ಅಬ್ಬಬ್ಬಾ ಇದೆಂಥ ಮದ್ವೆ!; ಊಟಕ್ಕೆ ಕರೆಯೋ ಬದಲು ಮನೆಮನೆಗೂ ಊಟ ಕಳಿಸಿದ್ರು!

ಬೆಂಗಳೂರು: ಕೆಲಸ, ಸಂದರ್ಶನ, ಸಮಾರಂಭ, ನಿಶ್ಚಿತಾರ್ಥ, ಮದುವೆ.. ಹೀಗೆ ನಾನಾ ವಿಷಯಗಳಲ್ಲಿ ಇದಮಿತ್ತಂ ಎಂಬಂತಿದ್ದ ಸಂಪ್ರದಾಯಗಳನ್ನೆಲ್ಲ ತಲೆಕೆಳಗಾಗಿಸಿರುವ ಕರೊನಾ, ‘ಹೀಗೂ ಸಾಧ್ಯನಾ?’ ಎಂದು ಹುಬ್ಬೇರಿಸುವಂಥ ಹೊಸ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳುವುದಷ್ಟೇ ಅಲ್ಲ, ಸಾಧ್ಯವಾಗಿಸಿಯೂ ತೋರಿಸಿದೆ. ಅಂಥದ್ದರಲ್ಲಿ ಈ ಮದುವೆ ಕೂಡ ಒಂದು. ಸಾಮಾನ್ಯವಾಗಿ ಮದುವೆ ಎಂದರೆ ಬಂಧು-ಮಿತ್ರ ಬಳಗವನ್ನು ಒಂದೆಡೆಗೆ ಆಹ್ವಾನಿಸಿ, ಮದುವೆ ಊಟ ಹಾಕಿಸಿ ಕಳುಹಿಸುವುದು ಸಂಪ್ರದಾಯ. ಮದುವೆ ಎಂದರೆ ಊಟೋಪಚಾರ ಬಹುಮುಖ್ಯ. ಮದುವೆ ಸಮಾರಂಭದಲ್ಲಿ ಬೇರೆಲ್ಲ ಅದ್ದೂರಿ-ಆಡಂಬರಗಳು ಇರುತ್ತವೋ ಇಲ್ಲವೋ, ಒಂದೊಳ್ಳೆಯ ಊಟವಂತೂ ಇರಲೇಬೇಕು. ಆದರೆ … Continue reading ಅಬ್ಬಬ್ಬಾ ಇದೆಂಥ ಮದ್ವೆ!; ಊಟಕ್ಕೆ ಕರೆಯೋ ಬದಲು ಮನೆಮನೆಗೂ ಊಟ ಕಳಿಸಿದ್ರು!