More

    ಬ್ರಿಟಿಷರಂತೆ ಬಿಜೆಪಿ ಸರ್ಕಾರದ ಆಡಳಿತ

    ಹಗರಿಬೊಮ್ಮನಹಳ್ಳಿ: ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಬಡಜನರಿಗೆ ಬೆಲೆ ಏರಿಕೆ ಬಿಸಿ ತಪ್ಪಲಿಲ್ಲ. ಬಿಜೆಪಿಯವರು ಬ್ರಿಟಿಷರಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಗೀತಾಬಾಯಿ ಭೀಮಾನಾಯ್ಕ ಆರೋಪಿಸಿದರು.

    ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಮಹಿಳಾ ಕಾಂಗ್ರೆಸ್‌ನಿಂದ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ಮಹಿಳೆಯರು ಸ್ವಾವಲಂಬಿಗಳಾಗಲು ಸಂಸ್ಥೆಗಳನ್ನು ಕಟ್ಟಿಕೊಂಡು ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಕಳೆದ ಐದು ವರ್ಷದಿಂದ ಮಹಿಳಾ ದಿನಾಚರಣೆಯನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ವಿಭಿನ್ನವಾಗಿ ಆಚರಿಸುತ್ತಿದ್ದೇವೆ ಎಂದರು.

    ಕರೊನಾ ವೇಳೆಯಲ್ಲಿ ಬಹುತೇಕರು ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಕೆಲವರು ಕುಟುಂಬದ ಮುಖ್ಯಸ್ಥರನ್ನು ಕಳೆದುಕೊಂಡು ಕಂಗಲಾಗಿದ್ದರು. ವಿದ್ಯಾರ್ಥಿಗಳು ಸೇರಿ ಖಾಸಗಿ ಶಾಲೆಯ ಶಿಕ್ಷಕರು ತುಂಬಾ ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದರು. ಇಂತಹ ವೇಳೆಯಲ್ಲಿ ಗೀತಾ ಭೀಮನಾಯ್ಕ ಅಭಿಮಾನಿ ಬಳಗದಿಂದ ನೊಂದ ಮಹಿಳೆಯರ ನೋವಿಗೆ ಸ್ಪಂದಿಸಿ ನೊಂದವರ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಲು ಆತ್ಮ ನಮನ’ ಕಾರ್ಯಕ್ರಮ ಮಾಡಿದ್ದೇವೆ. ಕೋವಿಡ್ ವೇಳೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಬಿಜೆಪಿ ಸರ್ಕಾರ 1 ಲಕ್ಷ ರೂ. ನೀಡುವುದಾಗಿ ಘೋಷಿಸಿತ್ತು. ಆದರೆ ನಮ್ಮ ಕ್ಷೇತ್ರದಲ್ಲಿ ಯಾರಿಗೂ ಪರಿಹಾರ ಬಂದಿಲ್ಲ ಎಂದು ದೂರಿದರು.

    ಇದೇವೇಳೆ ಮಹಿಳೆಯರಿಗಾಗಿ ವಿಶೇಷ ರಂಗೋಲಿ ಸ್ಪರ್ಧೆ, ಮಹಿಳಾ ಕ್ರೀಡಾಕೂಟ ಹಾಗೂ ಬಂಜಾರ ಸಂಸ್ಥೆಗಳನ್ನು ಉದ್ಘಾಟಿಸಲಾಯಿತು. ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಾಹಿರಾ ಬಾನು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಯಶೋದಾ ಮಂಜುನಾಥ, ಪುರಸಭೆ ಮಾಜಿ ಸದಸ್ಯೆ ಕವಿತಾ ಹಾಲ್ದಾಳ್ ಮಾತನಾಡಿದರು.

    ಕಾಂಗ್ರೆಸ್ ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಸುನಂದಾ, ಹೊಸಪೇಟೆ ಬ್ಲಾಕ್ ಅಧ್ಯಕ್ಷೆ ಲಕ್ಷ್ಮೀ, ಕೊಟ್ಟೂರು ಬ್ಲಾಕ್ ಅಧ್ಯಕ್ಷೆ ಭಾರತಿ ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಸರಸ್ವತಿ ಹನುಮಂತಪ್ಪ ಗುಂಡ್ರು, ಮಂಜುಳಾ ಕೃಷ್ಣನಾಯ್ಕ, ಅಂಬಿಕಾ ದೇವೆಂದ್ರಪ್ಪ, ಖಾಜಾಬನ್ನಿ ಅಲ್ಲಾಭಕ್ಷಿ, ರೇಷ್ಮಾ ಸಿಖಂದರ್, ಮರಿಯಮ್ಮನಹಳ್ಳಿ ಹುಲಿಗಿ ಬಾಯಿ, ಪ್ರಮುಖರಾದ ಜ್ಯೋತಿ ಬ್ಯಾಡಿಗಿ, ನಾಗವೇಣಿ ನಾಗಭೂಷಣ್, ಚೈತ್ರಾ ರಾಘವೇಂದ್ರ, ತಾಪಂ ಮಾಜಿ ಅಧ್ಯಕ್ಷೆ ಕೆ.ನಾಗಮ್ಮ, ತಾಪಂ ಮಾಜಿ ಉಪಾಧ್ಯಕ್ಷ ಕೊಚಾಲಿ ಸುಶೀಲಮ್ಮ, ಗ್ರಾಪಂ ಸದಸ್ಯೆ ನೀಲಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts