More

    ಕಾಂಗ್ರೆಸ್ ನಾಯಕನ ದ್ವಂದ್ವ ನಿಲುವು ಬಹಿರಂಗ! ನಿಜವಾದ ರಾಹುಲ್ ಗಾಂಧಿ ಯಾರು? ಸ್ಮೃತಿ ಇರಾನಿ ವಾಗ್ದಾಳಿ!

    ನವದೆಹಲಿ: ಸಂಸದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್​ ನಾಯಕ ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪ್ರಶ್ನೆಗಾಗಿ ಹಣ ಪಡೆದ ಆರೋಪ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ನಿವಾಸದ ಮೇಲೆ ಸಿಬಿಐ ದಾಳಿ

    ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಇದೇ ರಾಹುಲ್​ ಗಾಂಧಿ ತೆಲಂಗಾಣದಲ್ಲಿ ಮಾತನಾಡಬೇಕಾದರೆ ದೆಹಲಿ ಮುಖ್ಯಮಂತ್ರಿ ಭ್ರಷ್ಟ ಎಂದು ಕರೆದಿದ್ದರು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿ ಕಾಡಿದ್ದಾರೆ.

    ಬಿಆರ್​ಎಸ್​ನೊಂದಿಗೆ ಕಾಂಗ್ರೆಸ್​ ನಿಕಟ ಸಂಬಂಧ: ರಾಹುಲ್ ಗಾಂಧಿ ಒಂದೇ ವಿಷಯದ ಮೇಲೆ ಹೇಗೆ ವಿವಿಧ ರೀತಿಯಲ್ಲಿ ದಾಳ ಉರುಳಿಸುತ್ತಾರೆ ಎಂಬುದಕ್ಕೆ ನಾನು ಸಾಕ್ಷಿಗಳನ್ನು ನೀಡಲು ಬಯಸುತ್ತೇನೆ. ಜುಲೈ 2, 2023 ರಂದು ತೆಲಂಗಾಣದಲ್ಲಿ ಕೆಸಿಆರ್ ಕೂಡ ಭ್ರಷ್ಟ, ಮದ್ಯ ಹಗರಣ ನಡೆದಿದೆ ಎಂಬುದು ಎಲ್ಲಾ ಏಜೆನ್ಸಿಗಳಿಗೂ ಗೊತ್ತು. ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಎಎಪಿ ಭ್ರಷ್ಟಾಚಾರದ ಹಣವನ್ನು ಬಳಸಿದೆ ಎಂದು ಅಜಯ್ ಮಾಕನ್ ಅರೋಪ ಮಾಡಿದ್ದರು. ಹಾಗಾದರೆ ಯಾರು ನಿಜ ಹೇಳುತ್ತಿದ್ದಾರೆ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.

    ಕಾಂಗ್ರೆಸ್ ನಾಯಕನ ದ್ವಂದ್ವ ನಿಲುವು ಬಹಿರಂಗ! ನಿಜವಾದ ರಾಹುಲ್ ಗಾಂಧಿ ಯಾರು? ಸ್ಮೃತಿ ಇರಾನಿ ವಾಗ್ದಾಳಿ!

    ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಅಬಕಾರಿ ನೀತಿ ಪ್ರಕರಣ ಆರೋಪದಲ್ಲಿ ತನಿಖಾ ಸಂಸ್ಥೆಯಿಂದ ಬಂಧಿಸಲ್ಪಟ್ಟ ಒಂದು ದಿನದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಶುಕ್ರವಾರ ಏಳು ದಿನಗಳ ಕಾಲ ಅಂದರೆ ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಶುಕ್ರವಾರ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಇಡಿ ಕಸ್ಟಡಿಗೆ ಕಳುಹಿಸಿದೆ.

    ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತು ಪ್ರಾಮಾಣಿಕತೆಯನ್ನು ಪ್ರತಿಪಾದಿಸುವ ವ್ಯಕ್ತಿಯೊಬ್ಬರು ಅರವಿಂದ್ ಕೇಜ್ರಿವಾಲ್ ಅವರ ಕಾರ್ಯಗಳ ಮೂಲಕ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬ ವಿವರಗಳನ್ನು ನಾವು ಇಂದು ಪಡೆದುಕೊಂಡಿದ್ದೇವೆ ಎಂದು ಕೇಂದ್ರ ಸಚಿವೆ ಇರಾನಿ ತಿಳಿಸಿದರು.

    ರಾಹುಲ್ ಗಾಂಧಿಯ ನಿಜವಾದ ಮುಖ ಯಾವುದು? ತೆಲಂಗಾಣದಲ್ಲಿ ಮಾತನಾಡುತ್ತಿದ್ದವರಾ ಅಥವಾ ದೆಹಲಿಯಲ್ಲಿರುವವರ ಎಂದು ಸ್ಮೃತಿ ಇರಾನಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

    ಈ ಹಿಂದೆ ತೆಲಂಗಾಣ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಹುಲ್ ಗಾಂಧಿ ಅವರು ಭಾರತ ರಾಷ್ಟ್ರ ಸಮಿತಿಯು ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಹೇಳಿದ್ದರು. ಏಕೆಂದರೆ ಕೇಂದ್ರದ ಆಡಳಿತ ಪಕ್ಷಕ್ಕೆ ಮಾಜಿ ಸಿಎಂ ಕೆಸಿಆರ್​ ಅವರ ಪುತ್ರಿ ಕೆ ಕವಿತಾ ಅವರ ಬಗ್ಗೆ ತಿಳಿದಿದೆ. ದೆಹಲಿ ಮದ್ಯ ಹಗರಣದಲ್ಲಿ ಭಾಗಿಯಾಗಿದ್ದು, ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ದೆಹಲಿ ಮದ್ಯ ಹಗರಣದಲ್ಲಿ ಆಮ್ ಆದ್ಮಿ ಪಕ್ಷದ ಮೇಲೆ ಆರೋಪ ಹೊರಿಸಿ ಕಾಂಗ್ರೆಸ್ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದನ್ನು ಸ್ಮೃತಿ ಇರಾನಿ ಇಲ್ಲಿ ನೆನಪಿಸಿದ್ದಾರೆ. ದೆಹಲಿ ಮದ್ಯ ಹಗರಣದ ಆಮ್ ಆದ್ಮಿ ಪಕ್ಷವನ್ನು ಆರೋಪಿಸಿ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದನ್ನು ಸ್ಮೃತಿ ಇರಾನಿ ಕಾಂಗ್ರೆಸ್ ನೆನಪಿಸಿಕೊಂಡಿದ್ದಾರೆ.

    ಜೂನ್ 3, 2022 ರಂದು ಕಾಂಗ್ರೆಸ್ ಮದ್ಯದ ಹಗರಣದ ಬಗ್ಗೆ ದೆಹಲಿ ಪೊಲೀಸರಿಗೆ ಪತ್ರ ಬರೆದಿತ್ತು. ಯಾವುದು ಸತ್ಯ ಹೇಳುತ್ತಿದೆ? ಹಿಂದಿನದು ಅಥವಾ ಇಂದು ನಾವು ನೋಡುತ್ತಿರುವುದೇ? ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಎಎಪಿ ಭ್ರಷ್ಟಾಚಾರದ ಹಣವನ್ನು ಬಳಸಿದೆ ಎಂದು ಅಜಯ್ ಮಾಕೆನ್ ಹೇಳಿದ್ದರು. ಹಾಗಾದರೆ ಯಾರು ಸತ್ಯವನ್ನು ಹೇಳುತ್ತಿದ್ದಾರೆ? ರಾಹುಲ್ ತೆಲಂಗಾಣದಲ್ಲಿ ಹೇಳಿದ್ದೇ ಅಥವಾ ದೆಹಲಿಯಲ್ಲಿ ಹೇಳಿದ್ದೇ? ಆಗ ವಕ್ತಾರು ಹೇಳಿದ್ದೇ? ಅಥವಾ ಈಗ ವಕ್ತಾರರು ಹೇಳುತ್ತಿರುವುದೇ?” ಎಂದು ಸ್ಮೃತಿ ಇರಾನಿ ಕೇಳಿದ್ದಾರೆ.

    ಪ್ರಶ್ನೆಗಾಗಿ ಹಣ ಪಡೆದ ಆರೋಪ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ನಿವಾಸದ ಮೇಲೆ ಸಿಬಿಐ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts