More

    ಸ್ಮಾರ್ಟ್ ಕ್ರೀಡಾಂಗಣದ ಅವ್ಯವಸ್ಥೆ: ಪ್ರತಿಭಟನೆ

    ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ಧ ಶಿವಮೊಗ್ಗ ನಾಗರಿಕರ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರತಿಭಟನೆ ಸರಣಿ ಮುಂದುವರಿದಿದೆ. ಶನಿವಾರ ನೆಹರೂ ಕ್ರೀಡಾಂಗಣದ ಎದುರು ಪ್ರತಿಭಟನೆ ನಡೆಸಿದ ಒಕ್ಕೂಟದ ಪ್ರಮುಖರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಹುಲ್ಲಿನ ಹಾಸು ಅಧಿಕಾರಿಗಳ ನಿರ್ಲಕ್ಯದಿಂದ ಸಂಪೂರ್ಣ ನಾಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ನೆಹರೂ ಕ್ರೀಡಾಂಗಣದ ನವೀಕರಣ, ಹಾಕಿ ಕ್ರೀಡಾಂಗಣ ನಿರ್ಮಾಣದಲ್ಲಿ ಸ್ಮಾರ್ಟ್ ಸಿಟಿ ಸಿಬ್ಬಂದಿ ತೋರಿರುವ ನಿರ್ಲಕ್ಷೃವನ್ನು ಪಟ್ಟಿ ಮಾಡಿದ ಪ್ರತಿಭಟನಾಕಾರರು, ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿಗಳ ನಿಜ ಬಣ್ಣ ಬಯಲಾಗಿದೆ ಎಂದು ದೂರಿದರು.
    ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಿಸಿರುವ ಚರಂಡಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಕ್ರೀಡಾಂಗಣದೊಳಗೆ ವಾಯುವಿಹಾರಕ್ಕೆ ನಿರ್ಮಾಣ ಮಾಡಿರುವ ಮಾರ್ಗ ಸಂಪೂರ್ಣ ಹಾಳಾಗಿದೆ. ಅಂತರಾಷ್ಟ್ರೀಯ ಮಟ್ಟದ ವಾಲಿಬಾಲ್ ಅಂಕಣ ಅವೈಜ್ಞಾನಿಕವಾಗಿದೆ. ಸಣ್ಣ ಮಳೆಗೂ ಇಲ್ಲಿ ಅದ್ವಾನ ಉಂಟಾಗುತ್ತದೆ ಎಂದು ತಿಳಿಸಿದರು.
    ಕ್ರೀಡಾಂಗಣದ ಸುತ್ತಲೂ ಅಳವಡಿಸಿರುವ ಇಂಟರ್‌ಲಾಕ್ ಹಲವು ಕಡೆಗಳಲ್ಲಿ ಕುಸಿದು ಹೋಗಿದೆ. ಕಬ್ಬಿಣದ ಬೇಲಿ ಅತ್ಯಂತ ಕಳಪೆಯಾಗಿದೆ. ಸ್ಟೇಡಿಯಂ ಹಿಂಬಾಗದಲ್ಲಿ ನಿರ್ಮಿಸಿರುತ್ತಿರುವ ಮೂರು ಮಹಡಿಯ ಕಟ್ಟಡಕ್ಕೆ ಅಗ್ನಿ ಶಾಮಕದಳದ ಅನುಮತಿ ಪಡೆದಿಲ್ಲ. ಇಲ್ಲಿ ಮಕ್ಕಳ ಹಾಕಿ ಕ್ರೀಡೆಯ ಅಭ್ಯಾಸಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ ಆಸ್ಟ್ರೋ ಟರ್ಫ್‌ಗೆ ತಜ್ಞರ ವರದಿ ಪಡೆದಿಲ್ಲ ಎಂದು ಆರೋಪಿಸಿದರು.
    ಶಿವಮೊಗ್ಗ ನಾಗರಿಕರ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್‌ಕುಮಾರ್ ಶೆಟ್ಟಿ, ಪ್ರಮುಖರಾದ ಎಸ್.ಬಿ.ಅಶೋಕ್ ಕುಮಾರ್, ಪರಿಸರ ರಮೇಶ್, ಮನೋಹರ ಗೌಡ, ನಾಗರಾಜ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts