More

    ಸಂತೆ ಮೈದಾನಗಳಿಗೆ ಸ್ಮಾರ್ಟ್ ಟಚ್

    ಹುಬ್ಬಳ್ಳಿ: ಹುಬ್ಬಳ್ಳಿಯ ಎರಡು ಪ್ರಮುಖ ಸಂತೆ ಮೈದಾನಗಳು ಕೆಲವೇ ದಿನಗಳಲ್ಲಿ ವ್ಯವಸ್ಥಿತ ರೂಪ ಪಡೆದುಕೊಳ್ಳಲಿವೆ. ‘ಸ್ಮಾರ್ಟ್’ ಆಗಿ ಕಂಗೊಳಿಸಲಿವೆ.
    ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣ ಕಾಮಗಾರಿ ಕೈಗೊಂಡಿರುವ ಉಣಕಲ್ಲ ಸಂತೆ ಮೈದಾನವು ಆಗಸ್ಟ್​ನಲ್ಲಿ ಹಾಗೂ ಬೆಂಗೇರಿ ಸಂತೆ ಮೈದಾನವು ಸೆಪ್ಟೆಂಬರ್​ನಲ್ಲಿ ಲೋಕಾರ್ಪಣೆಗೊಳ್ಳಲಿವೆ. ಈ ನಿಟ್ಟಿನಲ್ಲಿ ಅಂತಿಮ ಹಂತದ ಕಾಮಗಾರಿ ಭರದಿಂದ ಸಾಗಿದೆ.
    ಬೆಂಗೇರಿ ಹಾಗೂ ಉಣಕಲ್ಲ ಸಂತೆ ಮೈದಾನಗಳಲ್ಲಿ ಈ ಮೊದಲು ಅವ್ಯವಸ್ಥೆಯದ್ದೇ ದರಬಾರು ಆಗಿತ್ತು. ಜಾಗ ಸಿಕ್ಕಲ್ಲೆಲ್ಲ ತರಕಾರಿ, ಹೂವು, ಹಣ್ಣು ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಮಾರುಕಟ್ಟೆಗೆ ಬರುವವರಿಗೆ ಕಾಲಿಡಲೂ ಜಾಗ ಇರದಂತಹ ಪರಿಸ್ಥಿತಿ ತಲೆದೋರಿತ್ತು.
    ಈ ಎರಡೂ ಮಾರುಕಟ್ಟೆಗಳನ್ನು ಅಭಿವೃದ್ಧಿಗೊಳಿಸುವುದಕ್ಕೆ ಸುಮಾರು 2 ವರ್ಷಗಳ ಹಿಂದೆ ಸ್ಮಾರ್ಟ್​ಸಿಟಿ ಅಡಿ ಯೋಜನೆ ರೂಪಿಸಲಾಗಿತ್ತು. 12,700 ಚದರ ಮೀಟರ್ ವಿಸ್ತೀರ್ಣದ ಬೆಂಗೇರಿ ಸಂತೆ ಮೈದಾನವನ್ನು 6.70 ಕೋಟಿ ರೂ. ವೆಚ್ಚದಲ್ಲಿ ಹಾಗೂ 668 ಚ.ಮೀ. ವಿಸ್ತೀರ್ಣದ ಉಣಕಲ್ಲ ಮೈದಾನವನ್ನು 2.10 ಕೋಟಿ ರೂ. ವೆಚ್ಚದಡಿ ನವೀಕರಣ ಗೊಳಿಸಲಾಗುತ್ತಿದೆ.
    ಜನತಾ ಬಜಾರ, ಎಂ.ಜಿ. ಮಾರ್ಕೆಟ್​ನಲ್ಲಿ ಹೆಚ್ಚುತ್ತಿರುವ ಜನಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಎರಡೂ ಸಂತೆ ಮೈದಾನಗಳನ್ನು ನವೀಕರಿಸಲು ನಿರ್ಧರಿಸಲಾಯಿತು.
    ಎರಡೂ ಸಂತೆ ಮೈದಾನಗಳಲ್ಲಿ ಪ್ರತಿ ಶನಿವಾರ ಸಂತೆ ನಡೆಯುತ್ತದೆ. ನವೀಕೃತ ಮೈದಾನಗಳು ಲೋಕಾರ್ಪಣೆಗೊಂಡ ನಂತರ ವಾರದಲ್ಲಿ 2 ದಿನ ಹಾಗೂ ನಂತರದ ದಿನಗಳಲ್ಲಿ ನಿತ್ಯ ಸಂತೆ ನಡೆಸಲು ಮಹಾನಗರ ಪಾಲಿಕೆ ತೀರ್ವನಿಸಿದೆ.
    ಎರಡೂ ಸಂತೆ ಮೈದಾನಗಳಲ್ಲಿ ಸಿಮೆಂಟ್ ರಸ್ತೆ ನಿರ್ವಿುಸಲಾಗಿದೆ. ಮಳೆ ನೀರು ಮೈದಾನದಲ್ಲಿ ಬೀಳದಂತೆ ಹಾಗೂ ವ್ಯಾಪಾರಸ್ಥರು ಮತ್ತು ಖರೀದಿಗೆ ಬರುವ ಜನರನ್ನು ಬಿಸಿಲು, ಧೂಳು, ಗಾಳಿಯಿಂದ ರಕ್ಷಿಸಲು ಮೇಲ್ಛಾವಣಿ ನಿರ್ವಿುಸುವ ಕಾಮಗಾರಿ ಅಂತಿಮ ಹಂತದಲ್ಲಿದೆ.
    ಮಾರುಕಟ್ಟೆ ಸುತ್ತ ನೀರು ಹರಿದು ಹೋಗಲು ಚರಂಡಿ ನಿರ್ವಿುಸಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ, ಮೈದಾನದ ಪ್ರವೇಶಕ್ಕೆ ಸ್ವಾಗತ ಕಮಾನು ನಿರ್ವಣಗೊಂಡಿವೆ.
    ಬೆಂಗೇರಿ ಸಂತೆ ಮೈದಾನದಲ್ಲಿ 1,260 ಚ.ಮೀ. ವಿಸ್ತೀರ್ಣದಲ್ಲಿ ರ್ಪಾಂಗ್ ವ್ಯವಸ್ಥೆ ನಿರ್ವಿುಸಿದ್ದು, 22 ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಉಣಕಲ್ಲ ಸಂತೆ ಮೈದಾನದಲ್ಲಿ 6 ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಎರಡೂ ಮೈದಾನಗಳಲ್ಲಿ ನೀರು ಶುದ್ಧೀಕರಣ ಘಟಕ ನಿರ್ವಣಗೊಳ್ಳಲಿವೆ.
    ಈ ಎರಡೂ ಸಂತೆ ಮೈದಾನಗಳು ಕೇವಲ ತರಕಾರಿ, ಹೂವು, ಹಣ್ಣು ಮಾರಾಟಕ್ಕೆ ಸೀಮಿತಗೊಳ್ಳದೆ, ಬೆಳಗಿನಜಾವ ವಾಯು ವಿಹಾರಕ್ಕೆ ಹಾಗೂ ಕಟ್ಟೆಗಳಲ್ಲಿ ಯೋಗಾಭ್ಯಾಸ ಮಾಡಲೂ ಉಪಯೋಗ ಆಗಲಿವೆ.


    ಬೆಂಗೇರಿ ಹಾಗೂ ಉಣಕಲ್ಲ ಸಂತೆ ಮೈದಾನಗಳಲ್ಲಿ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ. ಎರಡೂ ಮೈದಾನಗಳಲ್ಲಿ ಈ ಮೊದಲಿನಂತೆ ಮನಬಂದಂತೆ ತರಕಾರಿ, ಹೂವು, ಹಣ್ಣುಗಳ ಮಾರಾಟ, ಕಸ ಕಾಣಿಸುವುದಿಲ್ಲ. ಶಿಸ್ತು, ಸ್ವಚ್ಛತೆ ಇಲ್ಲಿ ಕಾಪಾಡಲಾಗುವುದು.
    | ಶಕೀಲ್ ಅಹ್ಮದ್ ಎಂಡಿ, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts