More

    ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಮತ್ತೆ ಅಡ್ಡಿ ಜಾಲತಾಣದಲ್ಲಿ ವಿಡಿಯೋ ವೈರಲ್

    ಬೆಂಗಳೂರು: ಆರೋಗ್ಯ ಸಮೀಕ್ಷೆಗೆ ತೆರಳಿದ್ದ ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯ ಸಮೀಕ್ಷೆಗಾಗಿ ಬಿಬಿಎಂಪಿ ವತಿಯಿಂದ ಆಶಾ ಕಾರ್ಯಕರ್ತರು ತೆರಳಿದ್ದಾರೆ. ಬಡಾವಣೆಯೊಂದರ ಮನೆಯಲ್ಲಿ ದಾಖಲಾತಿ ಕೇಳುತ್ತಿದ್ದಾಗ, ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಪ್ರಶ್ನಿಸಿದ್ದಾನೆ.

    ಆಗ ಆಶಾ ಕಾರ್ಯಕರ್ತೆಯರು ಗುರುತಿನಚೀಟಿ ತೋರಿಸಿದರೂ ಯಾರ್ಯಾರಿಗೋ ಫೋನ್ ಮಾಡಿ, ದಾಖಲಾತಿ ಕೇಳುತ್ತಿದ್ದಾರೆ ಎಂದು ಮಾಹಿತಿ ಮುಟ್ಟಿಸಿದ್ದಾನೆ. ಅಲ್ಲದೆ, ದಾಖಲಾತಿ ಕೇಳಲು ನೀವು ಯಾರು? ನಿಮಗೆ ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿ ಉದ್ಧಟತನ ತೋರಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರ ಜತೆಗೂ ವಾಗ್ವಾದ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಬ್ಯಾಟರಾಯನಪುರ ಪೊಲೀಸರು ತಿಳಿಸಿದ್ದಾರೆ.

    ನರ್ಸ್​ಗಳಿಗೆ ಆನ್​ಲೈನ್​ನಲ್ಲಿ ಕರೊನಾ ತರಬೇತಿ: ರಾಜೀವ್​ಗಾಂಧಿ ವಿವಿ, ನಿಮ್ಹಾನ್ಸ್ ಸಹಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts