More

    ಕರೊನಾ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಬೆಂಗಳೂರಿನಲ್ಲಿ ಮನೆಮನೆಗೆ ಆರೋಗ್ಯ ಕಾರ್ಯಕರ್ತರ ಭೇಟಿ

    ಬೆಂಗಳೂರು: ಕರೊನಾ ತಪಾಸಣೆಗಾಗಿ ಬೆಂಗಳೂರಿನಲ್ಲಿ ನಾಳೆಯಿಂದಲೇ (ಭಾನುವಾರ) ಸರ್ವೇಕ್ಷಣಾ ತಂಡದವರು ಮನೆ ಮನೆಗೆ ಭೇಟಿ ನೀಡಲಿದ್ದಾರೆ.

    ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದು, ಕಾರ್ಯ ನಿರತ ಸಿಬ್ಬಂದಿಗೆ ವಾಹನ ಪಾಸ್, ಗುರುತಿನ ಚೀಟಿ, ಸುರಕ್ಷತಾ ಕಿಟ್ ನೀಡಲಾಗುವುದು. ತಪಾಸಣೆಗೆ ಹೋಗಲು ಮತ್ತು ಒಳಗಾಗಲು ಅಶ್ರದ್ಧೆ ತೋರುವವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಕೇಸು ದಾಖಲಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಬೆಂಗಳೂರಿನಲ್ಲಿ ಶನಿವಾರ ತಿಳಿಸಿದ್ದಾರೆ.

    ಅಗತ್ಯವಿದ್ದಲ್ಲಿ ಸರ್ವೇಕ್ಷಣಾ ತಂಡದ ತುರ್ತು ಕರೆಗೆ ಸ್ಪಂದಿಸಲು ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಇದರಲ್ಲಿ ವೈದ್ಯರು, ಪೊಲೀಸರು ಇರುತ್ತಾರೆ. ರೋಗಿಯನ್ನು ಸಾಗಿಸಲು ಆ್ಯಂಬುಲೆನ್ಸ್ ಕೂಡ ಒದಗಿಸಲಾಗುತ್ತದೆ. ಬರಲು ಒಪ್ಪದ ರೋಗಿಯನ್ನು ಮನವೊಲಿಸಿ ಕರೆತರಲು ಬೇಕಾದಷ್ಟು ಸಿಬ್ಬಂದಿ ಇದರಲ್ಲಿ ಇರುತ್ತಾರೆ.

    ಏಪ್ರಿಲ್ 30ರವರೆಗೆ ಈ ಸರ್ವೇಕ್ಷಣೆ ನಡೆಯಲಿದೆ. ಪ್ರತಿನಿತ್ಯ 60 ಮನೆಗಳಿಗೆ ವಿವಿಧ ತಂಡಗಳು ಭೇಟಿ ನೀಡಲಿವೆ. ಸಮೀಕ್ಷೆ ಪ್ರಗತಿ ಕುರಿತು ಹಿರಿಯ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತಾರೆ.

    ಮುನ್ನೆಚ್ಚರಿಕೆ ಕ್ರಮವಾಗಿ 243 ಹೋಟೆಲುಗಳಲ್ಲಿ 11 ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. 106 ಹಾಸ್ಟೆಲ್‌ಗಳು, ಸಮುದಾಯಭವನಗಳನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ನಾಲ್ಕು ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸಿ ಸಿದ್ಧಪಡಿಸಿ ಇಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 31 ಫೀವರ್ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದ್ದಾರೆ.

    ಕರೊನಾ ವಿರುದ್ಧ ಹೋರಾಡಲು ಪ್ರಧಾನಿ ಬಳಿ 25000 ಕೋಟಿ ರೂ. ಪರಿಹಾರ ಕೇಳಿದ ಸಿಎಂ ಮಮತಾ ಬ್ಯಾನರ್ಜಿ

    ಕರೊನಾ ಸೋಂಕಿತ 10 ತಿಂಗಳ ಮಗು ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್: ನಿಟ್ಟುಸಿರು ಬಿಟ್ಟ ಪಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts