More

    ಕಾರ್ಯಕರ್ತೆಯರ ಸೇವೆ ಅನನ್ಯ

    ಇಂಡಿ: ಕರೊನಾ ಮಹಾಮಾರಿ ರೋಗವನ್ನು ತಡೆಗಟ್ಟುವಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಲ್ಲಿಸಿರುವ ಸೇವೆ ಪ್ರಶಂಸನೀಯ ಎಂದು ಜಿಪಂ ಸಿಇಒ ಗೋವಿಂದರೆಡ್ಡಿ ಹೇಳಿದರು.

    ತಾಲೂಕಿನ ಅಥರ್ಗಾ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಆಶಾ ಕಾರ್ಯಕರ್ತೆಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕರೊನಾ ಎರಡನೇ ಅಲೆ ಹಳ್ಳಿ-ಹಳ್ಳಿಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಆಸ್ಪತ್ರೆಗಳ ಮತ್ತು ಔಷಧಗಳ ಕೊರತೆ ಉಂಟಾಗಿತ್ತು. ಜನರು ಆಂತಂಕದಲ್ಲಿ ಇದ್ದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಮನೆ-ಮನೆಗಳಿಗೆ ತೆರಳಿ ಸರ್ವೇ ಕಾರ್ಯ ಮಾಡಿದ್ದಾರೆ. ರೋಗದ ಲಕ್ಷಣಗಳನ್ನು ಹೊಂದಿದವರ ಬಗ್ಗೆ ಮಾಹಿತಿ ಪಡೆದು ಪ್ರಾಥಮಿಕ ಔಷಧ ಕಿಟ್‌ಗಳನ್ನು ನೀಡಿ, ಮನೆಯಲ್ಲಿಯೇ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದಾರೆ. ಇದರಿಂದ ಕೋವಿಡ್ ಹತೋಟಿಗೆ ಬಂದಿದೆ. ಇದರ ಶ್ರೇಯ ಆಶಾ ಕಾರ್ಯಕರ್ತೆಯರಿಗೆ ಸಲ್ಲುತ್ತದೆ ಎಂದರು. ಆಶಾ ಕಾರ್ಯಕರ್ತೆಯರಿಗೆ ಶಾಲು ಹೊದಿಸಿ ಸನ್ಮಾನಿಸಿ ಸೀರೆ ನೀಡಿ ಗೌರವಿಸಲಾಯಿತು.

    ಗ್ರಾಪಂ ಅಧ್ಯಕ್ಷೆ ಸುವರ್ಣ ಶಿವೂರ, ಉಪಾಧ್ಯಕ್ಷ ಸತೀಶ ಜಿಗಜಿಣಗಿ, ಪಿಡಿಒ ಎಸ್.ಸಿ.ಲೋಣಿ, ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ತಾಳಿಕೋಟಿ, ಖಾಸಗಿ ವೈದ್ಯ ಡಾ.ಪರಶುರಾಮ ಕನ್ನೂರ, ಡಾ.ಮಲ್ಲಿಕಾರ್ಜುನ ಹದರಿ, ಡಾ. ರೇಣುಕಾ ಕಬಾಡೆ, ಗ್ರಾಮದ ಮುಖಂಡರಾದ ನಾಗುಗೌಡ ಪಾಟೀಲ, ಅಶೋಕಗೌಡ ಬಿರಾದಾರ, ಸಿದ್ದರಾಯ ಲೋಣಿ, ಶ್ರೀಶೈಲ ನಾಗಣಸೂರ, ಜಟ್ಟೆಪ್ಪ ಲೋಣಿ, ಗ್ರಾಪಂ ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts