More

    ವಿದ್ಯುತ್ ಬಿಲ್ ಲೋಪವಿಲ್ಲ: ಗ್ರಾಹಕರ ನೆರವಿಗಾಗಿ ಸ್ಲ್ಯಾಬ್ ಬದಲಾವಣೆ 

    ಬೆಂಗಳೂರು: ಲಾಕ್​ಡೌನ್​ನಿಂದಾಗಿ ಎರಡು ತಿಂಗಳ ವಿದ್ಯುತ್ ಬಳಕೆಯ ಬಿಲ್ ಅನ್ನು ಒಮ್ಮೆಲೆ ನೀಡಲಾಗಿದ್ದರೂ, ಸ್ಲ್ಯಾಬ್​ಗಳನ್ನು ಬದಲಿಸಲಾಗಿದೆ. ಹೀಗಾಗಿ ಗ್ರಾಹಕರಿಗೆ ನೀಡಲಾಗಿರುವ ಬಿಲ್ ಮೊತ್ತದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ.

    ಏಪ್ರಿಲ್​ನಲ್ಲಿ ಮೀಟರ್ ರೀಡ್ ಮಾಡಿ ಬಿಲ್ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಗ್ರಾಹಕರಿಗೆ ಈ ಹಿಂದಿನ ತಿಂಗಳು ಪಾವತಿಸಲಾದ ಬಿಲ್ ಮೊತ್ತದ ಆಧಾರದ ಮೇಲೆ ಸರಾಸರಿ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಮೇನಲ್ಲಿ ಶೇ.99.99 ಗ್ರಾಹಕರಿಗೆ ಮೀಟರ್ ರೀಡ್ ಮಾಡಿ ಬಿಲ್ ನೀಡಲಾಗಿದೆ. ಈ ವೇಳೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಳಕೆಯಾದ ವಿದ್ಯುತ್​ನ ಮೊತ್ತವನ್ನು ಒಂದೇ ಬಿಲ್​ನಲ್ಲಿ ನೀಡಲಾಗಿದೆ. ಹೀಗಾಗಿ ಗ್ರಾಹಕರಿಗೆ ಬಿಲ್ ಮೊತ್ತ ಹೆಚ್ಚಾಗಿದೆ ಎಂಬ ಭಾವನೆ ಬಂದಿದೆ. ಬೆಸ್ಕಾಂನಿಂದ ಯಾವುದೇ ರೀತಿಯಲ್ಲೂ ಹೆಚ್ಚಿನ ಮೊತ್ತದ ಬಿಲ್ ನೀಡಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇದನ್ನೂ ಓದಿ     ಕೆ.ಎನ್.ರಾಜಣ್ಣ, ನಾನೂ ಕೂಡಿಕೊಂಡು ಮೈತ್ರಿ ಸರ್ಕಾರ ಪತನ ಮಾಡಿದೆವು

    ಈ ಹಿಂದಿನ ತಿಂಗಳುಗಳಲ್ಲಿ ಪ್ರತಿ 30 ಯುನಿಟ್ ಬಳಕೆಗೆ 3.75 ರೂ. ವಿಧಿಸಲಾಗುತ್ತಿತ್ತು. ಎರಡು ತಿಂಗಳಿಗೆ ಒಮ್ಮೆಲೇ ಬಿಲ್ ನೀಡಲಾಗುತ್ತಿರುವ ಕಾರಣ ಆ ಮೊತ್ತವನ್ನು 60 ಯುನಿಟ್​ಗೆ ಹೆಚ್ಚಿಸಲಾಗಿದೆ. ಅದೇ ರೀತಿ 70 ಯುನಿಟ್​ನಿಂದ 140ಕ್ಕೆ, 100ರಿಂದ 200 ಯುನಿಟ್​ಗೆ ಹೆಚ್ಚಿಸಿ ಸ್ಲ್ಯಾಬ್ ಬದಲಿಸಲಾಗಿದೆ. ಗ್ರಾಹಕರಿಗೆ ಯಾವುದೇ ರೀತಿ ಹೊರೆಯಾಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

    ಬೇಡಿಕೆ ಹೆಚ್ಚಳ: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್​ಗೌಡ ಮಾತನಾಡಿ, ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ವರ್ಷದ ಬೇಸಿಗೆಯಲ್ಲಿ 6,100 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಈಗಾಗಲೆ 4,900 ಮೆ.ವ್ಯಾ. ಬೇಡಿಕೆ ಪೂರೈಸಲಾಗಿದೆ. ಈಗದು 3,020 ಮೆ.ವ್ಯಾಟ್ ಇರಬೇಕಿತ್ತು. ಇದನ್ನು ಗಮನಿಸಿದರೆ ಶೇ.30 ಬೇಡಿಕೆ ಹೆಚ್ಚಿದಂತಾಗಿದೆ. ಇದನ್ನು ಗಮನಿಸಿದರೆ ಬಿಲ್ ಮೊತ್ತದ ವಿವರ ತಿಳಿಯಲಿದೆ ಎಂದು ಹೇಳಿದರು.

    ವಿದ್ಯುತ್ ಬಿಲ್ ಲೋಪವಿಲ್ಲ: ಗ್ರಾಹಕರ ನೆರವಿಗಾಗಿ ಸ್ಲ್ಯಾಬ್ ಬದಲಾವಣೆ 

    ಜೂ.30ರವರೆಗೆ ಅವಕಾಶ

    ಬಹುತೇಕ ಎಲ್ಲ ಗ್ರಾಹಕರ ಮೀಟರ್ ರೀಡ್ ಮೂಲಕವೇ ಬಿಲ್ ನೀಡಲಾಗಿದೆ. ಕಂಟೈನ್​ವೆುಂಟ್ ವಲಯ, ಮೀಟರ್ ಕಾಣಿಸದ ಮನೆಗಳು, ಎಂಎಸ್​ಎಂಇಗಳಿಗೆ ಸರಾಸರಿ ಮೊತ್ತವನ್ನಾಧರಿಸಿ ಬಿಲ್ ಕೊಡಲಾಗಿದೆ. ಈ ಗ್ರಾಹಕರು ತಮ್ಮ ಮೀಟರ್ ಅನ್ನು ರೀಡ್ ಮಾಡಿಸಿ ಬಿಲ್ ಪಡೆಯಲು ಜೂನ್ 30ರವರೆಗೆ ಅವಕಾಶ ನೀಡಲಾಗಿದೆ.ಅಲ್ಲಿಯವರೆಗೆ ಎಲ್ಲ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್​ಗೌಡ ತಿಳಿಸಿದರು.

    ಇದನ್ನೂ ಓದಿ   ಕೋವಿಡ್​ನಿಂದ ತತ್ತರಿಸಿದ ವಿಶ್ವದ ಯಾವುದೇ ರಾಷ್ಟ್ರ ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ನೆರವು ಘೋಷಣೆ ಮಾಡಿಲ್ಲ

    ವಿದ್ಯುತ್ ಬಿಲ್ ಕಟ್ಟಲು ಕಷ್ಟವಾಗುತ್ತದೆ ಎಂದಾದರೆ, ಗ್ರಾಹಕರು ಕಂತಿನ ಮೂಲಕ ಪಾವತಿಸಲು ಅವಕಾಶವಿದೆ. ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪ ವಿಭಾಗಕ್ಕೆ ತೆರಳಿ ಮನವಿ ಸಲ್ಲಿಸಿದರೆ, 3 ತಿಂಗಳಲ್ಲಿ ಕಂತಿನ ಮೂಲಕ ಕಟ್ಟಲು ಅವಕಾಶ ಮಾಡಿಕೊಡಲಾಗುವುದು ಎಂದರು.

    4 ಸಾವಿರ ಕೋಟಿ  ರೂ. ಬೇಕು

    ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡಲು ಎಲ್ಲ ಎಸ್ಕಾಂಗಳಿಗೆ ಮಾಸಿಕ 2,956 ಕೋಟಿ ರೂ. ಅವಶ್ಯಕತೆಯಿದೆ. ಜತೆಗೆ ವೇತನಕ್ಕಾಗಿ 650 ಕೋಟಿ ರೂ., ಸಾಲದ ಮೇಲಿನ ಬಡ್ಡಿ ಪಾವತಿಗೆ 777 ಕೋಟಿ ರೂ. ಸೇರಿ ಮಾಸಿಕ 4,325 ಕೋಟಿ ರೂ.ಗೂ ಹೆಚ್ಚಿನ ಹಣದ ಅವಶ್ಯಕತೆಯಿದೆ. ಸರ್ಕಾರದಿಂದ ಎಸ್ಕಾಂಗಳಿಗೆ ಯಾವುದೇ ರೀತಿಯ ಅನುದಾನ ಬರುವುದಿಲ್ಲ. ಗ್ರಾಹಕರಿಂದ ಬಿಲ್ ಮೊತ್ತ ಪಡೆದು ಎಸ್ಕಾಂಗಳನ್ನು ನಡೆಸಬೇಕಿದೆ ಎಂದು ಮಹೇಂದ್ರ ಜೈನ್ ಹೇಳಿದರು.

    ಸೆಲ್ಪ್ ರೀಡಿಂಗ್ ಮಾಡಿಕೊಳ್ಳಿ

    ಗ್ರಾಹಕರಿಗೆ ಅನುಮಾನವಿದ್ದಲ್ಲಿ ಸಹಾಯವಾಣಿ 1912ಗೆ ಕರೆ ಮಾಡಬಹುದು. ಜತೆಗೆ ತಮ್ಮ ಮೀಟರ್ ಫೋಟೋ ಅಥವಾ ಆರ್​ಆರ್ ಸಂಖ್ಯೆಯನ್ನು ಬೆಸ್ಕಾಂ (ಡಿಡಿಡಿ.ಚಿಛಿಠ್ಚಟಞ.ಟ್ಟಜ)ವೆಬ್​ಸೈಟ್​ನಲ್ಲಿನ ಆಯಾ ಉಪವಿಭಾಗದ ಸಂಖ್ಯೆಗೆ ವಾಟ್ಸ್ ಆಪ್ ಮಾಡಬಹುದು. ಆ ಮೂಲಕ ಮತ್ತೊಮ್ಮೆ ಮೀಟರ್ ರೀಡ್ ಮಾಡಿ ಬಿಲ್​ನಲ್ಲಿ ತಪ್ಪಿದ್ದರೆ ಸರಿಪಡಿಸಲಾಗುವುದು. ಅದಕ್ಕೂ ತೃಪ್ತರಾಗದಿದ್ದರೆ ಸಂಬಂಧಿಸಿದ ಉಪ ವಿಭಾಗಕ್ಕೆ ತೆರಳಿ ಅನುಮಾನ ಬಗೆಹರಿಸಿಕೊಳ್ಳಬಹುದು.

    ಲಾಕ್​ಡೌನ್​ನಿಂದ ಎಲ್ಲರೂ ಮನೆಯಲ್ಲೇ ಇರುತ್ತಾರೆ. ಮನೆಯಿಂದಲೇ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕಾಗಿ ವಿದ್ಯುತ್ ಕಡಿತಕ್ಕೆ ಅವಕಾಶ ನೀಡುತ್ತಿಲ್ಲ. ಮಳೆಗಾಲಕ್ಕೂ ಮುನ್ನ ಮಾಡಬೇಕಾದ ನಿರ್ವಹಣೆ ಕೆಲಸವನ್ನೂ ಮಾಡದಂತೆ ಸೂಚಿಸಲಾಗಿದೆ.

    | ರಾಜೇಶ್​ಗೌಡ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

    ವಿಮಾನ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಾರಾಟಕ್ಕೆ ಮುಹೂರ್ತ ಫಿಕ್ಸ್​- ಇಲ್ಲಿದೆ ನೋಡಿ ಸಂಪೂರ್ಣ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts