More

    ಸೋಮನಾಥನಿಗೆ ಮಂದಿರ ಸಿದ್ಧ, ಹಾಳು ಕೊಂಪೆಯಂತಿದ್ದ ತಾರಿಬೇರು ಚಿತ್ರಣ ಬದಲು

    ತಾರಿಬೇರು: ವಿಜಯನಗರ ಅರಸರ ಕಾಲದ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ್ದ ಸಹಜ ಚಪ್ಪಟೆ ಲಿಂಗ, ಕಾಶಿಯಿಂದ ತಂದ ಲಿಂಗ ಮತ್ತು ನಂದಿ, ಕಾಲ ಬುಡದಲ್ಲಿ ಶಿವಲಿಂಗ ಇರುವ ನಂದಿ ಇದ್ದರೂ ಪೂಜೆಯಿಲ್ಲದೆ ಹಾಳು ಕೊಂಪೆಯಂತಾಗಿದ್ದ ದೇವಸ್ಥಾನ ಭಕ್ತರ ಸಹಕಾರದಲ್ಲಿ ಜೀರ್ಣೋದ್ಧಾರವಾಗುತ್ತಿದ್ದು, ಸುಂದರ ಮಂದಿರ ತಲೆ ಎತ್ತಿದೆ.

    ಬೈಂದೂರು ತಾಲೂಕು ಆಲೂರು ಗ್ರಾಪಂ ವ್ಯಾಪ್ತಿಯ ತಾರಿಬೇರು ಸೌಪರ್ಣಿಕಾ ನದಿ ತೀರದಲ್ಲಿ ಈ ಪ್ರಾಚೀನ ದೇವಸ್ಥಾನವಿದ್ದು, ಪರಿಸರ ಕೊಂಪೆಯಂತಾಗಿತ್ತು. ಈಗ ಇಡೀ ಊರಿನ ಜನ ಒಟ್ಟಾಗಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿ, ನಿಧಿಕುಂಭ ಸ್ಥಾಪನೆ ಮಾಡಿ, ನಂದಿ ಹಾಗೂ ಶಿವಲಿಂಗ ಜಲಸ್ತಂಭನದಲ್ಲಿ ಇಡಲಾಗಿದೆ. ಗರ್ಭಗುಡಿ, ತೀರ್ಥಮಂಟಪ, ಪೌಳಿ ಸಿದ್ಧವಾಗಿದ್ದು, ಗರ್ಭಗುಡಿಗೆ ತಾಮ್ರದ ತಗಡು ಹೊದಿಸುವ ಕೆಲಸ ನಡೆಯುತ್ತಿದೆ. ಲಾಕ್‌ಡೌನ್ ಇದ್ದರೂ ದೇವಸ್ಥಾನದ ಕೆಲಸ ಮುನ್ನಡೆದಿದೆ.

    ದೇವಸ್ಥಾನ ಉತ್ಖನನ ಸಂದರ್ಭ ಕಲ್ಲಿನ ಕುಂಭ, ರಾಮ, ಸೀತೆ, ಲಕ್ಷ್ಮಣ, ಹನುಮಂತ ಚಿತ್ರವಿರುವ ಚಿನ್ನದ ನಾಣ್ಯಗಳು ಸಿಕ್ಕಿವೆ. ಶಿಲಾಮಯ ದೇವಸ್ಥಾನ ನಿರ್ಮಾಣ ಕಾರ‌್ಯದಲ್ಲಿ ಹಿನ್ನಡೆ ಉಂಟಾದಾಗ ಕೆಂಪುಕಲ್ಲಿನಲ್ಲಿ ನಿರ್ಮಿಸಲು ನಿರ್ಧರಿಸಿದ ನಂತರ ಕೆಲಸಕ್ಕೆ ವೇಗ ಸಿಕ್ಕಿದೆ.

    ಊರವರ ಜತೆ ಚರ್ಚಿಸಿ ದೇವಸ್ಥಾನ ಪುನಃನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನದ ಪೌಳಿ, ತೀರ್ಥ ಮಂಟಪ ಕೆಲಸ ಮುಗಿದಿದೆ. ಗರ್ಭಗುಡಿಗೆ ತಾಮ್ರದ ತಗಡು ಕೆಲಸ ಅಂತಿಮ ಹಂತಕ್ಕೆ ಬಂದಿದ್ದು, ಲಾಕ್‌ಡೌನ್ ಇಲ್ಲದಿರುತ್ತಿದ್ದರೆ ಇಷ್ಟೊತ್ತಿಗೆ ದೇವಸ್ಥಾನ ತೆರೆದುಕೊಳ್ಳುತ್ತಿತ್ತು. ಉತ್ತರಾಯಣದಲ್ಲಿ ದೇವಸ್ಥಾನದಲ್ಲಿ ಬ್ರಹ್ಮಲಶಾಭಿಷೇಕ ಜರುಗಲಿದೆ.
    ಯು.ರಾಜಾರಾಮ್ ಭಟ್ ಉಪ್ಪುಂದ, ನಿವೃತ್ತ ಶಿಕ್ಷಕ, ಅಧ್ಯಕ್ಷ ಜೀರ್ಣೋದ್ಧಾರ ಸಮಿತಿ ತಾರಿಬೇರು

    ಸೇವೆ ಸಲ್ಲಿಸಲು ಅವಕಾಶ: ದೇವಸ್ಥಾನ ನಿರ್ಮಾಣದಲ್ಲಿ ಭಕ್ತರು ಸೇವೆ ಸಲ್ಲಿಸಲು ಅವಕಾಶವಿದೆ. ಬೇರೆ ಬೇರೆ ಊರಲ್ಲಿ ನೆಲೆಸಿದವರೂ ದೇವಸ್ಥಾನ ಹುಡುಕುತ್ತ ಬಂದು ಸಹಾಯ ಮಾಡಲು ಮುಂದಾಗಿದ್ದಾರೆ. ಪರವೂರಲ್ಲಿರುವವರೂ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಧನ ಸಹಾಯ ಮಾಡುವವರು ನಾವುಂದ ಸಿಂಡಿಕೇಟ್ ಬ್ಯಾಂಕ್ ಎಸ್‌ಬಿ ನಂ.01732200092341 (ಐಎಫ್‌ಎಸ್ಸಿ : ಎಸ್‌ವೈಎನ್ ಬಿ0000173) ಜಮಾ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts