More

    ಒಂದು ಮುಗಿದ ಅಧ್ಯಾಯದ ಕಥೆ! … ಸೌಂದರ್ಯ ಇಲ್ಲ ಎಂದು ಚಿತ್ರವೇ ನಿಂತು ಹೋಯಿತು

    ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಸೌಂದರ್ಯ ನಿಧನರಾಗಿ ನಿನ್ನೆ ಶುಕ್ರವಾರಕ್ಕೆ 16 ವರ್ಷಗಳಾಗಿವೆ. 2004ರ ಏಪ್ರಿಲ್ 17ರಂದು ಹೈದರಾಬಾದ್‌ಗೆ ಹೋಗುವಾಗ ಏರ್‌ಕ್ರಾಶ್‌ನಲ್ಲಿ ಅವರು ನಿಧನರಾದರು. ಅವರ ನಿಧನದ ನಂತರ ಬಿಡುಗಡೆಯಾದ ‘ಆಪ್ತಮಿತ್ರ’ ಸೂಪರ್ ಹಿಟ್ ಆಯಿತು. ಅದೇ ಅವರ ವೃತ್ತಿಜೀವನದ ಕೊನೆಯ ಚಿತ್ರವೂ ಆಯಿತು.

    ಆದರೆ, ನಿಧನರಾಗುವ ಕೆಲವು ದಿನಗಳ ಮುಂಚೆಯಷ್ಟೇ ಸೌಂದರ್ಯ ಒಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದ ವಿಷಯ ಗೊತ್ತೇ? ಹೌದು, ನಿಧನರಾಗುವ ಕೆಲವು ದಿನಗಳ ಮುಂಚೆ, ಸೌಂದರ್ಯ ಒಂದು ಚಿತ್ರ ಒಪ್ಪಿಕೊಂಡಿದ್ದರು. ಕೆಲವು ದಿನಗಳ ಚಿತ್ರೀಕರಣ ಸಹ ಆಗಿತ್ತಂತೆ. ಆದರೆ, ಅಷ್ಟರಲ್ಲಿ ಅವರ ಅಕಾಲಿಕ ಮರಣದಿಂದ ಚಿತ್ರ ನಿಂತು ಹೋಗಿದೆ. ಅದೇ ‘ನರ್ತನ ಶಾಲ’.

    1960ರ ದಶಕದಲ್ಲಿ ಎನ್.ಟಿ. ರಾಮರಾವ್ ಅಭಿನಯದ ಅತ್ಯಂತ ಜನಪ್ರಿಯ ಚಿತ್ರವೆಂದರೆ ಅದು ‘ನರ್ತನ ಶಾಲ’. ‘ಮಹಾಭಾರತ’ದ ವಿರಾಟಪರ್ವದ ಕಥೆಯನ್ನಾಧರಿಸಿದ ಈ ಚಿತ್ರದಲ್ಲಿ ಅವರು ಅರ್ಜುನ ಮತ್ತು ಬೃಹನ್ನಳೆಯ ಪಾತ್ರ ನಿರ್ವಹಿಸಿದರೆ, ಸಾವಿತ್ರಿ ಅವರು ದ್ರೌಪದಿಯಾಗಿ ಕಾಣಿಸಿಕೊಂಡಿದ್ದರು. ಈ ಯಶಸ್ವಿ ಚಿತ್ರವನ್ನು ರೀಮೇಕ್ ಮಾಡುವುದಕ್ಕೆ ಎನ್.ಟಿ.ಆರ್ ಅವರ ಮಗ ಬಾಲಕೃಷ್ಣ ಹೊರಟಿದ್ದರು. ಬರೀ ನಿರ್ಮಾಣವಷ್ಟೇ ಅಲ್ಲ, ಈ ಚಿತ್ರದ ಮೂಲಕ ನಿರ್ದೇಶಕರಾಗಬೇಕೆಂಬ ಆಸೆ ಅವರಿಗಿತ್ತು. ಎನ್.ಟಿ.ಆರ್ ಮಾಡಿದ ಅರ್ಜುನ ಮತ್ತು ಬೃಹನ್ನಳೆಯ ಪಾತ್ರವನ್ನು ಅವರು ಮಾಡಿದರೆ, ದ್ರೌಪದಿಯ ಪಾತ್ರವನ್ನು ಸೌಂದರ್ಯ ಅವರಿಗೆ ಕೊಟ್ಟಿದ್ದರು. ಈ ಚಿತ್ರದ ಮುಹೂರ್ತ ಸಹ 2004ರ ಮಾರ್ಚ್‌ನಲ್ಲಿ ಆಗಿತ್ತು. ಮುಹೂರ್ತವಾಗಿ ಕೆಲವೇ ದಿನಗಳ ನಂತರ ಸೌಂದರ್ಯ ಮೃತಪಟ್ಟಿದ್ದರಿಂದ, ಈ ಚಿತ್ರವನ್ನು ನಿಲ್ಲಿಸಲಾಯಿತು.

    ಕೆಲವೇ ದಿನಗಳ ಚಿತ್ರೀಕರಣವಾಗಿದ್ದರಿಂದ, ಬೇರೆ ನಟಿಯಿಂದ ಆ ಪಾತ್ರವನ್ನು ಸುಲಭವಾಗಿ ಮಾಡಿಸಬಹುದಿತ್ತು. ಬೇರೆ ಯಾರಾದರೂ ಆಗಿದ್ದರೆ, ಅದೇ ರೀತಿ ಮಾಡುತ್ತಿದ್ದರೇನೋ? ಆದರೆ, ಬಾಲಕೃಷ್ಣ ಸುತಾರಾಂ ಇದಕ್ಕೆ ಒಪ್ಪಲಿಲ್ಲ. ಇಂಥದ್ದೊಂದು ಪಾತ್ರ ಸೌಂದರ್ಯ ಬಿಟ್ಟರೆ ಯಾರೂ ಮಾಡುವುದಕ್ಕೆ ಸಾಧ್ಯವಿಲ್ಲ, ಆ ತರಹದ ಪ್ರತಿಭಾವಂತ ನಟಿ ಸದ್ಯಕ್ಕೆ ಯಾರೂ ಇಲ್ಲ ಎಂದು ಚಿತ್ರವನ್ನೇ ನಿಲ್ಲಿಸಿಬಿಟ್ಟರು.
    ಇದು ಸೌಂದರ್ಯ ಒಬ್ಬ ನಟಿಯಾಗಿ ಎಷ್ಟು ಹೆಸರು ಮಾಡಿದ್ದರು ಎನ್ನುವುದಕ್ಕೆ ಸಣ್ಣ ಉದಾಹರಣೆ ಅಷ್ಟೇ. ಸೌಂದರ್ಯ ಬದುಕಿದ್ದರೆ, ಇಂತಹ ಹಲವು ಪಾತ್ರಗಳನ್ನು ಮಾಡುತ್ತಿದ್ದರು. ಆದರೆ, ಅವರ ನಿಧನವಾರ್ತೆ ಎಲ್ಲದಕ್ಕೂ ಬ್ರೇಕ್ ಹಾಕಿತು ಎಂದರೆ ತಪ್ಪಿಲ್ಲ.

    ಸೌಂದರ್ಯ ಇಲ್ಲದ 16 ವರ್ಷ; ಗರ್ಭಿಣಿ ಆಗಿದ್ದಕ್ಕೆ ಸಿನಿಮಾ ಕೈಬಿಡುವ ನಿರ್ಧಾರಕ್ಕೆ ಬಂದಿದ್ದರಾ ನಟಿ ಸೌಂದರ್ಯ? ಹಾಗೆ ಹೇಳಿ ಮಾರನೇ ದಿನವೇ ನಡೆಯಿತೊಂದು ದುರಂತ!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts