More

    ಕ್ಯಾಚ್ ಬಿಟ್ಟು ಕೆಟ್ಟ ಬಾಂಗ್ಲಾ ತಂಡ ; ಶ್ರೀಲಂಕಾ ತಂಡಕ್ಕೆ ಭರ್ಜರಿ ಜಯ

    ಶಾರ್ಜಾ: ಎಡಗೈ ಬ್ಯಾಟ್ಸ್‌ಮನ್ ಚರಿತಾ ಅಸಲಂಕಾ (80*ರನ್, 49 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಭನುಕಾ ರಾಜಪಕ್ಷ (53ರನ್, 31 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಶುಭಾರಂಭ ಕಂಡಿತು. ನಿರ್ಣಾಯಕ ಹಂತದಲ್ಲಿ ಲಿಟನ್ ದಾಸ್, ಚರಿತಾ ಅಸಲಂಕಾ ಅವರ ಎರಡು ಕ್ಯಾಚ್ (12, 14ನೇ ಓವರ್‌ನಲ್ಲಿ ) ಕೈಚೆಲ್ಲಿದ್ದು ಬಾಂಗ್ಲಾ ಪಾಲಿಗೆ ದುಬಾರಿಯಾಯಿತು. ಈ ಅವಕಾಶವನ್ನು ಸೂಕ್ತವಾಗಿ ಬಳಿಸಿಕೊಂಡ ಅಸಲಂಕಾ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ, ಮುಶ್ಫಿಕರ್ ರಹೀಂ (57*ರನ್, 37 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 171 ರನ್ ಕಲೆಹಾಕಿತು. ಪ್ರತಿಯಾಗಿ ಶ್ರೀಲಂಕಾ ತಂಡ, ಆರಂಭಿಕ ವೈಫಲ್ಯದ ನಡುವೆಯೂ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 172 ರನ್‌ಗಳಿಸಿ ಜಯದ ನಗೆ ಬೀರಿತು.

    ಬಾಂಗ್ಲಾದೇಶ: 4 ವಿಕೆಟ್‌ಗೆ 171 (ಮೊಹಮದ್ ನೈಮ್ 62, ಲಿಟನ್ ದಾಸ್ 16, ಮುಶ್ಫಿಕರ್ ರಹೀಂ 57*, ಚಮಿಕಾ ಕರುಣರತ್ನೆ 12ಕ್ಕೆ 1, ಬಿನುರಾ ೆರ್ನಾಂಡೋ 27ಕ್ಕೆ 1, ಲಹಿರು ಕುಮಾರ 29ಕ್ಕೆ 1), ಶ್ರೀಲಂಕಾ: 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 172 (ಥುಮ್ ನಿಸ್ಸಾಕ 24, ಚರಿತಾ ಅಸಲಂಕಾ 80*, ಭನುಕಾ ರಾಜಪಕ್ಷ 53, ನಸುಮ್ ಅಹಮದ್ 29ಕ್ಕೆ 2, ಶಕೀಬ್ ಅಲ್ ಹಸನ್ 17ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts