More

    ಟಿ.ವಿ, ಸಿನಿಮಾ ಶೂಟಿಂಗ್​ಗೆ ಅನುಮತಿ; ಮಾರ್ಗದರ್ಶಿ ಸೂತ್ರ ಬಿಡುಗಡೆ

    ನವದೆಹಲಿ: ಕೇಂದ್ರ ಸರ್ಕಾರ ಸಿನಿಮಾ ಹಾಗೂ ಟಿ.ವಿ. ಕಾರ್ಯಕ್ರಮಗಳ ಚಿತ್ರೀಕರಣಕ್ಕಾಗಿ ಪ್ರಮಾಣಿಕೃತ ನಿರ್ವಹಣಾ ಕಾರ್ಯವಿಧಾನಗಳನ್ನು (ಎಸ್​ಒಪಿ) ಬಿಡುಗಡೆ ಮಾಡಿದೆ.

    ಆರೋಗ್ಯ ಇಲಾಖೆ ಹಾಗೂ ಗೃಹ ಸಚಿವಾಲಯದೊಂದಿಗಿನ ಚರ್ಚೆ ಬಳಿಕ ಈ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್​ ಜಾವಡೇಕರ್​ ಮಾಹಿತಿ ನೀಡಿದ್ದಾರೆ. ಅಗತ್ಯ ಆರೋಗ್ಯ ಸುರಕ್ಷತಾ ಕ್ರಮಗಳೋಂದಿಗೆ ಸಿನಿಮಾ ಹಾಗೂ ಟಿ.ವಿ. ಕಾರ್ಯಕ್ರಮಗಳ ಚಿತ್ರೀಕರಣವನ್ನು ಆರಂಭಿಸಬಹುದು ಎಂದು ಭಾನುವಾರ ತಿಳಿಸಿದ್ದಾರೆ.

    ಇದನ್ನೂ ಓದಿ; ಸುಶಾಂತ್​ ಸಿಂಗ್​ ರಜಪೂತ್​ ಮಾದಕ ದ್ರವ್ಯ ವ್ಯಸನಿಯೇ? ತನಿಖೆಯಲ್ಲಿ ಹೊರಬಿತ್ತು ಭಯಾನಕ ಸತ್ಯ…! 

    ಕ್ಯಾಮರಾ ಎದುರಿಸುವ ಕಲಾವಿದರು ಹೊರತುಪಡಿಸಿ ಉಳಿದೆಲ್ಲರೂ ಮಾಸ್ಕ್​ ಧರಿಸಬೇಕು. ಉಳಿದಂತೆ ಆರೋಗ್ಯ ಇಲಾಖೆಯ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

    ಸೋಂಕಿಗೆ ಒಳಗಾಗುವ ಅಧಿಕ ಸಂಭಾವ್ಯತೆವುಳ್ಳವರು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮಾಸ್ಕ್​ ಧರಿಸುವುದು, ಸ್ಯಾನಿಟೈಸರ್​ ಬಳಕೆ ಕಡ್ಡಾಯವಾಗಿರಲಿದೆ. ಅಗತ್ಯವಾದಲ್ಲಿ ಪಿಪಿಇ ಕಿಟ್​ ಬಳಕೆ, ಜತೆಗೆ ಆರೋಗ್ಯಸೇತು ಆ್ಯಪ್​ ಹೊಂದಿರುವುದು ಅಪೇಕ್ಷಣೀಯವಾಗಿದೆ.

    ಇದನ್ನೂ ಓದಿ; ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?

    ಥರ್ಮಲ್​ ಸ್ಕ್ರೀನಿಂಗ್​ ಮಾಡಬೇಕು, ಕೋವಿಡ್​ ಗುಣಲಕ್ಷಣವಿಲ್ಲದವರನ್ನು ಮಾತ್ರ ಕಾರ್ಯಕ್ರಮದಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಜನದಟ್ಟಣೆ ಉಂಟಾಗುವುದನ್ನು ತಡೆಯುವುದಲ್ಲದೇ, ಸಾಧ್ಯವಾದಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

    ಚಿತ್ರೀಕರಣದ ಸೆಟ್​ಗಳಲ್ಲಿ ಸಂದರ್ಶಕರು ಅಥವಾ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಬಾರದು. ಹೊರಾಂಗಣ ಚಿತ್ರೀಕರಣದ ವೇಳೆ ಜನರು ಸೇರುವುದನ್ನು ತಡೆಯಲು ಸ್ಥಳೀಯಾಡಳಿತದೊಂದಿಗೆ ಸಮನ್ವಯತೆ ಹೊಂದಿರಬೇಕು ಎಂದು ಹೇಳಲಾಗಿದೆ.

    ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಮಾರ್ಗಸೂಚಿ

    • ಸೆಟ್​ನಲ್ಲಿ ಕ್ಯಾಮರಾ ಎದುರಿಗಿನ ಕಲಾವಿದರನ್ನು ಹೊರತು ಪಡಿಸಿ ಎಲ್ಲರೂ ಕಡ್ಡಾಯ ಮಾಸ್ಕ್​ ಧರಿಸುವುದು
    • ವ್ಯಕ್ತಿಯಿಂದ ವ್ಯಕ್ತಿಗೆ 6 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ
    • ಶೂಟಿಂಗ್​ ದೃಶ್ಯಗಳಲ್ಲಿಯೂ ಸಾಮಾಜಿಕ ಅಂತರ ಇರಲೇಬೇಕು
    • ಸೀಮಿತ ಕಾರ್ಮಿಕರ ಬಳಕೆ
    • ಹೊರಾಂಗಣ ಚಿತ್ರೀಕರಣಕ್ಕೆ ಸಂಬಂಧಿಸಿದವರಿಂದ ಪರನಾನಗಿ ಪಡೆದುಕೊಳ್ಳಬೇಕು
    • ಸೆಟ್​ ಆಗಮನವಾಗುವ ಮತ್ತು ನಿರ್ಗಮನದ ವೇಳೆ ಸ್ಕ್ರೀನಿಂಗ್​ ಮತ್ತು ಉಷ್ಣಾಂಶ ಪರೀಕ್ಷೆ
    • ಮಾಸ್ಕ್​ ಜತೆಗೆ ಕೈಗವುಸು, ಪಿಪಿಇ ಕಿಟ್​ ಬಳಸಬೇಕು
    • ಮೇಕಪ್​ ಮತ್ತು ಹೇರ್​ಸ್ಟೈಲ್​ ಆರ್ಟಿಸ್ಟ್​ ಕಡ್ಡಾಯವಾಗಿ ಪಿಪಿಇ ಕಿಟ್ ಬಳಸಬೇಕು
    • ಹ್ಯಾಂಡ್​ವಾಶ್ ಕಡ್ಡಾಯ
    • ಸೆಟ್​ನಲ್ಲಿ ಎಲ್ಲೆಂದರಲ್ಲಿ ಉಗುಳುವಂತಿಲ್ಲ
    • ಪ್ರತಿದಿನ ಥರ್ಮಲ್ ಸ್ಕ್ರೀನಿಂಗ್ ನಡೆಸುವುದು ಕಡ್ಡಾಯ.
    • ಕರೊನಾ ರೋಗಲಕ್ಷಣ ಇರುವ ವ್ಯಕ್ತಿಗೆ ಐಸೋಲೇಶನ್‌ ಮಾಡಬೇಕು.
    • ಅನಗತ್ಯವಾಗಿ ಬೇರೊಬ್ಬರಿಗೆ ಸೆಟ್​ನಲ್ಲಿ ಎಂಟ್ರಿ ನಿಷೇಧ
    • ಮೇಕಪ್‌ ರೂಮ್, ಶೌಚಗೃಹ ಸೇರಿ ಸೆಟ್‌ ಅನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು

    ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts