More

    ಪ್ಯಾಟೆ ಹುಡುಗಿ ಹಳ್ಳಿಗೆ ಬಂದಾಗ; ಗಾಜನೂರಿನತ್ತ ಸೋನಲ್ ಪಯಣ..

    ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಸೋನಲ್ ಮೊಂತೆರೋ ಸಾಲುಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಅವರ ನಾಲ್ಕೈದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದರೆ, ಇನ್ನೂ ಕೆಲವು ಕೊನೇ ಹಂತದ ಶೂಟಿಂಗ್​ನಲ್ಲಿವೆ. ಇದೀಗ ಅವರ ಸಿನಿಮಾ ಬತ್ತಳಿಕೆಗೆ ಹೊಸ ಸಿನಿಮಾವೊಂದು ಸೇರ್ಪಡೆಯಾಗಿದೆ. ಅದೇ ‘ಗಾಜನೂರು’!

    ‘ಗಾಜನೂರು’ ಎಂದಾಕ್ಷಣ ಇದು ಡಾ. ರಾಜಕುಮಾರ್ ಅವರಿಗೆ ಅಥವಾ ಅವರ ಊರಿಗೆ ಸಂಬಂಧಿಸಿದ ಸಿನಿಮಾ ಎಂದುಕೊಳ್ಳಬೇಡಿ. ಈ ಗಾಜನೂರಿನ ಕಥೆಯೇ ಬೇರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿಯೂ ಗಾಜನೂರು ಎಂಬ ಊರಿದೆ. ಆ ಊರಿನಲ್ಲಿ ನಡೆಯುವ ಕಥೆ ಇದು. ನೈಜ ಘಟನೆಯನ್ನೇ ಸಿನಿಮಾ ಶೈಲಿಯಲ್ಲಿ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕ ವಿಜಯ್. ಅವತಾರ್ ಈ ಚಿತ್ರದ ನಾಯಕ. ಕಲಬುರಗಿ ಮೂಲದ ಅವಿನಾಶ್ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಮುಹೂರ್ತಕ್ಕೆ ಅತಿಥಿಗಳಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್ ಭಾಗವಹಿಸಿ ತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರದ ಭಾಗವಾಗುತ್ತಿರುವುದಕ್ಕೆ ನಟಿ ಸೋನಲ್ ಸಹ ಅಷ್ಟೇ ಸಂಭ್ರಮದಲ್ಲಿದ್ದಾರೆ. ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ. ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಹಳ್ಳಿ ಹುಡುಗಿ ಪಟ್ಟಣಕ್ಕೆ ಬಂದು ಹೇಗೆ ಜೀವನ ಮಾಡ್ತಾಳೆ? ಹೇಗೆ ಸಮಸ್ಯೆಗಳನ್ನು ಎದುರಿಸ್ತಾಳೆ? ಇವೆಲ್ಲದರ ನಡುವೆ ಒಂದು ಮುದ್ದಾದ ಲವ್​ಸ್ಟೋರಿ ಸಾಗಲಿದೆ’ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ ಸೋನಲ್.

    ಸದ್ಯ ಸೋನಲ್ ನಟಿಸಿರುವ ‘ರಾಬರ್ಟ್’ ಮಾರ್ಚ್ 11ಕ್ಕೆ ಬಿಡುಗಡೆ ಆಗಲಿದೆ. ‘ಬನಾರಸ್’ ಚಿತ್ರೀಕರಣ ಮುಗಿದರೆ, ‘ಬುದ್ಧಿವಂತ’, ‘ತಲ್ವಾರ್ ಪೇಟೆ’, ‘ನಟ್ವರ್​ಲಾಲ್’ ಮತ್ತು ‘ಶಂಭೋ ಶಿವ ಶಂಕರ’ ಚಿತ್ರಗಳ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ ಸೋನಲ್. ಇತ್ತೀಚೆಗಷ್ಟೇ ‘ಶುಗರ್ ಫ್ಯಾಕ್ಟರಿ’ ಶುರುವಾಗಿದ್ದು, ಫೆಬ್ರವರಿಯಿಂದ ‘ಗಾಜನೂರು’ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

    ವಕೀಲರ ಡ್ರೆಸ್​ಕೋಡ್​ಗಿದ್ದ ವಿನಾಯಿತಿ ರದ್ದು, ಕೋಟ್​ ಧರಿಸುವಿಕೆ ಕಡ್ಡಾಯ

    ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts