More

    ‘ನೇರ ಮೈಸ್ಪರ್ಶವಾಗಿದ್ದರೆ ಮಾತ್ರ ಲೈಂಗಿಕ ಹಲ್ಲೆಯಾದೀತು’ ಎಂದಿದ್ದ ಹೈಕೋರ್ಟ್​ ಆದೇಶ ರದ್ದು

    ನವದೆಹಲಿ: ಮಕ್ಕಳ ಲೈಂಗಿಕ ಶೋಷಣೆ ತಡೆಯಲು ಜಾರಿಗೊಳಿಸಲಾಗಿರುವ ಕಾನೂನಾದ ಪೋಕ್ಸೋ ಕಾಯ್ದೆಯಡಿ ಅಪರಾಧ ಸಾಬೀತಾಗಲು ನೇರ ಮೈಸ್ಪರ್ಶವಾಗಿರಲೇಬೇಕು ಎಂಬ ಬಾಂಬೆ ಹೈಕೋರ್ಟ್​ನ ತೀರ್ಪನ್ನು ಸುಪ್ರೀಂ ಕೋರ್ಟ್​​ ಅಲ್ಲಗಳೆದಿದೆ. 12 ವರ್ಷದ ಬಾಲಕಿಯೊಬ್ಬಳ ಸ್ತನಗಳನ್ನು ಬಟ್ಟೆಯ ಮೇಲಿಂದಲೇ ತಡಕಾಡಿದ್ದ 39 ವರ್ಷದ ಪುರುಷನೊಬ್ಬನಿಗೆ ಪೋಕ್ಸೊ ಕಾಯ್ದೆ ಅಡಿ ಸೆಷನ್ಸ್​ ಕೋರ್ಟ್​ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ.

    ಬಾಂಬೆ ಹೈಕೋರ್ಟ್​​ನ ನಾಗಪುರ ಪೀಠದ ನ್ಯಾಯಮೂರ್ತಿ ಪುಷ್ಪ ಗನೇಡಿವಾಲ ಅವರು, ಜನವರಿ 12 ರಂದು ಪೋಕ್ಸೊ ಅಡಿಯ ‘ಸ್ಪರ್ಶ’ ಎಂಬ ಶಬ್ದದ ವ್ಯಾಖ್ಯಾನ ಮಾಡುತ್ತಾ, ‘ಚರ್ಮಕ್ಕೆ ಚರ್ಮ’ ಸಂಪರ್ಕವಾಗಿಲ್ಲದಿದ್ದರೆ ಲೈಂಗಿಕ ಹಲ್ಲೆ ಎಂದು ಪರಿಗಣಿಸಲಾಗುವುದಿಲ್ಲ. ಆರೋಪಿಯು ಮಗುವಿನ ಬಟ್ಟೆಗಳನ್ನು ತೆಗೆಯದೆ ಹಾಗೇ ಸ್ತನಗಳನ್ನು ಮುಟ್ಟಿದ್ದರಿಂದ ಅದು ಪೋಕ್ಸೋ ಅಡಿ ಶಿಕ್ಷಾರ್ಹವಲ್ಲ, ಮಹಿಳೆಯ ಮರ್ಯಾದೆಗೆ ಭಂಗ ತಂದ ಅಪರಾಧದ ಪ್ರಸಂಗವಷ್ಟೇ ಎಂದು ತೀರ್ಪು ನೀಡಿದ್ದರು. ಜೊತೆಗೆ, ಸೆಷನ್ಸ್​ ಕೋರ್ಟ್​ ವಿಧಿಸಿದ್ದ 3 ವರ್ಷಗಳ ಜೈಲು ಶಿಕ್ಷೆಯನ್ನು ಬದಲಾಯಿಸಿದ್ದರು.

    ಇದನ್ನೂ ಓದಿ: ವಿಧಾನ ಪರಿಷತ್​ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನ ಬಿಜೆಪಿಗೆ: ಬಿಎಸ್​ವೈ

    ಈ ಹೈಕೋರ್ಟ್​ ಆದೇಶದ ವಿರುದ್ಧ ಸರ್ಕಾರ ಸಲ್ಲಿಸಿದ್ದ ಅಪೀಲಿಗೆ ಮನ್ನಣೆ ನೀಡಿರುವ ಸುಪ್ರೀಂ ಕೋರ್ಟ್​, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಜಾರಿಗೊಳಿಸಲಾದ ಪೋಕ್ಸೊ ಕಾಯ್ದೆಯಡಿ ಸ್ಪರ್ಶ ಎನ್ನುವುದಕ್ಕೆ ಚರ್ಮಕ್ಕೆ ಚರ್ಮ ತಾಕುವುದೆಂದು ‘ಸಂಕುಚಿತ ಮತ್ತು ಅಸಂಬದ್ಧ ವ್ಯಾಖ್ಯಾನ’ ನೀಡಿದಲ್ಲಿ ಅದು ಆ ಕಾಯ್ದೆಯ ಉದ್ದೇಶವನ್ನೇ ನಾಶಪಡಿಸಿದ ಹಾಗೆ ಎಂದು ಹೇಳಿದೆ.

    “ಬಟ್ಟೆಗಳ ಮೇಲಿಂದ ಲೈಂಗಿಕ ಉದ್ದೇಶದಿಂದ ಮುಟ್ಟುವುದೂ ಪೋಕ್ಸೋ ಅಡಿ ಬರುತ್ತದೆ. ನ್ಯಾಯಾಲಯಗಳು ಸರಳ ಶಬ್ದಗಳಲ್ಲಿ ಮತ್ಯಾವುದೋ ಅರ್ಥವನ್ನು ಹುಡುಕಲು ಅತಿರೇಕದ ಆಸಕ್ತಿ ತೋರಬಾರದು” ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್​, ಎಸ್​.ರವೀಂದ್ರ ಭಟ್​ ಮತ್ತು ಬೇಲಾ ತ್ರಿವೇದಿ ಅವರುಗಳನ್ನೊಳಗೊಂಡ ಸುಪ್ರೀಂ ಕೋರ್ಟ್​ ನ್ಯಾಯಪೀಠ ತಾಕೀತು ಮಾಡಿದೆ. (ಏಜೆನ್ಸೀಸ್)

    ಡಿಸಿ ಆದೇಶ ಮೀರಿ ಕೋಲಾರ ಪ್ರವೇಶಿಸಿದ ಪ್ರಮೋದ್​ ಮುತಾಲಿಕ್​… ವಶಕ್ಕೆ ಪಡೆದ ಪೊಲೀಸರು

    ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts