More

    ಬೇಡಿಕೆಯಲ್ಲಿದ್ದರೂ ಬೆರಳಣಿಕಯಷ್ಟು ಸಿನಿಮಾ: ಕಂಗನಾ ಬಳಿಕ ಬಾಲಿವುಡ್​​ ಕರಾಳತೆ ಬಿಚ್ಚಿಟ್ಟ ನಟಿ ಸೋನಾಲಿ ಬೇಂದ್ರೆ

    ಮುಂಬೈ: ತೊಂಬತ್ತರ ದಶಕದಲ್ಲಿ ಟಾಪ್​ ನಟಿಯರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸೋನಾಲಿ ಬೇಂದ್ರೆ ಅಪ್ರತಿಮ ಸೌಂದರ್ಯ ಹಾಗೂ ನಟನಾ ಕೌಶಲ್ಯವಿದ್ದರೂ ಬೆರಳಣಿಕೆ ಚಿತ್ರದಲ್ಲಷ್ಟೇ ಕಾಣಿಸಿಕೊಂಡಿದ್ದಾರೆ. ತಾವು ಬಹುಬೇಡಿಕೆ ನಟಿಯಾಗಿದ್ದರು, ಚಿತ್ರಗಳ ಸಂಖ್ಯೆ ಕಡಿಮೆ ಹೇಗಾಯಿತು ಎಂಬುದನ್ನು ಈಗ ಬಹಿರಂಗಪಡಿಸಿದ್ದಾರೆ.

    ಬಾಲಿವುಡ್​ನಲ್ಲಿ ತಮಗೇಕೆ ದೊಡ್ಡ ಹೆಸರು ಮಾಡಲು ಸಾಧ್ಯವಾಗಲಿಲ್ಲ, ಅಲ್ಲದೇ ಬಾಲಿವುಡ್​ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆಯೂ ಹೇಳಿರುವ ನಟಿ ಸೋನಾಲಿ, ಬಾಲಿವುಡ್​ನ ಕರಾಳತೆಯ ಬಗ್ಗೆ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

    ಬಾಲಿವುಡ್​ಗೆ ಭೂಗತ ಜಗತ್ತಿನ ನಂಟಿತ್ತು, ಎಂಬ ವಿಷಯವನ್ನು ಧೈರ್ಯವಾಗಿಯೇ ಹೇಳಿದ್ದಾರೆ. ಈ ಹಿಂದೆ ಬಾಲಿವುಡ್​ನ ಬಗ್ಗೆ ಟೀಕಿಸುತ್ತಿದ್ದ ಕಂಗನಾ ನಂತರ ಇದೀಗ ನಟಿ ಸೋನಾಲಿ ಬೇಂದ್ರೆ ಕೂಡ ಬಾಲಿವುಡ್​ನಲ್ಲಿ ಒಳರಾಜಕೀಯಗಳು ಯಾವ ರೀತಿ ಇತ್ತು ಎಂಬುದನ್ನು ತಿಳಿಸಿದ್ದಾರೆ.

    90 ರದಶಕದಲ್ಲಿ ಸಾಕಷ್ಟು ಸಿನಿಮಾಗಳ ಅವಕಾಶವಿತ್ತು, ಆ ಸಮಯದಲ್ಲಿ ಬಾಲಿವುಡ್ ಮೇಲಿದ್ದ ಭೂಗತ ಲೋಕದ ಪ್ರಭಾವದಿಂದ ಹೆಚ್ಚು ಅವಕಾಶಗಳು ಸಿಗಲಿಲ್ಲ, ಸಿಕ್ಕ ಅವಕಾಶಗಳು ಬೇರೆಯವರ ಪಾಲಾದವು ಎಂದು ನಟಿ ಸೋನಾಲಿ ಹೇಳಿದ್ದಾರೆ. ಕೆಟ್ಟ ಸಮಯದಲ್ಲಿ ತಮ್ಮ ತಮ್ಮ ಪತಿ ನಿರ್ಮಾಪಕ ಗೋಲ್ಡಿ ಬೇಲ್​ ಸಹಾಯ ಮಾಡಿದರು ಆದ್ದರಿಂದ ಇಂದಿನವರೆಗೂ ಹೀಗೆಯೇ ಇರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

    ಅಪರಾಧಿ ಹಿನ್ನೆಲೆಯುಳ್ಳವರು ಹಣ ಹೂಡಿದ ಸಿನಿಮಾಗಳಲ್ಲಿ ನಟಿಸುವುದರಿಂದ ನಾನು ಹಿಂದೆ ಸರಿದೆ. ಆ ಸಮಯದಲ್ಲಿ ನನ್ನ ಬಾಯ್​ಫ್ರೆಂಡ್​ ಆಗಿದ್ದ ನನ್ನ ಪತಿ ಆ ವಿಷಯದಲ್ಲಿ ಸಹಾಯ ಮಾಡಿದರು. ನಾನು ಒಂದೇ ಪಾತ್ರಕ್ಕೆ ಫಿಕ್ಸ್​ ಆಗಿರುತ್ತಿದ್ದೆ, ನಂತರ ಯಾರದ್ದೋ ಒತ್ತಾಯಕ್ಕೆ ಮಣಿದು ಆ ಪಾತ್ರವನ್ನೂ ನನ್ನಿಂದ ಪಡೆದು ಬೇರೆಯವರಿಗೆ ನೀಡಿದ್ದೂ ಇದೆ. ಆ ವೇಳೆ ನಿರ್ದೇಶಕರೋ, ಸಹ ನಟರು ಕ್ಷಮೆ ಕೇಳುವುದು ನಾನು ಪರವಾಗಿಲ್ಲ ಎನ್ನುವುದು ಸಾಮಾನ್ಯವಾಗಿತ್ತು. ಇದೇ ಕಾರಣದಿಂದ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts