More

    ಚೀನಾದಿಂದ ಭಾರತಕ್ಕೆ ಮತ್ತಷ್ಟು ಆತಂಕ; 76 ಪುಟಗಳ ಅಧ್ಯಯನ ವರದಿಯಲ್ಲಿ ಹಲವು ವಿಷಯ ಬಹಿರಂಗ!

    ನವದೆಹಲಿ: ಕೋವಿಡ್-19 ವೈರಸ್​ ಚೀನಾ ಬೇಕಂತಲೇ ಸೃಷ್ಟಿಸಿ ಎಲ್ಲೆಡೆ ಹರಡಿಸಿತ್ತು ಎಂಬುದು ಎಷ್ಟು ಸತ್ಯವೋ ಸುಳ್ಳೋ, ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಅಂಥದ್ದೊಂದು ಆತಂಕದ ವಿಷಯ ಇನ್ನೂ ಜನರ ಮನಸ್ಸಿನಲ್ಲಿ ಉಳಿದಿರುವಾಗಲೇ ಚೀನಾಗೆ ಸಂಬಂಧಿಸಿದಂತೆ ಮತ್ತೊಂದು ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ. ಭಾರತದ ಭದ್ರತೆಗೆ ಧಕ್ಕೆ ಆಗುವ ರೀತಿಯಲ್ಲಿ ಚೀನಾದ ಪ್ರಯತ್ನಗಳು ನಡೆದಿರುವುದಷ್ಟೇ ಅಲ್ಲದೆ, ಅದಕ್ಕಾಗಿ ಸಾಕಷ್ಟು ಹಣ ಹೂಡಿಕೆ ಆಗಿದೆ ಎಂಬ ಅಂಶವೂ ಈಗ ಹೊರಬಿದ್ದಿದೆ.

    ‘ಮ್ಯಾಪಿಂಗ್ ಚೈನೀಸ್​ ಫೂಟ್​ಪ್ರಿಂಟ್ಸ್​​ ಆ್ಯಂಡ್​ ಇನ್​ಫ್ಲುಯೆನ್ಸ್​ ಆಪರೇಷನ್​ ಇನ್ ಇಂಡಿಯಾ’ ಎಂಬ ಶೀರ್ಷಿಕೆಯಡಿ ಹೊರಬಂದಿರುವ 76 ಪುಟಗಳ ಅಧ್ಯಯನ ವರದಿ ಇಂಥದ್ದೊಂದು ಆತಂಕದ ವಿಷಯವನ್ನು ಹೊರಹಾಕಿದೆ. ಭಾರತದ ಸಿನಿಮಾಜಗತ್ತು, ವಿಶ್ವವಿದ್ಯಾಲಯಗಳು, ಸಾಮಾಜಿಕ ಸಂಸ್ಥೆಗಳು, ಸಂಶೋಧನಾ ಚಿಂತನಾ ಕೇಂದ್ರಗಳು, ಸೋಷಿಯಲ್ ಮೀಡಿಯಾ ಮುಂತಾದವುಗಳ ಮೇಲೆ ಪ್ರಭಾವ ಬೀರಲು ಚೀನಾ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದೆ ಎಂಬುದನ್ನು ಈ ಅಧ್ಯಯನ ಹೇಳಿದೆ.

    ಇದನ್ನೂ ಓದಿ: ಭಾರತದಲ್ಲಿ ಇನ್ನು ಈ ಕಾರು ಉತ್ಪಾದನೆ ಆಗುವುದಿಲ್ಲ; ಸದ್ಯಕ್ಕೆ ಇರುವ ದಾಸ್ತಾನಷ್ಟೇ ಮಾರಾಟ!

    ಲಾ ಆ್ಯಂಡ್ ಸೊಸೈಟಿ ಅಲಯನ್ಸ್​ ಹೊರತಂದಿರುವ ಈ ಅಧ್ಯಯನದಲ್ಲಿ ಭಾರತದಲ್ಲಿ ಚೀನಾದ ಹೆಜ್ಜೆ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಹೊರಗೆಡಹಿದೆ. ಚೀನಾದ ಇಂಟೆಲಿಜೆನ್ಸ್ ಸರ್ವಿಸ್​ ಮತ್ತು ಅಲ್ಲಿನ ಸರ್ಕಾರ ವಾಮಮಾರ್ಗಗಳ ಮೂಲಕ ಹೇಗೆ ಭಾರತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬುದುನ್ನು ಈ ಅಧ್ಯಯನ ಹಲವಾರು ವಿಷಯಗಳ ಮೂಲಕ ಬೆಳಕು ಚೆಲ್ಲಿದೆ. (ಏಜೆನ್ಸೀಸ್)

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಅಜ್ಜ-ಅಜ್ಜಿಯನ್ನು ನೋಡಲು ಬೆಂಗ್ಳೂರಿಂದ ಕೊಡಗಿಗೆ ನಡೆದೇ ಹೊರಟ ಬಾಲಕಿ; 30 ಕಿ.ಮೀ. ನಡೆದು ಸುಸ್ತಾಗಿ 15 ದಿನಗಳ ಬಳಿಕ ಸಿಕ್ಕಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts