More

    ಸೈಬರ್​ ಕಿರುಕುಳದ ವಿರುದ್ಧ ‘ಮಿಷನ್​ ಜೋಶ್​’ ಶುರು ಮಾಡಿದ ಸೋನಾಕ್ಷಿ

    ಬಹುಶಃ ಇಂಟರ್​ನೆಟ್​ನಲ್ಲಿ ಅತೀ ಹೆಚ್ಚು ಕಿರುಕುಳ ಅನುಭವಿಸಿದ ಬಾಲಿವುಡ್​ ನಟಿ ಎಂದರೆ ಸೋನಾಕ್ಷಿ ಸಿನ್ಹಾ ಇರಬೇಕು. ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ, ರಾಮಾಯಣದ ಕುರಿತಾಗಿ ಒಂದು ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟಿದ್ದಿಕ್ಕೆ ಸೋನಾಕ್ಷಿಯನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದರು.

    ಅದೊಂದೇ ಪ್ರಕರಣವಲ್ಲ, ಸೋನಾಕ್ಷಿ ತೂಕ ಹೆಚ್ಚಿಸಿಕೊಂಡಿದ್ದಾಗ, ಸ್ವಜನಪಕ್ಷಪಾತದ ವಿರುದ್ಧ ಧ್ವನಿ ಕೇಳಿ ಬಂದಾಗ ಮುಂತಾದ ಹಲವು ವಿಷಯಗಳಲ್ಲಿ ಸೋನಾಕ್ಷಿ ಸಿನ್ಹಾ ಅನಿವಾರ್ಯವಾಗಿ ತುಂಬಾ ದೊಡ್ಡ ಮಟ್ಟದಲ್ಲಿ ಟ್ರೋಲ್​ ಆಗಿದ್ದರು.

    ಇದನ್ನೂ ಓದಿ: ಒಂಟಿತನಕ್ಕೆ ಬೈ ಬೈ ಹೇಳಿದ್ರು ಹಾಟ್​ ಬೆಡಗಿ ಪೂನಂ ಪಾಂಡೆ; ಬಹುಕಾಲದ ಗೆಳೆಯನ ಜತೆ ಎಂಗೇಜ್ಡ್..

    ಈಗ ಸೈಬರ್​ ಕಿರುಕುಳದ ವಿರುದ್ಧ ಸೋನಾಕ್ಷಿ ಧ್ವನಿ ಎತ್ತಿದ್ದಾರೆ. ಸೈಬರ್​ ಕಿರುಕುಳವನ್ನು ನಿಲ್ಲಿಸುವ ನಿಟ್ಟಿನಲ್ಲಿ ಅವರು ‘ಮಿಷನ್​ ಜೋಶ್​’ ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ, ಸೈಬರ್​ ಕಿರುಕುಳ ಕೊಟ್ಟು ಮಾನಸಿಕ ಹಿಂಸೆ ನೀಡುವ ಟ್ರೋಲಿಗರ ವಿರುದ್ಧ ಅವರು ತೊಡೆ ತಟ್ಟಿ ನಿಂತಿದ್ದಾರೆ.

    ಸತತ ಟ್ರೋಲ್​ ಮಾಡುವ ಜನರಿಗೆ, ಸೈಬರ್​ ಕಿರುಕುಳ ನೀಡುವ ಜನರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಅವರು ಮಹಾರಾಷ್ಟ್ರದ ಸ್ಪೆಷಲ್​ ಐಜಿಪಿ ಪ್ರತಾಪ್​ ದಿಗಾವ್ಕರ್​ ಅವರ ಮೊರೆ ಹೋಗಿದ್ದಾರೆ. ಸೈಬರ್​ ಕಿರುಕುಳದ ಕುರಿತು ಜಾಗೃತಿ ಮೂಡಿಸುವುದರ ಜತೆಗೆ, ಜನರಿಗೆ ಸೈಬರ್​ ಯುಗದಲ್ಲಿ ಹೇಗಿರಬೇಕು, ಏನು ಮಾಡಬಾರದು ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಹೊರಟಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಕೇಸ್​ ಸಿಬಿಐಗೆ ಯಾಕೆ ಒಪ್ಪಿಸುತ್ತಿಲ್ಲ? ಅಭಿಮಾನಿಗಳ ಪ್ರಶ್ನೆ …

    ಸತತ ಕಿರುಕುಳದಿಂದ ಬೇಸತ್ತಿದ್ದ ಸೋನಾಕ್ಷಿ ಇತ್ತೀಚೆಗೆ ತಮ್ಮ ಟ್ವಿಟರ್​ ಅಕೌಂಟ್​ ಡಿಆಕ್ಟಿವೇಟ್​ ಮಾಡಿಕೊಂಡಿದ್ದರು. ಅದರಿಂದ ನೆಗೆಟಿವಿಟಿ ಹೆಚ್ಚುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾದಿಂದ ದೂರವಿರುವುದಾಗಿ ಅವರು ಘೋಷಿಸಿದ್ದರು. ಈಗ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡುತ್ತಿರುವವರ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಈ ಹಿಂದೆ ಸಿನಿಮಾಗಳಲ್ಲಿ ಸೋನಾಕ್ಷಿ ಸಿನ್ಹಾ ಹಲವು ವಿಲನ್​ಗಳ ವಿರುದ್ಧ ತಿರುಗಿಬಿದ್ದು ಗೆದ್ದಿದ್ದಿದೆ. ಈಗ ರಿಯಲ್​ ಲೈಫ್​ನಲ್ಲೂ ಅವರು ಈ ಅಭಿಯಾನದಿಂದ ಸೈಬರ್​ ಕಿರುಕುಳದ ವಿರುದ್ಧ ಗೆಲ್ಲುವುದರ ಜತೆಗೆ, ಬೇರೆಯವರನ್ನೂ ರಕ್ಷಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    ಎ-ಗ್ರೇಡ್​ ನಟಿಯಾಗುವುದು ಹೇಗೆ? ತಾಪ್ಸಿಗೆ ಟೀಮ್​ ಕಂಗನಾ ಕೊಟ್ಟ ಸಲಹೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts