More

    ಸೌರವ್​​ ಗಂಗೂಲಿ ಬಳಿಕ ಅವರ ಕುಟುಂಬಕ್ಕೂ ಕರೊನಾ ಸಂಕಟ!

    ಕೋಲ್ಕತ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕರೊನಾ ಸೋಂಕಿತರಾಗಿ ಚೇತರಿಕೆ ಕಂಡ ಬಳಿಕ ಇದೀಗ ಅವರ ಕುಟುಂಬದ ಸದಸ್ಯರಿಗೂ ವೈರಸ್ ಕಾಡಿದೆ.

    ಗಂಗೂಲಿ ಪುತ್ರಿ ಸನಾ ಸಹಿತ ಕುಟುಂಬದ ಮೂವರು ಸದಸ್ಯರು ಪಾಸಿಟಿವ್ ಆಗಿದ್ದಾರೆ. ಗಂಗೂಲಿ ಪತ್ನಿ ಡೋನಾ ವರದಿ ನೆಗೆಟಿವ್ ಬಂದಿದೆ. ಈ ಮುನ್ನ 49 ವರ್ಷದ ಗಂಗೂಲಿ ರೂಪಾಂತರಿ ವೈರಸ್ ಡೆಲ್ಟಾ ಏಟಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.

    ಮೂರು ದಿನಗಳ ಬಳಿಕ ಮನೆಗೆ ಮರಳಿ ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ಈ ನಡುವೆ ಗಂಗೂಲಿ ನಿವಾಸದಲ್ಲಿ ಪುತ್ರಿ 20 ವರ್ಷದ ಸನಾ ಸಹಿತ ಮೂವರು ಸದಸ್ಯರ ವರದಿ ಪಾಸಿಟಿವ್ ಬಂದಿದ್ದರೂ, ಲಕ್ಷಣರಹಿತವಾಗಿದ್ದಾರೆ.

    ವಾಂಡರರ್ಸ್‌ ಅಂಗಳದಲ್ಲಿ ಥ್ರಿಲ್ಲರ್ ಕ್ಲೈಮ್ಯಾಕ್ಸ್ ; ಭಾರತಕ್ಕೆ ಸರಣಿ ಗೆಲುವಾ, ಸಮಬಲವಾ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts