೊಂದಿಗೆ ಐತಿಹಾಸಿಕ ಸರಣಿ ವಶಪಡಿಸಿಕೊಳ್ಳಲು 8 ವಿಕೆಟ್‌ಗಳ ಅಗತ್ಯವಿದೆ. ಹೀಗಾಗಿ ಗುರುವಾರ ವಾಂಡರರ್ಸ್‌ ಅಂಗಳದಲ್ಲಿ ಥ್ರಿಲ್ಲರ್ ಕ್ಲೈಮ್ಯಾಕ್ಸ್ ನಿರೀಕ್ಷಿಸಲಾಗಿದೆ.

    ಬುಧವಾರ 2 ವಿಕೆಟ್‌ಗೆ 85 ರನ್‌ಗಳಿಂದ ದಿನದಾಟ ಮುಂದುವರಿಸಿದ ಭಾರತ ತಂಡ, ಚೇತೇಶ್ವರ ಪೂಜಾರ (53 ರನ್, 86 ಎಸೆತ, 10 ಬೌಂಡರಿ) ಹಾಗೂ ಅಜಿಂಕ್ಯ ರಹಾನೆ (58 ರನ್, 78 ಎಸೆತ, 8 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ನಿರ್ವಹಣೆಯಿಂದ ಉತ್ತಮ ಸ್ಥಿತಿಯಲ್ಲಿತ್ತು. ಬಳಿಕ ದಕ್ಷಿಣ ಆಫ್ರಿಕಾದ ವೇಗಿಗಳಾದ ಕಗಿಸೊ ರಬಾಡ (77ಕ್ಕೆ 3), ಲುಂಗಿ ಎನ್‌ಗಿಡಿ (43ಕ್ಕೆ 3) ಹಾಗೂ ಮಾರ್ಕೋ ಜಾನ್ಸೆನ್ (67ಕ್ಕೆ 3) ದಾಳಿಗೆ ದಿಢೀರ್ ಕುಸಿತ ಕಂಡು 266 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತ ತಂಡ 240 ರನ್‌ಗಳ ಸವಾಲು ನೀಡಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ ಭಾರತದ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದು, ಮೂರನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 118 ರನ್ ಪೇರಿಸುವ ಮೂಲಕ ಉತ್ತಮ ಸ್ಥಿತಿಯಲ್ಲಿದೆ.

    ಭಾರತ : 202 ಮತ್ತು 60.1 ಓವರ್‌ಗಳಲ್ಲಿ 266 (ಚೇತೇಶ್ವರ ಪೂಜಾರ 53, ಅಜಿಂಕ್ಯ ರಹಾನೆ 58, ಹನುಮ ವಿಹಾರಿ 40*, ಶಾರ್ದೂಲ್ ಠಾಕೂರ್ 28, ಕಗಿಸೊ ರಬಾಡ 77ಕ್ಕೆ 3, ಲುಂಗಿ ಎನ್‌ಗಿಡಿ 43ಕ್ಕೆ 3, ಮಾರ್ಕೋ ಜಾನ್ಸೆನ್ 67ಕ್ಕೆ 3), ದಕ್ಷಿಣ ಆಫ್ರಿಕಾ: 229 ಮತ್ತು 2 ವಿಕೆಟ್‌ಗೆ 128 (ಡೀನ್ ಎಲ್ಗರ್ 46*, ಕೀಗನ್ ಪೀಟರ್ಸೆನ್ 28, ಏಡನ್ ಮಾರ್ಕ್ರಮ್ 31, ಡುಸೆನ್ 11*, ಶಾರ್ದೂಲ್ ಠಾಕೂರ್ 24ಕ್ಕೆ 1, ಆರ್.ಅಶ್ವಿನ್ 14ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts