More

    ಪೆಟ್ಟಾದರೂ ಛಲ ಕುಂದಿಲ್ಲ, ಕೊನೆಯ ಉಸಿರು ಇರುವವರೆಗೂ ಹೋರಾಡುವೆ: ವಿಜಯವಾಣಿ ಕ್ಲಬ್​ಹೌಸ್​​ನಲ್ಲಿ ವೀರಯೋಧ ಮಹೇಶ್

    ಬೆಂಗಳೂರು: ಪೆಟ್ಟಾದರೂ ಛಲ ಕುಂದಿಲ್ಲ, ಕೊನೆಯ ಉಸಿರು ಇರುವವರೆಗೂ ದೇಶಕ್ಕಾಗಿ ಹೋರಾಡುತ್ತೇನೆ.. ಎಂಬುದಾಗಿ ವೀರಯೋಧ ನಾಯಕ್​ ಎಚ್.ಎನ್​. ಮಹೇಶ್​ ತಮ್ಮ ವೀರೋಚಿತ ಮಾತುಗಳನ್ನು ಇದೀಗ ವಿಜಯವಾಣಿ-ದಿಗ್ವಿಜಯ ನ್ಯೂಸ್​ ಕ್ಲಬ್​ಹೌಸ್​ ಸಂವಾದದಲ್ಲಿ ತಮ್ಮ ಅನಿಸಿಕೆ-ಅನುಭವ ಹಂಚಿಕೊಂಡರು.

    ಉಗ್ರರ ವಿರುದ್ಧದ ಮಿಲಿಟರಿ ಆಪರೇಷನ್​ ಒಂದರಲ್ಲಿ ನಾಲ್ವರು ಉಗ್ರರನ್ನು ಸದೆಬಡಿದು ಕಣ್ಣುಗಳಿಗೆ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿ, ಶೌರ್ಯ ಪ್ರಶಸ್ತಿಯನ್ನೂ ಪಡೆದಿರುವ ನಾಯಕ್​ ಎಚ್​.ಎನ್​. ಮಹೇಶ್​ ಅವರು ತಮ್ಮ ಹೋರಾಟದ ರೋಚಕ ಅನುಭವಗಳನ್ನು ಸ್ವಾತಂತ್ರ್ಯೋತ್ಸವ ಮುನ್ನಾ ದಿನವಾದ ಇಂದು ವಿಜಯವಾಣಿ ಕ್ಲಬ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    2019ರಲ್ಲಿ ಈ ಕಾರ್ಯಾಚರಣೆಯಲ್ಲಿ ನನಗೆ ಪೆಟ್ಟಾಯಿತು. ಹಾಗೆ ಪೆಟ್ಟಾದರೂ ಛಲ ಇನ್ನೂ ಇದೆ. ನನ್ನ ಸೇವೆ ಇನ್ನೂ ಮುಗಿದಿಲ್ಲ, ಕೊನೆಯುಸಿರು ಇರುವವರೆಗೂ ಸೇನೆಯಲ್ಲಿ ಹೋರಾಡುತ್ತೇನೆ ಎಂಬುದಾಗಿ ಮಹೇಶ್ ಹೇಳಿಕೊಂಡಿದ್ದಾರೆ.

    ಇನ್ನು ತಾವು ಸೇನೆಗೆ ಸೇರಿದ ಅನುಭವಗಳನ್ನು ಹಂಚಿಕೊಂಡಿರುವ ಮಹೇಶ್, ಸೇನೆಯ ಸೆಲೆಕ್ಷನ್​ನಲ್ಲಿ ಸೋತು ಸೇರಲಾಗದೆ ಇರುವವರಿಂದಲೇ ಹೆಚ್ಚು ಕಲಿತಿದ್ದೇನೆ. ಏಕೆಂದರೆ ಅವರಿಗೆ ನೆಗೆಟಿವ್ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ ಎಂದಿರುವ ಅವರು, ಸೇನೆಯ ಕುರಿತ ಹಲವಾರು ಅಂಶಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇನ್ನು ನೇರವಾಗಿ ಹೋರಾಡಲು ಧೈರ್ಯ-ತಾಕತ್ತು ಇಲ್ಲದ ಉಗ್ರರು ಡ್ರೋಣ್​ ಬಳಸುತ್ತಿದ್ದಾರೆ ಎಂದರು.

    ಸಂವಾದದಲ್ಲಿ ಪಾಲ್ಗೊಳ್ಳಲು ಈ ಲಿಂಕ್​ ಕ್ಲಿಕ್​ ಮಾಡಿ: https://www.clubhouse.com/event/Pbo5eBbx

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts