More

    ಗಗನಕ್ಕೇರಿದ ಅಹಮದಾಬಾದ್ ಹೋಟೆಲ್, ವಿಮಾನಯಾನ ದರ!: ಇಂಡೋ-ಆಸೀಸ್ ಫೈನಲ್ ಕದನಕ್ಕೆ ಪಾಪ್ ತಾರೆಯ ಮೆರಗು, ಪ್ರಧಾನಿ ಮೋದಿ ಹಾಜರಿ

    ಅಹಮದಾಬಾದ್: ಟೀಮ್ ಇಂಡಿಯಾ ಸತತ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟ ಬೆನ್ನಲ್ಲೇ ಅಹಮದಾಬಾದ್‌ನ ಹೋಟೆಲ್ ಕೊಠಡಿಗಳ ದರ ಹಾಗೂ ವಿಮಾನ ಪ್ರಯಾಣದ ಟಿಕೆಟ್ ದರವೂ ಗಗನಕ್ಕೇರಿದೆ. ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯದ ನಂತರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸುತ್ತಮುತ್ತಲಿನ ಹೊಟೇಲ್‌ಗಳಿಗೆ ಮತ್ತೊಮ್ಮೆ ಭಾರಿ ಡಿಮಾಂಡ್ ಸೃಷ್ಟಿಯಾಗಿದ್ದು, ಕ್ರೀಡಾಭಿಮಾನಿಗಳು ಕೊಠಡಿಗಳನ್ನು ಕಾಯ್ದಿರಿಸಲು ಬೆಲೆ ಏರಿಕೆಯ ಸವಾಲು ಎದುರಿಸುತ್ತಿದ್ದಾರೆ. ಈಗಾಗಲೆ ಫೈನಲ್ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ಮಾರಾಟಗೊಂಡಿದ್ದು, 10 ಸಾವಿರ ರೂಪಾಯಿ ಮುಖಬೆಲೆಯ ಟಿಕೆಟ್ ಅತಿ ಕನಿಷ್ಠ ಎನಿಸಿದೆ. ಸಾಮಾನ್ಯವಾಗಿ 24 ಸಾವಿರ ರೂಪಾಯಿಗೆ ಲಭ್ಯವಿರುವ ತ್ರಿ-ಸ್ಟಾರ್ ಹೋಟೆಲ್ ಕೊಠಡಿಗಳ ಒಂದು ದಿನದ ಬಾಡಿಗೆ ಈಗ 2 ಲಕ್ಷ ರೂಪಾಯಿಗೂ ಅಧಿಕವಾಗಿವೆ. ವಿಮಾನ ಪ್ರಯಾಣ ದರವೂ ಶೇ.200ರಿಂದ 300ರಷ್ಟು ಹೆಚ್ಚಳ ಕಂಡಿವೆ. ನವೆಂಬರ್ 18ರಂದು ದೆಹಲಿ ಹಾಗೂ ಅಹಮದಾಬಾದ್ ನಡುವಿನ ವಿಮಾನ ಪ್ರಯಾಣ ದರ 15 ಸಾವಿರ ರೂಪಾಯಿಗೆ ಏರಿಕೆ ಕಂಡಿದೆ.

    ಫೈನಲ್‌ಗೆ ಪ್ರಧಾನಿ ಮೋದಿ?: ನವದೆಹಲಿ: ಭಾನುವಾರ ಅಹಮದಾಬಾದ್‌ನ ನರೆಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಪಂದ್ಯಕ್ಕೂ ಮುನ್ನ ಪ್ರಸಿದ್ದ ಪಾಪ್ ಗಾಯಕಿ ದುಹ ಲಿಪಾ ಅವರಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಜತೆಗೆ ಭಾರತೀಯ ವಾಯು ಸೇನೆಯ ಸೂರ್ಯಕಿರಣ್ ತಂಡದಿಂದ ವಿಶೇಷ ಏರ್‌ಶೋ ನಡೆಯಲಿದೆ ಎನ್ನಲಾಗಿದೆ. ಸರಳ ಕಾರ್ಯಕ್ರಮದ ಮೂಲಕ ಟೂರ್ನಿಗೆ ಚಾಲನೆ ನೀಡಲಾಗಿತ್ತು. 4ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿರುವ ಭಾರತ ತಂಡ ನವೆಂಬರ್ 19ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಒಟ್ಟಾರೆ 3ನೇ ಹಾಗೂ ತವರಿನಲ್ಲಿ 2ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದೆ.

    https://x.com/StarSportsIndia/status/1724657857189269881?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts