More

    ಚಿಂದಿ ಆಯುವ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆ ಆದೇಶ

    ಬೆಂಗಳೂರು ಚಿಂದಿ ಆಯುವ ಮಕ್ಕಳನ್ನು ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ.

    ಕರ್ನಾಟಕ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಸಾಯಿ ಕರ್ಮಚಾರಿ ಮಕ್ಕಳಿಗೆ ನಿಗದಿ ಮಾಡಿರುವ ಶೇ.5 ಮೀಸಲಾತಿ ಅಡಿಯಲ್ಲಿ ಚಿಂದಿ ಆಯುವವರ ಮಕ್ಕಳಿಗೆ 6ನೇ ತರಗತಿಗೆ ಪ್ರವೇಶಾತಿ ಕಲ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

    ಚಿಂದಿ ಆಯುವ ಮಕ್ಕಳಿಗೆ ಸ್ಥಳಿಯ ಪ್ರಾಧಿಕಾರಗಳಾದ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಪಂಚಾಯತ್ ಸಂಸ್ಥೆಗಳಿಂದ ಪ್ರಮಾಣ ಪತ್ರ ವಿತರಿಸುವ ಷರತ್ತು ವಿಧಿಸಿ ರಾಜ್ಯಪಾಲರ ಆದೇಶದ ಅನುಸಾರ ಅನುಮೋದನೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಆದೇಶದಲ್ಲಿ ತಿಳಿಸಿದ್ದಾರೆ.

    ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಡಿಲ್ಲಿರುವ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಕಲ್ಪಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಅದರನ್ವಯ ವಿಶೇಷ ವರ್ಗಗಳಿಗೆ ಸ್ಥಾನ ಹಂಚಿಕೆಯಲ್ಲಿ ಸಾಯಿ ಕರ್ಮಚಾರಿಗಳ ಮಕ್ಕಳಿಗೆ ಶೇ.5ರಂತೆ ಸ್ಥಾನ ಹಂಚಿಕೆ ಮಾಡಲಾಗಿದೆ.

    ಪ್ರಸ್ತುತ ಚಿಂದಿ ಆಯುವವರ ಮಕ್ಕಳನ್ನು ಸಾಯಿ ಕರ್ಮಚಾರಿಗಳ ಮಕ್ಕಳ ಮೀಸಲಾತಿಯಡಿಯಲ್ಲಿ ಪರಿಗಣಿಸಬೇಕಾಗುತ್ತದೆ. ಚಿಂದಿ ಆಯುವವರಿಗೆ ಪ್ರಮಾಣಪತ್ರಗಳನ್ನು ವಿತರಿಸಲು ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಪಂಚಾಯತ್ ಸಂಸ್ಥೆಗಳನ್ನು ಪ್ರಾಧಿಕಾರಳೆಂದು ನಿಗದಿ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts