More

    ಮನೆಯ ಗೋಡೆಯಲ್ಲಿ ಕೇಳುತ್ತೆ ವಿಚಿತ್ರ ಶಬ್ಧ! 20 ದಿನಗಳಿಂದ ಭಯದಲ್ಲೇ ಬದುಕುತ್ತಿದೆ ಈ ಕುಟುಂಬ

    ಲಖನೌ: ಈ ಶತಮಾನದಲ್ಲೂ ದೆವ್ವ ಭೂತಗಳ ಬಗ್ಗೆ ಇರುವ ಭಯವೇನು ಕಡಿಮೆಯಾಗಿಲ್ಲ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ನಡೆಯುವ ಘಟನೆಗಳನ್ನು ಕೇಳಿದರೆ ಮೈ ಝುಂ ಎನಿಸುತ್ತದೆ. ಉತ್ತರ ಪ್ರದೇಶದ ಲಖನೌನಲ್ಲಿನ ಒಂದು ಮನೆಯಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಕೇಳಿದರೆ ನೀವೂ ಒಮ್ಮೆ ಚಿಂತನೆಗೆ ಬೀಳುವುದು ಗ್ಯಾರಂಟಿ.

    ಲಖನೌನ ಆರತಿಯದ್ದು ಸಣ್ಣ ಕುಟುಂಬ. ಗಂಡ-ಹೆಂಡತಿ, ಮಗಳು ಮತ್ತು ಅತ್ತೆ ಒಂದೇ ಮನೆಯಲ್ಲಿ ಬದುಕುತ್ತಿದ್ದಾರೆ. ಆರತಿ ಮತ್ತು ಆಕೆಯ ಗಂಡ ಇಬ್ಬರು ಹಗಲು ಹೊತ್ತಲ್ಲಿ ಕೆಲಸಕ್ಕೆ ಹೋಗುತ್ತಾರೆ. ಕಳೆದ 20 ದಿನಗಳ ಹಿಂದೆ ಅವರ ಮನೆಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ರಾತ್ರಿ ಎಲ್ಲರೂ ಮಲಗಿರುವ ಹೊತ್ತಲ್ಲಿ ಅವರ ಅತ್ತೆ ಮಲಗಿದ್ದ ಕೋಣೆಯ ಗೊಡೆಯಲ್ಲಿ ಏನೋ ವಿಚಿತ್ರ ಸದ್ದು ಕೇಳಲಾರಂಭಿಸಿದೆ. ಅದಾದ ಮೇಲೆ ಆ ಸದ್ದು ಇಡೀ ಮನೆಗೆ ಕೇಳುವಷ್ಟು ಜೋರಾಗಿದೆ.

    ಮೊದಲನೇ ದಿನ ಈ ರೀತಿ ಆದಾಗ, ಬಹುಶಃ ಪಕ್ಕದ ಮನೆಯವರು ಏನಾದರೂ ಕೆಲಸ ಮಾಡಿಸುತ್ತಿರಬೇಕು ಎಂದು ಕುಟುಂಬ ಸುಮ್ಮನಾಗಿದೆ. ಆದರೆ ಪ್ರತಿದಿನ ರಾತ್ರಿ ಇದೇ ರೀತಿ ಸದ್ದು ಕೇಳಲಾರಂಭಿಸಿದೆ. ಅದಾದ ಮೇಲೆ ಎಷ್ಟೊಂದರಷ್ಟೊತ್ತಲ್ಲಿ ಸದ್ದು ಕೇಳಲಾರಂಭಿಸಿದೆ. ಒಂದು ದಿನ ಕೆಲಸ ಬಿಟ್ಟು ಆರತಿ ಮನೆಗೆ ಬೇಗ ಬಂದಿದ್ದಾರೆ. ಸ್ಕೂಟಿಯನ್ನು ಇನ್ನೇನು ಮನೆಯ ಹತ್ತಿರ ನಿಲ್ಲಿಸಬೇಕೆನ್ನುವಷ್ಟರಲ್ಲಿ ಮನೆಯಿಂದ ಜೋರಾಗಿ ಸದ್ದು ಕೇಳಿಸಿದೆ. ಆ ಸದ್ದು ಎಷ್ಟು ಜೋರಾಗಿತ್ತೆಂದರೆ ಒಮ್ಮೆಲೆ ಹೆದರಿದ ಆರತಿ ಗಾಡಿಯಿಂದ ಬಿದ್ದೇ ಹೋಗಿದ್ದಾರೆ.

    ಈ ವಿಚಾರವಾಗಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದೆ. ಕಳೆದ 20 ದಿನಗಳಿಂದ ನಿದ್ರೆಯನ್ನೂ ಮಾಡದೆ ಭಯದಲ್ಲೇ ಜೀವಿಸುತ್ತಿರುವುದಾಗಿ ಕುಟುಂಬ ಹೇಳಿಕೊಂಡಿದೆ. ಕುಟುಂಬದ ರಕ್ಷಣೆಯ ಸಲುವಾಗಿ ಓರ್ವ ಮಹಿಳಾ ಪೇದೆಯನ್ನು ಆರತಿಯ ಮನೆಯಲ್ಲಿರಲು ಕಳುಹಿಸಿಕೊಡಲಾಗಿದೆ. ಪೊಲೀಸ್ ಬಂದ ಮೇಲೆ ಆ ಮನೆಯಲ್ಲಿ ಯಾವುದೇ ಸದ್ದು ಕೇಳಿಸಿಲ್ಲ ಎನ್ನಲಾಗಿದೆ. ಅವರ ಮನೆಯ ಪಕ್ಕದಲ್ಲಿ ಈ ಹಿಂದೆ ಒಂದು ಕುಟುಂಬವಿದ್ದು, ಅದರ ಒಡತಿ ಕೆಲ ತಿಂಗಳ ಹಿಂದೆ ತೀರಿಕೊಂಡಿದ್ದಳು. ಅದಾದ ನಂತರ ಊರಲ್ಲಿ ಕೆಲ ಕೆಟ್ಟ ಘಟನೆಗಳು ನಡೆಯುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಅದೇನೇ ಇರಲಿ, ಸದ್ಯಕ್ಕೆ ಪೊಲೀಸರು ಮಾತ್ರ ತನಿಖೆ ಆರಂಭಿಸಿದ್ದಾರೆ. ತನಿಖೆಯಿಂದ ಈ ಸದ್ದಿನ ಅಸಲಿಯುತ್ತು ಹೊರಬರಬೇಕಿದೆ. (ಏಜೆನ್ಸೀಸ್​)

    ವಾರಕ್ಕೆ 4 ದಿನ ಕೆಲಸ, 3 ದಿನ ರಜೆ! ಕೇಂದ್ರದ ನೂತನ ಕಾರ್ಮಿಕ ಸಂಹಿತೆಯಲ್ಲಿ ಏನಿರಲಿದೆ?

    ಮಾ. 15, 16ರಂದು ದೇಶಾದ್ಯಂತ ಬ್ಯಾಂಕ್​ಗಳ ಮುಷ್ಕರ; ಖಾಸಗೀಕರಣಕ್ಕೆ ವಿರೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts