More

    ಸಮುದಾಯ, ದೇಶವನ್ನು ಒಡೆಯುವ ವೈರಸ್​ಗಳು ಹೆಚ್ಚಾಗಿವೆ: ಪ್ರಧಾನಿ ಮೋದಿ

    ನವದೆಹಲಿ: ಇಡೀ ಜಗತ್ತು ಕೊವಿಡ್​-19ರ ವಿರುದ್ಧ ಹೋರಾಡುತ್ತಿದ್ದರೆ, ಕೆಲವು ಜನರು ಬೇರೆ ಕೆಲವು ವೈರಸ್​ಗಳನ್ನು ಹರಡುವಲ್ಲಿ ಬಿಜಿಯಾಗಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

    ಇಂದು ಅಲಿಪ್ತ ಚಳವಳಿ ರಾಷ್ಟ್ರಗಳ ಶೃಂಗಸಭೆ (ನಾಮ್​)ಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಸದ್ಯ ಕರೊನಾ ವೈರಸ್​ ಬಿಕ್ಕಟ್ಟು ಹೆಚ್ಚಾಗಿದೆ. ಇಡೀ ವಿಶ್ವ ಕೊವಿಡ್​ ವಿರುದ್ಧ ಹೋರಾಡುತ್ತಿದೆ. ಇದೇ ಸಮಯದಲ್ಲಿ ಕೆಲವರು ಭಯೋತ್ಪಾದನೆ, ನಕಲಿ ಸುದ್ದಿಗಳಂತಹ ಮಾರಕ ವೈರಸ್​ ಹರಡುವ ಮೂಲಕ ಸಮುದಾಯ, ದೇಶವನ್ನು ಒಡೆಯುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಪ್ರಜಾಪ್ರಭುತ್ವ, ಶಿಸ್ತು ಮತ್ತು ನಿಶ್ಚಿತತೆಗಳಿಂದ ಜನಾಂದೋಲನ ಸೃಷ್ಟಿಸಬಹುದು ಎಂದು ನಾವು ಈ ಕರೊನಾ ಸಂಕಷ್ಟದ ಕಾಲದಲ್ಲಿ ತೋರಿಸಿದ್ದೇವೆ. ಭಾರತೀಯರು ಇಡೀ ವಿಶ್ವವನ್ನು ಒಂದು ಕುಟುಂಬದಂತೆ ನೋಡುತ್ತೇವೆ. ನಾವು ನಮ್ಮ ದೇಶದ ಜನರ ಸುರಕ್ಷತೆಯ ಜತೆಗೆ ಇತರ ರಾಷ್ಟ್ರಗಳಿಗೂ ಕೊವಿಡ್​ ಎದುರಿಸಲು ಸಹಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ಕೆಎಸ್​ಆರ್​ಟಿಸಿಗೆ ಕೊಟ್ಟ ಚೆಕ್​ ಮೇಲೆ ನನ್ನ ಸಹಿ ಇಲ್ಲ..ಹಾಗಾಗಿ ಅದು ನಕಲಿ ಎಂದು ಅಶೋಕಣ್ಣ ಹೇಳಿದಾರೆ..ಆದ್ರೆ….’

    ನಾವು ನಮ್ಮ ನೆರೆರಾಷ್ಟ್ರಗಳಿಗೆ ವೈದ್ಯಕೀಯ ಸಹಾಯ ಮಾಡಿದ್ದೇವೆ. ನಮ್ಮ ದೇಶದ ವೈದ್ಯಕೀಯ ತಜ್ಞರು ಅಗತ್ಯ ಇರುವ ರಾಷ್ಟ್ರಗಳ ವೈದ್ಯಕೀಯ ಸಿಬ್ಬಂದಿಗೆ ಆನ್​ಲೈನ್ ಮೂಲಕವೇ ತರಬೇತಿ ನೀಡುತ್ತಿದ್ದಾರೆ. ಇವತ್ತು ಇಡೀ ಮನುಕುಲ ಕೊವಿಡ್​-19ರಿಂದ ತೀವ್ರ ಸಂಕಷ್ಟಕ್ಕೀಡಾಗಿದೆ. ಈ ಸಮಯದಲ್ಲಿ ನಾಮ್​ ಜಾಗತಿಕ ಒಗ್ಗಟ್ಟನ್ನು ಪ್ರೋತ್ಸಾಹಿಸಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಜಗತ್ತಿನಾದ್ಯಂತ ಏರುಗತಿಯಲ್ಲಿದೆ ಚೀನಾ ವಿರೋಧಿ ಭಾವನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts