More

    ರೋಟರಿಯಿಂದ ಸಮಾಜಮುಖಿ ಸೇವೆ

    ಬ್ಯಾಡಗಿ: ರೋಟರಿ ಸಂಸ್ಥೆಯ 2023-24ನೇ ಸಾಲಿನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರ ಪದಗ್ರಹಣ ಗುರುವಾರ ಜರುಗಿತು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗರ್ವನರ್ ನಾಸೀರ್ ಬೋರ್ಸಡ್‌ವಾಲಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೋಟರಿ ಸಂಸ್ಥೆ ವಿಶ್ವದಾದ್ಯಂತ ವಿಸ್ತರಿಸಿದೆ. ದೇಶದ ಬಡತನ, ಶಿಕ್ಷಣ, ಆರೋಗ್ಯ, ಸಮಾಜಮುಖಿ ಸೇವೆಯೊಂದಿಗೆ ನೂರಾರು ಜನಪರ ಸೇವೆ ಕೈಗೊಳ್ಳುತ್ತಿದೆ. ಸ್ಥಳೀಯ ಮುಖಂಡರು ಸಂಸ್ಥೆಯೊಂದಿಗೆ ಸಾಮಾಜಿಕ ಸೇವೆಗೈಯಲು ಸಾಕಷ್ಟು ಅವಕಾಶ ಕಲ್ಪಿಸಿದೆ ಎಂದರು.

    ಪ್ರಮಾಣವಚನ: 2023-24 ಸಾಲಿನ ನೂತನ ಅಧ್ಯಕ್ಷ ಮಾಲತೇಶ ಉಪ್ಪಾರ, ಕಾರ್ಯದರ್ಶಿ ಅನಿಲಕುಮಾರ ಬೊಡ್ಡಪಾಟಿ, ಉಪಾಧ್ಯಕ್ಷ ಸತೀಶ ಅಗಡಿ, ಖಜಾಂಚಿ ನಿರಂಜನ ಶೆಟ್ಟಿ, ಸಹ ಕಾರ್ಯದರ್ಶಿ ವೀರೇಶ ಬಾಗೋಜಿ ಅವರಿಗೆ ರೋಟರಿ ಜಿಲ್ಲಾ ಗರ್ವನರ್ ರೋಟರಿ ಪ್ರಮಾಣ ವಚನ ನೀಡಿ ಗೌರವಿಸಿದರು.

    ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ವಿನ್ಸೆಂಟ್ ಪೆರೆರಾ ( ಛಾಯಾಗ್ರಾಹಕ), ಬಸವರಾಜ ಹಡಪದ (ಸಾರಿಗೆ), ಶಿವನಾಗಪ್ಪ ಅದ್ದಪ್ಪನವರ (ಜಲಶೋಧಕ), ಚನ್ನಪ್ಪ ಕಾಟೇನಹಳ್ಳಿ (ಸಮಾಜಸೇವಕ), ಕುಮಾರಸ್ವಾಮಿ ಹಿರೇಮಠ (ಪುರಸಭೆ ಕಾರ್ಮಿಕ) ಅವರನ್ನು ಸನ್ಮಾನಿಸಲಾಯಿತು.

    ಡಾ.ಬಸವರಾಜ ಕೇಲಗಾರ, ಅಸಿಸ್ಟೆಂಟ್ ಗವರ್ನರ ಮಾಲತೇಶ ಅರಳೀಮಟ್ಟಿ, ಮಂಜುನಾಥ ಉಪ್ಪಾರ, ಪವಾಡೆಪ್ಪ ಅಚನೂರು, ಮಹಾಂತೇಶ ಸುಂಕದ, ರಮೇಶ ಬನ್ನಿಗಿಡದ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಡಾ.ಎ.ಎಂ. ಸೌದಾಗರ, ಪ್ರಕಾಶ ಪಟ್ಟಣಶೆಟ್ಟಿ, ಸುರೇಶ ಗೌಡರ, ಪರಶುರಾಮ ಮೇಲಗಿರಿ, ಸಿದ್ದಲಿಂಗಯ್ಯ ಬೂದಿಹಾಳಮಠ, ರೂಪಾ ಕಡೇಕೊಪ್ಪ, ಕವಿತಾ ಸೊಪ್ಪಿನಮಠ, ದಾಕ್ಷಾಯಿಣಿ ಹರಮಗಟ್ಟಿ, ಲಕ್ಷ್ಮೀ ಉಪ್ಪಾರ, ಪ್ರತಿಭಾ ಮೇಲಗಿರಿ, ಸಂದ್ಯಾರಾಣಿ ದೇಶಪಾಂಡೆ, ಮಹೇಶ್ವರಿ ಪಸಾರದ, ಶಿಲ್ಪಾ ಪಾಟೀಲ, ಶಾಮಾ ಪಾಟೀಲ, ಶೋಭಾ ಮೋಟೆಬೆನ್ನೂರು, ಸುಮಾ ಸುಂಕಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts