More

    ಉರಗ ಉನ್ಮಾದ: ಹಾವುಗಳ ಪ್ರಣಯ ನೋಡಲು ಮುಗಿಬಿದ್ದ ಜನ…

    ವಿಜಯಪುರ: ಸರೀಸೃಪಗಳ ಸರಸ ಸಾಮಾನ್ಯವೇ ಆಗಿದ್ದರೂ ಅಂಥ ದೃಶ್ಯ ಕಾಣಸಿಗುವುದು ಅಪರೂಪ. ಇಂದು ಇಲ್ಲೊಂದು ಕಡೆ ಹಾವುಗಳೆರಡು ಪ್ರಣಯದಾಟದಲ್ಲಿ ತೊಡಗಿಕೊಂಡಿದ್ದು, ಸಾರ್ವಜನಿಕರ ಗಮನ ಸೆಳೆದಿದೆ. ಮಾತ್ರವಲ್ಲ, ಕೆಲವೇ ನಿಮಿಷಗಳಲ್ಲಿ ಇಲ್ಲಿ ಜನರು ಜಮಾಯಿಸಿದ್ದು, ಉರಗೋನ್ಮಾದವನ್ನು ಮುಗಿಬಿದ್ದು ನೋಡಿದ್ದಾರೆ.

    ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಾಣಕಾರ ಗಲ್ಲಿ ಸಮೀಪದಲ್ಲಿ ಇಂದು ಎರಡು ಹಾವುಗಳು ಸರಸದಲ್ಲಿ ತೊಡಗಿಕೊಂಡಿದ್ದು, ಕಂಡುಬಂದಿದೆ. ಒಂದು ನಾಗರಹಾವು ಹಾಗೂ ಇನ್ನೊಂದು ಕೇರೆ ಹಾವು ಕೆಲ ನಿಮಿಷಗಳ ಕಾಲ ಇಲ್ಲಿ ಸರಸವಾಡಿವೆ.

    ಸ್ಥಳೀಯರು ಹಾಗೂ ದಾರಿಹೋಕರು ಕೂಡ ಈ ಸಂದರ್ಭದಲ್ಲಿ ಇಲ್ಲಿ ಜಮಾಯಿಸಿದ್ದಲ್ಲದೆ, ಹಾವುಗಳ ಸರಸದ ದೃಶ್ಯಗಳನ್ನು ತಮ್ಮ ಮೊಬೈಲ್​ಫೋನ್​ಗಳಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಆದರೆ ನೆರೆದಿದ್ದ ಜನರ ಗದ್ದಲದಿಂದ ಗೊಂದಲಕ್ಕೆ ಒಳಗಾದ ಈ ಹಾವುಗಳು ಕೆಲವೇ ಕ್ಷಣಗಳಲ್ಲಿ ಹಾಗೇ ಅಲ್ಲಿನ ಕಲ್ಲುಗಳ ಸಂದಿಗಳಲ್ಲಿ ಮರೆಯಾಗಿ ಹೋಗಿವೆ.

    ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತ ಐಎಎಸ್ ಅಧಿಕಾರಿಯ ಪುತ್ರ ಗುಂಡಿಟ್ಟುಕೊಂಡು ಆತ್ಮಹತ್ಯೆ!

    ಕೋವಿಡ್​ ಲಸಿಕೆಯಿಂದಾಗಿ ತಪ್ಪಿತು ಭಾರತದ 42 ಲಕ್ಷಕ್ಕೂ ಅಧಿಕ ಮಂದಿಯ ಸಾವು!; ಇಲ್ಲಿದೆ ಅಧ್ಯಯನ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts