More

    ಸೋಲದೇವನಹಳ್ಳಿ ಗ್ರಾಪಂ ಕಾಂಗ್ರೆಸ್ ವಶ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ತಾಲೂಕಿನ ಸೋಲದೇವನಹಳ್ಳಿ ಗ್ರಾಪಂನಲ್ಲಿ ಗುರುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಪಂಚಾಯಿತಿ ಅಧ್ಯಕ್ಷರಾಗಿ ಸಂತೋಷ್‌ಕುಮಾರ್, ಉಪಾಧ್ಯಕ್ಷರಾಗಿ ಸವಿತಾ ಆಯ್ಕೆಯಾಗುವ ಮೂಲಕ ಪಂಚಾಯಿತಿ ಕಾಂಗ್ರೆಸ್ ವಶವಾಯಿತು.
    ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಧರ್ಮನಾಯಕನ ತಾಂಡ್ಯದ ಸಂತೋಷ್‌ಕುಮಾರ್ ಮತ್ತು ಆವಲಕುಪ್ಪೆ ಮಹದೇವಮ್ಮ ನಾಮಪತ್ರ ಸಲ್ಲಿಸಿದ್ದರು. ಪಂಚಾಯಿತಿಯ 16 ಸದಸ್ಯರ ಪೈಕಿ ಸಂತೋಷ್‌ಕುಮಾರ್ 9 ಮತ ಪಡೆದು ಜಯಗಳಿಸಿದರೆ, ಮಹದೇವಮ್ಮ 07 ಮತ ಪಡೆದು ಪರಾಭವಗೊಂಡರು. ಹಾಗೆಯೇ, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕೊಟ್ಟನಹಳ್ಳಿ ಸವಿತಾ 9 ಮತ ಪಡೆದು ಜಯಗಳಿಸಿದರು. ಗೋರಿನಬೆಲೆ ರತ್ನಮ್ಮ 07 ಮತ ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಹರೀಶ್ ತಿಳಿಸಿದರು.
    ಪೊಲೀಸ್ ಬಿಗಿಬಂದೋಬಸ್ತ್: ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಕಾರಣ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕ ವಿ.ರಾಜೀವ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
    ಖಾತೆ ತೆರೆದ ಕಾಂಗ್ರೆಸ್: ತಾಲೂಕಿನಲ್ಲಿ ಒಟ್ಟು 21 ಗ್ರಾಪಂಗಳ ಪೈಕಿ ಸೋಲದೇವನಹಳ್ಳಿ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ.
    ಗಾಂಧಿಗ್ರಾಮ ವಿಎಸ್‌ಎಸ್‌ಎನ್ ಅಧ್ಯಕ್ಷ ವೀರಮಾರೇಗೌಡ, ಉಪಾಧ್ಯಕ್ಷ ನಾಗೇಶ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ.ಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಸ್.ಶೀಲಾ, ಯಂಟಗಾನಹಳ್ಳಿ ಗ್ರಾಪಂ ಸದಸ್ಯರಾದ ಮಂಜುನಾಥಯ್ಯ, ಚಿಕ್ಕಣ್ಣ, ಮುಖಂಡರಾದ ಭೂಸಂದ್ರ ಚಿಕ್ಕಣ್ಣ, ದೀಪಕ್, ಶೇಖರ್, ವೆಂಕಟಚಲಯ್ಯ, ನವೀನ್, ಲಕ್ಷ್ಮಣಪ್ಪ, ಮಂಜುನಾಥ್, ಶಂಕರಪ್ಪ, ರವಿ, ಲೋಕೇಶ್, ನರಸೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts