More

    ಕಾಶ್ಮಿರ ಕಣಿವೆಯಲ್ಲಿ ಇಂದು ಮಧ್ಯರಾತ್ರಿಯಿಂದ ಮೊಬೈಲ್​ ಎಸ್​ಎಂಎಸ್​ ಸೇವೆ ಪ್ರಾರಂಭ; ಸದ್ಯಕ್ಕಿಲ್ಲ ಇಂಟರ್​ನೆಟ್​ ಸೌಕರ್ಯ

    ಶ್ರೀನಗರ: ಜಮ್ಮುಕಾಶ್ಮೀರ ಕ್ರಮೇಣವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆಗಸ್ಟ್​ 5ರಂದು ಕಾಶ್ಮೀರದ ಆರ್ಟಿಕಲ್ 370ನ್ನು ರದ್ದುಗೊಳಿಸಿದ ಬಳಿಕ ಅಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್​ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿಗಳು ಸೇರಿ ಪ್ರಮುಖ ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇಟ್ಟು, ಅವರು ಪೊಲೀಸ್​ ಕಣ್ಗಾವಲಿನಲ್ಲಿಯೇ ಇದ್ದರು. ಇಂಟರ್​ನೆಟ್​, ಮೊಬೈಲ್​ ಸೇವೆಗಳೂ ಸ್ಥಗಿತಗೊಂಡಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

    ಈಗ ಕ್ರಮೇಣ ಅಲ್ಲಿನ ವಾತಾವರಣ ಸಹಜ ಸ್ಥಿತಿಗೆ ಬರುತ್ತಿದ್ದು ನಿನ್ನೆಯಷ್ಟೇ ಕೆಲವು ರಾಜಕಾರಣಿಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಒಮರ್​ ಅಬ್ದುಲ್ಲಾ ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ.

    ಹಾಗೇ ಇಂದು ಜಮ್ಮುಮತ್ತು ಕಾಶ್ಮೀರದಲ್ಲಿ ಮೊಬೈಲ್​ ಎಸ್​ಎಂಎಸ್ ಸೇವೆಯನ್ನು ಇಂದು ಮಧ್ಯರಾತ್ರಿಯಿಂದ ಮರು ಆರಂಭ ಮಾಡಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

    ಹೊಸವರ್ಷದಿಂದ ಕಾಶ್ಮೀರ ಕಣಿವೆಯಲ್ಲಿ ಮೊಬೈಲ್​ ಎಸ್​ಎಂಎಸ್​ ಸೇವೆಯನ್ನು ಮತ್ತೆ ಶುರು ಮಾಡಲಾಗುವುದು ಎಂದು ಜಮ್ಮುಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್​ ಕನ್ಸಾಲ್​ ತಿಳಿಸಿದ್ದಾರೆ.
    ಕೆಲವೇ ದಿನಗಳ ಹಿಂದೆ ಲಡಾಕ್​ ಕೇಂದ್ರಾಡಳಿತ ಪ್ರದೇಶದಲ್ಲಿರುವ ಕಾರ್ಗಿಲ್ ಜಿಲ್ಲೆಯಲ್ಲಿ ಮೊಬೈಲ್​ ಎಸ್​ಎಂಎಸ್​ ಸೇವೆಯನ್ನು ಪ್ರಾರಂಭಿಸಲಾಗಿದೆ.

    ಆದರೆ ಕಾಶ್ಮೀರ ಕಣಿವೆಯಲ್ಲಿ ಇಂಟರ್​ನೆಟ್​ ಸೌಕರ್ಯವನ್ನು ಸದ್ಯಕ್ಕೆ ಪ್ರಾರಂಭ ಮಾಡುವುದಿಲ್ಲ. ಇನ್ನೂ ಕೆಲವು ದಿನಗಳ ಕಾಲ ಸ್ಥಗಿತಗೊಂಡಿರುತ್ತದೆ ಎಂದು ರೋಹಿತ್​ ಕನ್ಸಾಲ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts