More

    ಸಮುದ್ರ, ಪಾರ್ಕ್ ನೆನಪಲ್ಲಿ ರಾಧಿಕಾ ಪಂಡಿತ್​; ಆದ್ರೂ ಸದ್ಯಕ್ಕೆ ಜವಾಬ್ದಾರಿ ಮುಖ್ಯವೆಂದ ನಟಿ

    ಕರೊನಾ ಕಾರಣದಿಂದಾಗಿ ಎಲ್ಲರೂ ಬಹುತೇಕ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಇದಕ್ಕೆ ಸಿನಿ ತಾರೆಯರೂ ಹೊರತಲ್ಲ.
    ಇದೀಗ ನಟಿ ರಾಧಿಕಾ ಪಂಡಿತ್​ ಅವರು ಇನ್ಸ್ಟಾಗ್ರಾಂನಲ್ಲಿ ಹಳೇ ಫೋಟೋಗಳನ್ನು ಶೇರ್​ ಮಾಡಿಕೊಂಡು, ಈ ಕರೊನಾ ಸಂದರ್ಭದಲ್ಲಿ ತಾವೇನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಬರೆದುಕೊಂಡಿದ್ದಾರೆ.

    ಸದ್ಯ ಇಬ್ಬರು ಪುಟ್ಟ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿರುವ ರಾಧಿಕಾ, ನಾವು ಸದ್ಯಕ್ಕೆ ಸುರಕ್ಷಿತವಾಗಿದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬ ಸಂದೇಶವನ್ನೂ ನೀಡಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ನಾಳೆ ಖಾಸಗಿ ಕೋವಿಡ್ ಆಸ್ಪತ್ರೆ ಆರಂಭ, 50 ಹಾಸಿಗೆ ಬಡವರಿಗೆ ಮೀಸಲು

    ಇನ್ನು ತುಂಬ ದಿನಗಳಿಂದ ತಾವೇನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿಸಿದ ಅವರು, ನಾನು ಸಮುದ್ರವನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನನ್ನ ಮಕ್ಕಳನ್ನು ಪಾರ್ಕ್​ಗೆ ಆಟವಾಡಲು ಕರೆದುಕೊಂಡು ಹೋಗುವುದುನ್ನು, ಸ್ನೇಹಿತೆಯರನ್ನು ಭೇಟಿ ಮಾಡಿ ಅವರೊಂದಿಗೆ ಕಾಲ ಕಳೆಯುವುದನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಇನ್ನೂ ತುಂಬ ತುಂಬ ವಿಚಾರಗಳನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಆದರೆ ಸದ್ಯ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಇವೆಲ್ಲವನ್ನೂ ಪರಿಸ್ಥಿತಿ ಸಜಹ ಸ್ಥಿತಿಗೆ ಬಂದ ಮೇಲೆ ಕೂಡ ಮಾಡಬಹುದು. ಅಷ್ಟಕ್ಕೂ ನೀವೆಲ್ಲ ಏನನ್ನು ಮಿಸ್​ ಮಾಡಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts