More

    ಚಿಕ್ಕ ಕುಟುಂಬದ ಆದರ್ಶ ಪಾಲಿಸಲು ಡಿಎಚ್‌ಒ ಡಾ.ರಂಗನಾಥ್ ಸಲಹೆ

    ಚಿತ್ರದುರ್ಗ: ಪ್ರತಿಯೊಬ್ಬರೂ ಚಿಕ್ಕ ಕುಟುಂಬದ ಸಂಕಲ್ಪ ತೊಟ್ಟರೆ ಜನಸಂಖ್ಯೆ ನಿಯಂತ್ರಣದ ಜತೆಗೆ ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ಹೇಳಿದರು.

    ಇಲ್ಲಿನ ಬುದ್ಧ ನಗರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಚಿಕ್ಕ ಕುಟುಂಬದ ಪರಿಕಲ್ಪನೆಯಲ್ಲಿ ಆದರ್ಶ ಪಾಲಿಸಿದರೆ ಸರ್ಕಾರದ ಸಕಲ ಸೌಲಭ್ಯಗಳೂ ಸಕಾಲಕ್ಕೆ ಲಭ್ಯವಾಗುತ್ತವೆ. ಕುಟುಂಬ ಹಾಗೂ ದೇಶದ ಆರ್ಥಿಕ ವ್ಯವಸ್ಥೆಯೂ ಸಬಲವಾಗಿರುತ್ತದೆ ಎಂದು ಹೇಳಿದರು.

    ಜನಸಂಖ್ಯೆ ಹೆಚ್ಚಾದಂತೆ ಮೂಲ ಸೌಕರ್ಯ ಕೊರತೆ, ಬಡತನ, ನಿರುದ್ಯೋಗ ಆಹಾರದ ಕೊರತೆ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದರಿಂದ ಕೆಲ ರೋಗಗಳು ಉಲ್ಬಣಿಸುವ ಸಾಧ್ಯತೆ ಇದೆ ಎಂದು ಹೇಳಿದರು.

    ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಸಾಲಿ ಮಂಜಪ್ಪ ಮಾತನಾಡಿ, ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬುದನ್ನು ಮನಗಂಡು ಮಿತ ಸಂತಾನದ ಕಡೆ ಗಮನಹರಿಸಬೇಕು. ಸರ್ಕಾರದ ಸೌಲಭ್ಯ ಪಡೆದು ಜನಸಂಖ್ಯಾ ನಿಯಂತ್ರಣದ ಜತೆಗೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

    ಶಸ್ತ್ರ ಚಿಕಿತ್ಸಕ ಡಾ.ಸಾಲಿ ಮಂಜಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಸೇರಿ ವಿವಿಧ ವೃಂದದ 20 ನೌಕರರನ್ನು ಸನ್ಮಾನಿಸಲಾಯಿತು.

    ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ಗೌರಮ್ಮ. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಗುರುಮೂರ್ತಿ, ಗಂಗಾಧರ್, ರಂಗಾರೆಡ್ಡಿ, ಪ್ರಶಾಂತ್, ಪ್ರವೀಣ್, ರೇಣುಕಾ ಸ್ವಾಮಿ, ಗೋಪಿಕೃಷ್ಣ, ನಂದೀಶ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ತಿಪ್ಪಮ್ಮ, ನಗರಸಭಾ ಸದಸ್ಯೆ ಶ್ರೀದೇವಿ ಚಕ್ರವರ್ತಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು

    ರಕ್ತ ಹೀನತೆ, ಇತರೆ ಸಮಸ್ಯೆ ಇರುವ ಮಹಿಳೆಯರು ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆಗೆ ತಾವು ಮುಂದಾಗದೆ ಗಂಡಂದಿರ ಮನವೊಲಿಸಬೇಕು. ಸಂತಾನ ನಿರೋಧ ಶಸ್ತ್ರ ಚಿಕಿತ್ಸೆಗೆ ಪುರುಷರೂ ಸಂಕೋಚ ಬಿಟ್ಟು ಸ್ವಯಂ ಆಗಿ ಮುಂದೆ ಬರಬೇಕು. ಆರೋಗ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ ವರ್ಗ ಕುಟುಂಬ ಕಲ್ಯಾಣ ಕಾರ್ಯಕ್ರಮ ಮಾಹಿತಿ ಗ್ರಾಮೀಣ-ನಗರ ಪ್ರದೇಶಗಳಲ್ಲಿ ನೀಡುತ್ತಿದ್ದಾರೆ. ಮಿತ ಸಂತಾನದ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಭಾಗಿತ್ವ ಅವಶ್ಯವಾಗಿದೆ.

    ಡಾ.ರೇಣುಪ್ರಸಾದ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts