More

    ಬೋರ್‌ವೆಲ್‌ ನೀರು ಬಳಸಿದ್ದಕ್ಕಾಗಿ ಸಾಮಾಜಿಕ ಬಹಿಷ್ಕಾರ!

    ಕಾರವಾರ: ಬೋರ್‌ವೆಲ್ ನೀರು ಬಳಸಿದ್ದಕ್ಕಾಗಿ ಗ್ರಾಮಸ್ಥರು ತಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, ನ್ಯಾಯ ಒದಗಿಸಿಕೊಡುವಂತೆ ಶಿರಸಿ ತಾಲೂಕಿನ ದಾಸನಕೊಪ್ಪ ಹೋಬಳಿ ಕಾಳಂಗಿಯ ಕಣಪತಿ ಕಲ್ಕಟೇರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಲ್ಲಿ ಮನವಿ ಮಾಡಿದ್ದಾರೆ.
    ನಾನು ಲಿಂಗರಾಜ ಬಸಣ್ಯಪ್ಪ ಅಗಸನಹಳ್ಳಿ ಅವರ ಹೆಸರಿನಲ್ಲಿರುವ ಗಾಂವಠಾಣಾ ಜಾಗದಲ್ಲಿ ತೆಗೆದ ಬೋರ್‌ವೆಲ್ ನೀರನ್ನು ಬಳಸಿಕೊಂಡಿದ್ದೇನೆ. ಅದಕ್ಕಾಗಿ ಪಂಚರು ಸಭೆ ಸೇರಿ ನಮ್ಮ ಕುಟುಂಬವು 15 ಸಾವಿರ ರೂ. ದಂಡವನ್ನು ಗ್ರಾಮದ ದೇವಸ್ಥಾನಕ್ಕೆ ಕಟ್ಟಬೇಕು ಎಂದು ತೀರ್ಮಾನ ತೆಗೆದುಕೊಂಡಿದೆ. ಅದಕ್ಕೆ ಒಪ್ಪದೇ ಇದ್ದಾಗ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ಡಂಗುರ ಸಾರಲಾಗಿದೆ. ನಾವು ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ನಮ್ಮ ಹಾಗೂ ಇತರ ಸಮುದಾಯದವೂ ಬಹಿಷ್ಕಾರ ನಡೆಸುತ್ತಿದ್ದಾರೆ.
    ಬಹಿಷ್ಕಾರ ಹಾಕಿದ್ದರಿಂದ ನಮ್ಮ ಕುಟುಂಬದ 6 ಜನರ ಜತೆ ಗ್ರಾಮಸ್ಥರು ಸರಿಯಾಗಿ ಮಾತನಾಡುವುದಿಲ್ಲ. ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡುತ್ತಿಲ್ಲ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ನನ್ನ ಕುಟುಂಬದ ಹಿರಿಯರು ಹಾಸಿಗೆ ಹಿಡಿದಿದ್ದಾರೆ. ಬಹಿಷ್ಕಾರ ಹಾಕಿ, ಡಂಗುರ ಸಾರಿದ ಆಡಿಯೋ ರೆಕಾರ್ಡ್ಗಳು ನನ್ನ ಬಳಿ ಇದೆ. ಅಲ್ಲದೆ, ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ, ಸ್ಥಳೀಯ ಅಽಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗದ ಕಾರಣ ತಮ್ಮ ಬಳಿ ಬಂದಿರುವುದಾಗಿ ಗಣಪತಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಮಾಹಿತಿ ನೀಡಿದರು.

    ಇದನ್ನೂ ಓದಿ: ಉತ್ತರ ಕನ್ನಡ ಲೋಕ ಕಣದಲ್ಲಿ ಎಂಇಎಸ್‌ ಕಿಚ್ಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts