More

    ಸಂಘಟನೆಯಿಂದ ಸಮಾಜ ಅಭಿವೃದ್ಧಿ

    ಶಿಕಾರಿಪುರ: ಮಲ್ಲವ ಸಮಾಜ ಅತ್ಯಂತ ಸ್ವಾಭಿಮಾನಿ ಮತ್ತು ಸಹೃದಯಿ ಸಮಾಜ. ಶೌರ್ಯ, ತ್ಯಾಗ ಮತ್ತು ಸಾಹಸಗಳಿಂದ ಗಮನ ಸೆಳೆದ ಸಮಾಜ ಎಂದು ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ತೊಗರ್ಸಿಯಲ್ಲಿ ಮಲ್ಲವ ಸಮಾಜದ ತಾಲೂಕು ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಈ ಸಮಾಜದವರು ಕೃಷಿ ಪ್ರೇಮಿಗಳು ಮತ್ತು ಧರ್ಮಾಭಿಮಾನಿಗಳು ಆಗಿದ್ದಾರೆ. ಸಮಾಜೋತ್ಥಾನದ ಕಾರ್ಯದಲ್ಲಿ ಮಲ್ಲವ ಸಮಾಜ ಸದಾ ಮುಂದೆ ಇರುತ್ತದೆ. ಈ ಸಮಸಜದವರು ಪಾಳೆಗಾರರಾಗಿ ನಾಡು ರಕ್ಷಣೆ ಮಾಡಿದವರು. ಇವರ ದೇಶಪ್ರೇಮ ಅನನ್ಯ ಎಂದರು.
    ಸಮಾಜ ನಮ್ಮಿಂದ ಸಾಕಷ್ಟು ನಿರೀಕ್ಷೆಯನ್ನು ಮಾಡುತ್ತದೆ. ಅದರ ನಿರೀಕ್ಷೆಗೆ ನಾವು ಸ್ಪಂದಿಸಬೇಕು. ಸಮಾಜ ಸರ್ವತೋಮುಖ ಅಭಿವೃದ್ಧಿ ಆಗಲು ಸಂಘಟನೆಯಿಂದ ಸಾಧ್ಯ ಎಂದರು.
    ಮಳೆ ಹಿರೇಮಠ ಮತ್ತು ಕ್ಯಾಸನೂರು ಮಠದ ಶ್ರೀ ಗುರುಬಸವ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
    ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
    ಸಮಾಜದ ಅಧ್ಯಕ್ಷ ಡಿ.ಎಸ್.ಮಹೇಶ್ವರಪ್ಪ ಗೌಡ, ಕಲ್ಯಾಣ್ ಕುಮಾರ್, ಬಿಳಿಕಿ ಶಿವರುದ್ರಪ್ಪ ಗೌಡ, ಅಕ್ಷರ ಸಂಸ್ಥೆಯ ರವಿಕುಮಾರ್, ಗಿರೀಶ್ ಗೌಡ, ವಕೀಲ ಹಾಲಪ್ಪ ಗೌಡ, ಕೋಡಿಹಳ್ಳಿ ಮೃತ್ಯುಂಜಯ ನಾಯಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts