More

    ನಾಪತ್ತೆಯಾದ 7 ಮಂದಿ ಕಾಡಿನಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಶವಗಳಾಗಿ ಪತ್ತೆ; ಇಲ್ಯಾಕೆ ಮತ್ತೆ ಮತ್ತೆ ಹೀಗಾಗಿದೆ!?

    ಥಾಣೆ: ಒಬ್ಬರಲ್ಲ, ಇಬ್ಬರಲ್ಲ, ಒಟ್ಟು ಏಳು ಮಂದಿ..!
    ಹೌದು.. ಈ ಪ್ರದೇಶದಲ್ಲಿ ಇದುವರೆಗೆ ಏಳು ಮಂದಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಎಲ್ಲರ ಶವಗಳೂ ಕಾಡಿನಲ್ಲಿ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ ಆಗಿವೆ. ಹೀಗೆ ನಾಪತ್ತೆ ಆಗಿರುವ ಜನರು ಕಾಡಿನಲ್ಲಿ ಮರದಲ್ಲಿ ನೇತಾಡುತ್ತಿರುವ ಶವಗಳಾಗಿ ಪತ್ತೆ ಆಗಿರುವುದು ಇಲ್ಲಿನ ಪೊಲೀಸರು ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.

    ಸದ್ಯ ಇಂಥ ಎರಡು ಪ್ರಕರಣಗಳು ಪತ್ತೆ ಆಗಿದ್ದು, ಒಟ್ಟು ಏಳು ಜನರು ಜೀವ ಕಳೆದುಕೊಂಡಂತಾಗಿದೆ. ಇನ್ನೊಬ್ಬರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಒಂದು ಪ್ರಕರಣದಲ್ಲಿ 50 ದಿನಗಳ ಬಳಿಕ, ಇನ್ನೊಂದು ಪ್ರಕರಣದಲ್ಲಿ ಆರು ದಿನಗಳಲ್ಲಿ ಶವಗಳು ಪತ್ತೆಯಾಗಿವೆ.

    ಮಹಾರಾಷ್ಟ್ರದ 35 ವರ್ಷದ ಶ್ರೀಪತ್ ಬಂಗ್ರಿ ಅವರ ಪತ್ನಿ ರಂಜನ್​ (30) ಹಾಗೂ ಅವರ ಮಕ್ಕಳಾದ ದರ್ಶನ (12), ರೋಹಿತ್​ (9), ರೋಹಿಣಿ (6) ಅಕ್ಟೋಬರ್ 21ರಂದು ನಾಪತ್ತೆ ಆಗಿದ್ದು, 50 ದಿನಗಳ ಬಳಿಕ ಅವರ ಶವಗಳು ಪತ್ತೆ ಆಗಿವೆ. ಈ ವಿಷಯ ತಿಳಿದ ಶ್ರೀಪತ್ ಶುಕ್ರವಾರ ವಿಷ ಕುಡಿದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

    ಬಂಗ್ರಿ ಅವರ ಸಹೋದರ ಮಹಾರಾಷ್ಟ್ರದ ಭಿವಂಡಿಯ ಉಬರ್​ಖಂಡ್​-ಪಚ್ಚಾಪುರ್ ಅರಣ್ಯಕ್ಕೆ ಸೌದೆ ತರಲು ಹೋಗಿದ್ದಾಗ ರಂಜನ್ ಹಾಗೂ ಆಕೆಯ ಮೂವರು ಮಕ್ಕಳ ಶವಗಳು ಕೊಳೆತ ಹಾಗೂ ಮರಗಳಿಂದ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಧರಿಸಿದ್ದ ಬಟ್ಟೆಗಳ ಆಧಾರದ ಮೇಲೆ ಅವರ ಶವಗಳನ್ನು ಖಚಿತ ಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮರಣೋತ್ತರ ಪರೀಕ್ಷೆಗೆ ಒಪ್ಪಿಸಲಾಗಿದೆ.

    ಪದ್ಘಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಲ್ಲಿನ ಪೊಲೀಸ್ ಅಧಿಕಾರಿ ಡಿ.ಎಂ. ಕಟ್ಕೆ ತನಿಖೆ ಕೈಗೆತ್ತಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಇಂಥದ್ದು ಇದು ಎರಡನೇ ಸಲ ವರದಿ ಆಗಿರುವುದು. ಈ ಹಿಂದೆ ಎಂದರೆ ನ. 14ರಂದು ಮೂವರು ಪುರುಷರು ನಾಪತ್ತೆಯಾಗಿದ್ದು, ಬಳಿಕ ನ. 20ರಂದು ಅವರ ಶವಗಳು ಷಹಪುರದ ಖರ್ಡಿ ಅರಣ್ಯದ ಮರಗಳಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದವು ಎಂದು ಥಾಣೆಯ ಗ್ರಾಮೀಣ ಡಿವಿಷನಲ್ ಪೊಲೀಸ್ ಆಫೀಸರ್​ ನವನಾಥ್ ಧವಲೆ ತಿಳಿಸಿದ್ದಾರೆ. ಈ ಮೂವರು ಐಶ್ವರ್ಯ ಹಾಗೂ ಅಮರತ್ವಕ್ಕಾಗಿ ಮಾಟಮಂತ್ರಕ್ಕೆ ಮೊರೆ ಹೋಗಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಬಂಗ್ರಿ ಪತ್ನಿ ಹಾಗೂ ಮಕ್ಕಳ ಸಾವಿನ ಬಗ್ಗೆ ನಿಖರವಾದ ಮಾಹಿತಿ ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಿದೆ. (ಏಜೆನ್ಸೀಸ್​)

    ಅಬ್ಬಬ್ಬಾ ಇದೆಂಥ ಮದ್ವೆ!; ಊಟಕ್ಕೆ ಕರೆಯೋ ಬದಲು ಮನೆಮನೆಗೂ ಊಟ ಕಳಿಸಿದ್ರು!

    ಪಡಿತರ ಅಕ್ಕಿ ಮಾರಾಟ ಮಾಡಿ ಸಿಕ್ಕಿಬಿದ್ದರೆ 6 ತಿಂಗಳು ಕಾರ್ಡ್ ಸಸ್ಪೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts