More

    ಗಗನಕ್ಕೇರಿದ ಕಟ್ಟಡ ಸಾಮಗ್ರಿ ದರ

    | ನವೀನ್ ಬಿಲ್ಗುಣಿ ಶಿವಮೊಗ್ಗ

    ಬರದಿಂದ ಇಡೀ ರಾಜ್ಯ ತತ್ತರಿಸಿರುವ ನಡುವೆಯೇ ನೀರಿನ ಕೊರತೆ ಮತ್ತು ಕಚ್ಚಾ ವಸ್ತುಗಳ ಅಭಾವದಿಂದ ಸಿಮೆಂಟ್, ಕಬ್ಬಿಣ, ಎಂ. ಸ್ಯಾಂಡ್ ದರ ತುಟ್ಟಿಯಾಗಿದೆ. ಇದರಿಂದಾಗಿ ಸ್ವಂತದೊಂದು ಮನೆ, ಮಳಿಗೆ, ವಾಣಿಜ್ಯ ಸಂಕೀರ್ಣ ನಿರ್ವಿುಸಿಕೊಳ್ಳುವವರಿಗೆ ಬರೆ ಬಿದ್ದಂತಾಗಿದೆ.

    ಕಚ್ಚಾವಸ್ತುಗಳು ಸಿಗದೆ ಸಿಮೆಂಟ್ ಪ್ರತಿ 40 ಕೆಜಿ ಬ್ಯಾಗ್​ಗೆ 15ರಿಂದ 20 ರೂ. ಹೆಚ್ಚಳವಾಗಿದೆ. ಇನ್ನೂ ಕಬ್ಬಿಣ ಪ್ರತಿ ಟನ್​ಗೆ 4ರಿಂದ 5 ಸಾವಿರ ರೂ.ವರೆಗೂ ಏರಿಕೆಯಾಗಿದೆ. ಎಂ. ಸ್ಯಾಂಡ್ ಕೂಡ 4 ಗಜ ಸಾಗಿಸುವ ಪ್ರತಿ ಟ್ರ್ಯಾಕ್ಟರ್​ಗೆ 1,500 ರೂ. ಜಾಸ್ತಿಯಾಗಿದ್ದು ಮಧ್ಯಮ ವರ್ಗದವರನ್ನು ಸಂಕಷ್ಟಕ್ಕೆ ದೂಡಿದೆ. ಜಲಮೂಲಗಳೆಲ್ಲ ಬತ್ತಿ ಬರಿದಾಗಿವೆ. ನದಿ, ಹಳ್ಳ-ಕೊಳ್ಳಗಳಲ್ಲಿ ನೀರಿಲ್ಲದೆ ಜಲಚರಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಈ ನಡುವೆ ಮನೆ ಕಟ್ಟುವ ಯೋಜನೆ ಹಾಕಿಕೊಂಡವರಿಗೆ ಸಿಮೆಂಟ್, ಕಬ್ಬಿಣ ದುಬಾರಿ ಆಗಿರುವುದು ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

    ಪ್ರತಿಷ್ಠಿತ ಕಂಪನಿಗಳ ಸಿಮೆಂಟ್ ದರ 40 ಕೆ.ಜಿ ಬ್ಯಾಗ್​ಗೆ ಈ ಮೊದಲು 335ರಿಂದ 360 ರೂ.ವರೆಗೆ ಇತ್ತು. ಮೂರ್ನಾಲ್ಕು ದಿನಗಳಿಂದ ಪ್ರತಿಯೊಂದು ಕಂಪನಿಯ ಸಿಮೆಂಟ್ ದರ ಆಜುಬಾಜು 375 ರೂ. ತಲುಪಿದೆ. ಪ್ರತಿ 40 ಕೆ.ಜಿ ಬ್ಯಾಗ್​ಗೆ ಅಲ್ಟ್ರಾಟೆಕ್ 365-375 ರೂ., ಎಸಿಸಿ 360-370, ಜೆಕೆ ಸೂಪರ್, ಜುವಾರಿ ಸಿಮೆಂಟ್ ತಲಾ 350-360 ರೂ., ರಾಮ್ಕೋ 355-365 ರೂ., ಕೋರಮಂಡಲ್ ಮತ್ತು ಭಾರತಿ ತಲಾ 360ರಿಂದ 370 ರೂ.ಗೆ ಹೆಚ್ಚಳವಾಗಿದೆ.

    62 ಸಾವಿರ ದಾಟಿದ ಕಬ್ಬಿಣ: ಸಿಮೆಂಟ್ ದರ ಏರಿಕೆ ನಡುವೆ ಕಬ್ಬಿಣ ಕೂಡಾ ದುಬಾರಿಯಾಗಿದೆ. ಜೆಎಸ್​ಡಬ್ಲ್ಯು ಸಂಸ್ಥೆಯ ಕಬ್ಬಿಣದ ದರ ಪ್ರತಿ ಕೆ.ಜಿಗೆ 4ರಿಂದ 5 ರೂ. ಹೆಚ್ಚಳವಾಗಿದೆ. ಈ ಮೂಲಕ ಪ್ರತಿ ಟನ್​ಗೆ 58 ಸಾವಿರ ರೂ. ಇದ್ದ ದರ ಇದೀಗ 62 ಸಾವಿರಕ್ಕೆ ತಲುಪಿದೆ. ಕಾರ್ಖಾನೆಗಳಲ್ಲಿ ನೀರಿನ ಕೊರತೆ ಇರುವ ಕಾರಣ ಉತ್ಪಾದನೆ ಕುಂಠಿತವಾಗಿರುವುದೇ ದರ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಸ್ಥರು.

    ಇತರೆ ಉತ್ಪನ್ನವೂ ತುಟ್ಟಿ: ಸಿಮೆಂಟ್, ಕಬ್ಬಿಣ ಮಾತ್ರವಲ್ಲ, ಎಂ.ಸ್ಯಾಂಡ್, ಸಿಮೆಂಟ್ ಇಟ್ಟಿಗೆ(ಬ್ರಿಕ್ಸ್), ಕೆಂಪು ಇಟ್ಟಿಗೆ ಸೇರಿ ಗೃಹ ನಿರ್ವಣಕ್ಕೆ ಅಗತ್ಯವಾಗಿರುವ ಎಲ್ಲ ಉತ್ಪನ್ನಗಳ ದರವೂ ಗಗನಕ್ಕೇರುತ್ತಿದೆ. ಪ್ರತಿ ಟ್ರ್ಯಾಕ್ಟರ್ ಎಂ.ಸ್ಯಾಂಡ್ 4ರಿಂದ 4,500 ರೂ.ಗೆ ಸಿಗುತ್ತಿತ್ತು. ಈಗ 6 ಸಾವಿರ ರೂ. ತಲುಪಿದೆ. ಪ್ರತಿ ಕೆಂಪು ಇಟ್ಟಿಗೆ 10 ರೂ.ನಿಂದ 11 ರೂ.ಗೆ ಏರಿಕೆ ಆಗಿವೆ. ಪ್ರತಿ ಸಿಮೆಂಟ್ ಇಟ್ಟಿಗೆ (ಚಿಕ್ಕದು) 8 ರೂ. ಗೆ ಮಾರಾಟ ಮಾಡಲಾಗುತ್ತಿದೆ. ದೊಡ್ಡದು 55ರಿಂದ 60 ರೂ.ಗೆ ಪೂರೈಕೆ ಮಾಡಲಾಗುತ್ತಿದೆ.

    ಬೆಲೆ ಏರಿಕೆಯಿಂದ ಏನೆಲ್ಲ ಸಮಸ್ಯೆ ?

    1.ಮನೆ ನಿರ್ವಣಕ್ಕೆ ಯೋಜನೆ ಹಾಕಿಕೊಂಡವರಿಗೆ ಸಂಕಷ್ಟ

    2. ಮನೆಯ ಬಜೆಟ್ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ

    3. ಬಹಳಷ್ಟು ಕಾಮಗಾರಿಗಳು ಅರ್ಧಕ್ಕೆ ಸ್ಥಗಿತ

    4. ಮಾಲೀಕರಿಂದ ಹೆಚ್ಚುವರಿ ಮೊತ್ತ ಕೇಳುವ ಗುತ್ತಿಗೆದಾರ

    5. ಕಾರ್ಖಾನೆಗಳಲ್ಲಿ ಕಬ್ಬಿಣ ಉತ್ಪಾದನೆಗೆ ಸಿಗುತ್ತಿಲ್ಲ ನೀರು

    6. ಸಿಮೆಂಟ್ ಇಟ್ಟಿಗೆ, ಇಟ್ಟಿಗೆ ನಿರ್ವಣಕ್ಕೂ ಪರದಾಟ

    ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ ಗೃಹ ನಿರ್ವಣಕ್ಕೆ ಬೇಕಾದ ವಸ್ತುಗಳ ದರ ಏರಿಕೆ ಮಧ್ಯಮ ವರ್ಗದವರನ್ನು ದಂಗುಬಡಿಸಿದೆ. ಬರದಿಂದ ಕೃಷಿ ಆದಾಯವೂ ಇಲ್ಲ. ಇಂತಹ ಸಂದರ್ಭದಲ್ಲಿ ಸಿಮೆಂಟ್, ಕಬ್ಬಿಣ ಸೇರಿ ಇತರೆ ವಸ್ತುಗಳ ದರ ಹೆಚ್ಚಳ ಆಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

    | ರವೀಂದ್ರ ಅಬ್ಬಲಗೆರೆ ನಿವಾಸಿ

    ಬರಗಾಲದ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ನೀರಿನ ಅಭಾವವಿದೆ. ಇದು ಕಚ್ಚಾವಸ್ತುಗಳ ಉತ್ಪಾದನೆ ಮತ್ತು ಪೂರೈಕೆಗೆ ಅಡ್ಡಿಯಾಗುತ್ತಿದೆ. ಆ ಕಾರಣಕ್ಕೆ ಸಿಮೆಂಟ್ ಪ್ರತಿ ಬ್ಯಾಗ್​ಗೆ 15ರಿಂದ 20 ರೂ., ಕಬ್ಬಿಣ ಪ್ರತಿ ಕೆಜಿಗೆ 5 ರೂ. ಹೆಚ್ಚಳವಾಗಿದೆ. ಅಷ್ಟೇ ಅಲ್ಲದೆ, ಇತರೆ ವಸ್ತುಗಳ ದರವೂ ಏರಿಕೆ ಆಗಿದೆ.

    | ಸಂತೋಷ್ ಸಿಮೆಂಟ್ ವ್ಯಾಪಾರಿ

    6,6,6,6,6,6…ಒಂದೇ ಓವರ್’ನಲ್ಲಿ 6 ಸಿಕ್ಸರ್: ಯುವರಾಜ್ ಸಿಂಗ್ ಕ್ಲಬ್ ಸೇರಿದ ನೇಪಾಳ ಬ್ಯಾಟರ್, ಇಲ್ಲಿದೆ ವಿಡಿಯೋ..!

    ಆಂಧ್ರಪ್ರದೇಶ: ಚುನಾವಣಾ ಪ್ರಚಾರ ಸಭೆಯಲ್ಲಿ ಕಲ್ಲು ತೂರಾಟ, ಸಿಎಂ ಜಗನ್​ಗೆ ಗಂಭೀರ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts